suddibindu.in
ಕುಮಟಾ : ಲೋಕಸಭಾ ಚುನಾವಣೆಯಲ್ಲಿ (Lok Sabha Elections 2024) ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿ ಮಾಡಿಕೊಂಡು ಕ್ಷೇತ್ರ ಹಂಚಿಕೊಂಡಿದೆ.ಬಿಜೆಪಿ ಅಭ್ಯರ್ಥಿ (BJP candidate)ಪರ ಜೆಡಿಎಸ್ ನಾಯಕರು,ಜೆಡಿಎಸ್ ಪರ ಬಿಜೆಪಿ ನಾಯಕರು ಪ್ರಚಾರಕ್ಕಿಳಿದಿದ್ದಾರೆ.ಆದರೆ ಉತ್ತರಕನ್ನಡ ಜಿಲ್ಲೆಯ ಕುಮಟಾ ಕ್ಷೇತ್ರದಲ್ಲ ಎರಡು ಪಕ್ಷದ ನಡುವೆ ಬಿರುಕು ಮೂಡಿದೆ. ಜೆಡಿಎಸ್ ಮುಖಂಡರನ್ನ ವಿಶ್ವಾಸಕ್ಕೆ ತೆಗೆದುಕೊಳ್ಳದೆ ಬಿಜೆಪಿ ಪ್ರಚಾರ ನಡೆಸುತ್ತಿದೆ, ಇದು ಜೆಡಿಎಸ್ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದೆ, ಇದು ಅಭ್ಯರ್ಥಿ ಮೇಲೆ ಪರಿಣಾಮ ಉಂಟಾಗುವ ಸಾಧ್ಯತೆ ಇದೆ.
ಈಗಾಗಲೇ ಬಿಜೆಪಿ ಜೊತೆ ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದು, ಎರಡು ಪಕ್ಷದ ಹೈಕಮಾಂಡ ಸಹ ಸ್ಥಳೀಯ ನಾಯಕರೊಂದಿಗೆ ಹೊಂದಾಣಿಕೆ ಮಾಡಿಕೊಂಡು ಚುನಾವಣೆ ಎದುರಿಸುವಂತೆ ಸೂಚನೆ ಕೂಡ ನೀಡಿದೆ.ಆದರೆ ಕುಮಟಾ ವಿಧಾನಸಭಾ ಕ್ಷೇತ್ರದ ಜೆಡಿಎಸ್‌ನ ಪ್ರಭಾವಿ ಮುಖಂಡ ಹಾಗೂ ಲೋಕಸಭಾ ಚುನಾವಣಾ ಉಸ್ತುವಾರಿಯಾಗಿರುವ ಸೂರಜ್ ನಾಯ್ಕ ಸೋನಿ(Suraj Naik Soni)ಅವರಿಗಾಗಲಿ ಅಥವಾ ಜೆಡಿಎಸ್‌ನ ಇನ್ನೂಳಿದ ಯಾವ ಮುಖಂಡರನ್ನ ಸಂಪರ್ಕ ಮಾಡದ ಬಿಜೆಪಿ ಮುಖಂಡರು ತಮ್ಮಗೂ ಜೆಡಿಎಸ್‌ಗೂ ಮೈತ್ರಿ ಸಂಬಂಧವಿಲ್ಲ ಎನ್ನುವ ರೀತಿಯಲ್ಲಿ ಪ್ರಚಾರಕ್ಕೆ ಇಳಿದಿದ್ದಾರೆ.ಇದು ಜೆಡಿಎಸ್ ಮುಖಂಡರ ಕಣ್ಣು ಕೆಂಪಾಗಿಸಿದೆ.
ಇದನ್ನೂ ಓದಿ
- ಮಳೆಯ ಅಬ್ಬರ : ಕದ್ರಾ ಜಲಾಶಯದಿಂದ ನೀರು ಬಿಡುಗಡೆ
- ಶಿರಸಿ-ವಡ್ಡಿ ಘಟ್ಟ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅಡ್ಡಿ
- ಓದಿನ_ಮನೆಯಲ್ಲೊಂದಿಷ್ಟು…
ಸೂರಜ್ ನಾಯ್ಕ ಸೋನಿ ಅವರು ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಜೆಡಿಎಸ್ ನಿಂದ ಸ್ಪರ್ಧಿಸಿದ ಎಲ್ಲಾ ಅಭ್ಯರ್ಥಿಗಳಿಗಿಂತ ಅತೀ ಹೆಚ್ಚು ಮತಗಳನ್ನ ಪಡೆದು ದಾಖಲೆ ಮಾಡಿದ್ದಾರೆ, ಸೂರಜ್ ಸೋನಿ ಅವರು ಬಿಜೆಪಿ ಅಭ್ಯರ್ಥಿಯಾಗಿದ್ದ ಶಾಸಕ ದಿನಕರ ಶೆಟ್ಟಿ ಅವರ ವಿರುದ್ದ ಕೇವಲ600ಮತಗಳ ಅಂತರದಲ್ಲಿ ಪರಾಭವಗೊಂಡಿದ್ದಾರೆ. ಕ್ಷೇತ್ರದಲ್ಲಿ ಇಂದಿಗೂ ಅವರ ಹಿಡಿತ ಇದೆ.ಆದರೆ ಬಿಜೆಪಿ ಮುಖಂಡರು ಕ್ಷೇತ್ರದಲ್ಲಿ ಜೆಡಿಎಸ್ ವಿಶ್ವಾಸ ಪಡೆದು ಪ್ರಚಾರ ನಡೆಸಲು ಮುಂದಾಗುತ್ತಿಲ್ಲ. ರಾಜ್ಯ ಬಿಜೆಪಿ ನಾಯಕರು ಜೆಡಿಎಸ್ ಜೊತೆ ಒಗ್ಗೂಡಿ ಕೆಲಸ ಮಾಡಬೇಕು ಎಂದು ಖಡಕ್ ಸೂಚನೆ ನೀಡಿದರೂ ಕುಮಟಾ ಕ್ಷೇತ್ರದಲ್ಲಿ ಅದ್ಯಾಕೋ ಬಿಜೆಪಿ ಮುಖಂಡರು ಹೊಂದಾಣಿಕೆ ಮಾಡಿಕೊಂಡು ಚುನಾವಣೆ ಎದುರಿಸುವಂತೆ ಕಾಣತ್ತಾ ಇಲ್ಲ.
ಲೋಕಸಭಾ ಚುನಾವಣೆ ಘೋಷಣೆಯಾಗಿ ನಾಮಪತ್ರ ಸಲ್ಲಿಕೆ ದಿನ ಹತ್ತಿರವಾದರೂ ಬಿಜೆಪಿಯ ಒಬ್ಬರೇ ಒಬ್ಬ ಮುಖಂಡರು ಸ್ಥಳೀಯ ಜೆಡಿಎಸ್ ಮುಖಂಡರನ್ನ ಸಂಪರ್ಕವನ್ನ ಮಾಡಿ ಬೆಂಬಲಿಸುವಂತೆ ಕೇಳಿಕೊಂಡಿಲ್ಲ ಎನ್ನುವ ಬಗ್ಗೆ ಜೆಡಿಎಸ್‌ನ ಮುಖಂಡರೆ ಇದೀಗ ಚರ್ಚೆ ಮಾಡುತ್ತಿದ್ದಾರೆ.ಬಿಜೆಪಿಯಲ್ಲಿ ಈ ಬಾರಿ ಅಭ್ಯರ್ಥಿ ಬದಲಾವಣೆ ಮಾಡಿರುವ ಬಗ್ಗೆ ಎದ್ದಿರುವ ಅಸಮಧಾನವನ್ನ ಸರಿಪಡಿಸಿಕೊಳ್ಳುವುದೇ ಬಿಜೆಪಿಗೆ ದೊಡ್ಡ ತಲೆನೋವಾಗಿದ್ದು, ಇದೀಗ ಕುಮಟಾ ಕ್ಷೇತ್ರದಲ್ಲಿ ಮೈತ್ರಿ ಪಕ್ಷ ಜೆಡಿಎಸ್ ಜೊತೆ ಹೊಂದಾಣಿಕೆ ಮಾಡಿಕೊಳ್ಳದೆ ಜೆಡಿಎಸ್ ಪ್ರಾಬಲ್ಯ ಇರುವ ಕುಮಟಾ ಕ್ಷೇತ್ರದಲ್ಲೆ ಬಿಜೆಪಿ ಜೆಡಿಎಸ್ ಮುಖಂಡ ಹಾಗೂ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದ್ದು, ಇದು ಕಾಂಗ್ರೆಸ್ ಅಭ್ಯರ್ಥಿಗೆ ಹೆಚ್ಚಿನ ಲಾಭ ಆಗುವ ಎಲ್ಲಾ ಸಾಧ್ಯತೆಗಳು ಹೆಚ್ಚಾಗಿದೆ.