.DrAnjaliNimbalkar
suddibindu.ina
ದಾಂಡೇಲಿ: ಉತ್ತರಕನ್ನಡ ಲೋಕಸಭಾ ಕ್ಷೇತ್ರದ ನಮ್ಮ ಪಕ್ಷದ ಅಭ್ಯರ್ಥಿಯಾಗಿರುವ ಡಾ. ಅಂಜಲಿ ನಿಂಬಾಳ್ಕರ್ ಅವರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿಯವರು ಜಾತಿನಿಂದನೆ ಮಾಡಿದ್ದು,.ಈ ಬಗ್ಗೆ ದೂರು ದಾಖಲಾಗಿದ್ದು ತಕ್ಷಣ ಕ್ರಮ ಕೈಗೊಳ್ಳಬೇಕೆಂದು ದಾಂಡೇಲಿಯ ಮಹಿಳಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ರೇಣುಕಾ ಬಂದಂ ಒತ್ತಾಯಿಸಿದ್ದಾರೆ.

ಉತ್ತರ ಕನ್ನಡ ಲೋಕಾಸಭಾ ಕ್ಷೇತ್ರದ ನಮ್ಮ ಪಕ್ಷದ ಅಭ್ಯರ್ಥಿಯಾಗಿ ಡಾ.ಅಂಜಲಿ ನಿಂಬಾಳ್ಕರ್ ರವರು ಸ್ಪರ್ಧಿಸುತ್ತಿರುವುದು ನಮ್ಮ ಮಹಿಳೆಯರಿಗೆಲ್ಲಾ ಹೆಮ್ಮೆಯ ತಂದಿದೆ.ಈಗಾಗಲೇ ಜಿಲ್ಲೆಯಾದ್ಯಂತ ಒಂದು ಸುತ್ತಿನ ಪ್ರಚಾರ ಮಾಡುವ ಮೂಲಕ ಜಿಲ್ಲೆಯಲ್ಲಿ ಅವರ ಪರವಾದ ಕಾಂಗ್ರೆಸ್ ಅಲೆ ಸೃಷ್ಠಿಯಾಗಿದೆ. ರಾಜ್ಯ ಸರಕಾರದ ಗ್ಯಾರಂಟಿ ಯೋಜನೆಗಳನ್ನ ಅತ್ಯಂತ ಯಶಸ್ವಿ ಯಾಗಿ ಜಾರಿಗೊಳಿಸಿರುವುದರಿಂದ ಮಹಿಳೆಯರು ಡಾ.ಅಂಜಲಿ ನಿಂಬಾಳ್ಕರ್ ಅವರನ್ನ ಬೆಂಬಲಿಸಲಿದ್ದಾರೆನ್ನುವ ವಿಶ್ವಾಸ ಇದೆ.
ಇದನ್ನೂ ಓದಿ
- ಬಿಸಿಯೂಟಕ್ಕೆ ಬೆಳೆ ಇಲ್ಲದೆ ವಿದ್ಯಾರ್ಥಿಗಳಿಗೆ ಸಪ್ಪೆ ಊಟ
- ಇಂದಿನ ರಾಶಿಫಲ —ನಿತ್ಯದ ಪಂಚಾಂಗ
- ಇಂದಿನ ರಾಶಿಫಲ ಹಾಗೂ ನಿತ್ಯದ ಪಂಚಾಂಗ
ಸಾಮಾಜಿಕ ಜಾಲತಾಣಗಳಲ್ಲಿ ಜಾತಿನಿಂದನೆ ಆರೋಪ ಮಾಡಿರುವ ವ್ಯಕ್ತಿಯ ಮೇಲೆ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾದ ಆರ್.ಏಚ್.ನಾಯ್ಕರವರು ಕುಮಟ ಪೊಲೀಸ್ ಠಾಣೆ ಯಲ್ಲಿ ಎಫ್.ಆಯ್.ಆರ್.ದೂರು ದಾಖಲಿಸಿದ್ದು, ತಕ್ಷಣ ಅಪರಾಧಿಗಳನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳುಬೇಕೆಂದು ರೇಣುಕಾ ಬಂದಂ ಆಗ್ರಹಿಸಿದ್ದಾರೆ.





