suddibindu.in
New Delhi:ನವದೆಹಲಿ: ಲೋಕಸಭಾ ಚುನಾವಣೆಗಾಗಿ (Lok Sabha elections) ಬಿಜೆಪಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಸೇರಿದಂತೆ 40ಮಂದಿ ಕರ್ನಾಟಕದ ಲೋಕಸಭೆ ಚುನಾವಣೆಗೆ ಬಿಜೆಪಿಯ ಸ್ಟಾರ್ ಪ್ರಚಾರಕರ ಪಟ್ಟಿಯ ಸಿದ್ದಪಡಿಸಿದ್ದು, ಇದರಲ್ಲಿ ಉತ್ತರಕನ್ನಡ ಲೋಕಸಭಾ ಕ್ಷೇತ್ರ ಸಂಸದ ಫೈಯರ್ ಬ್ರಾಂಡ್ ಅನಂತಕುಮಾರ ಹೆಗಡೆ (Ananth Kumar Hegde) ಅವರನ್ನ ಕೈ ಬಿಡಲಾಗಿದೆ.
ಉತ್ತರಕನ್ನಡ ಲೋಕಸಭಾ ಕ್ಷೇತ್ರದಿಂದ ಆರು ಭಾರಿ ಸಂಸದರಾಗ ಆಯ್ಕೆ ಆಗಿ ಒಮ್ಮೆ ಮೋದಿ ಅವರ ಸರಕಾರದಲ್ಲಿ ಸಚಿವರಾಗಿ ಕಾರ್ಯನಿರ್ವಹಿಸಿದ್ದ ಹಿಂದೂ ಪರ ಹೋರಾಟಗಾರರಾಗಿದ್ದ ಅನಂತಕುಮಾರ ಹೆಗಡೆ ಅವರು ತಮ್ಮ ಹಿಂದುತ್ವ ಮೂಲಕವೆ ರಾಜ್ಯದಲ್ಲಿ ಗಮನಸೆಳೆದಿದ್ದ ಅನಂತಕುಮಾರ ಹೆಗಡೆ ಅವರಿಗೆ ಈ ಭಾರಿ ಲೋಕಸಭಾ ಟಿಕೆಟ್ ತಪ್ಪಿಸಲಾಗಿದೆ. ಟಿಕೆಟ್ ಕೈ ತಪ್ಪಿದರೂ ಕೂಡ ಅವರನ್ನ ಈ ಭಾರೀಯ ಲೋಕಸಭಾ ಚುನಾವಣೆಯಲ್ಲಿ ಪಕ್ಷ ಅವರನ್ನ ಸ್ಟಾರ್ ಪ್ರಚಾರಕರನ್ನಾಗಿ ಮಾಡಬಹುದು ಎಂದು ಅವರ ಅಭಿಮಾನಿಗಳಿ ಸಾಕಷ್ಟು ನಿರೀಕ್ಷೆ ಹೊಂದಿದ್ದರು.
ಇದನ್ನೂ ಓದಿ
- ರೇಬೀಸ್ ಹೋರಿಯಿಂದ ರಂಪಾಟ: ವ್ಯಕ್ತಿಗೆ ತಿವಿತ
- 85 ಸಾವಿರ ನಗದು, ಚಿನ್ನ ಕದ್ದ ಆರೋಪಿ ಬಂಧನ
- ಅರ್ಪಿತಾಗೆ ವಿಟಿಯುನಿಂದ ಡಾಕ್ಟರೇಟ್
ಆದರೆ ಇಂದು ಕರ್ನಾಟಕದಲ್ಲಿ ನಡೆಯುವ ಲೋಕಸಭಾ ಚುನಾವಣೆಗಾಗಿ 40ಮಂದಿ ಬಿಜೆಪಿ ನಾಯಕರನ್ನ ಸ್ಟಾರ್ ಪ್ರಚಾರಕ್ಕರನ್ನಾಗಿ ನೇಮಕ ಮಾಡಿದೆ. ಆದರೆ ಉತ್ತರಕನ್ನಡ ಸಂಸದರಾಗಿದ್ದ ಅನಂತಕುಮಾರ ಹೆಗಡೆ ಅವರನ್ನ ಕೈ ಬಿಡಲಾಗಿದ್ದು, ಪಕ್ಷದಲ್ಲಿ ಯಾವುದೇ ಸ್ಥಾನ-ಮಾನ ನೀಡದಂತೆ ಮೋದಿ & ಟೀಂ, ಮಾಡಿದ್ದು,ಇದರಿಂದಾಗಿ ಅನಂತಕುಮಾರ ಹೆಗಡೆ ಪಕ್ಷದಲ್ಲಿ ಇನ್ನಷ್ಟು ದೂರಕ್ಕೆ ಸರಿಯುವಂತಾಗಿದೆ. ಒಟ್ಟಿಲ್ಲ ಮಾಡಿದ್ದುಣ್ಣೋ ಮಹಾರಾಯ ಎನ್ನುವಂತಾಗಿದೆ ಎಂದು ವಿರೋಧ ಪಕ್ಷದವರು ಆಡಿಕೊಳ್ಳುತ್ತಿದ್ದಾರೆ.