ಸುದ್ದಿಬಿಂದು ಬ್ಯೂರೋ
ಕುಮಟಾ : ರಾಜ್ಯಾದ್ಯಂತ ಬಿಜೆಪಿ ಜಿಲ್ಲಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆದಿದ್ದು, ಉತ್ತರಕನ್ನಡ ಜಿಲ್ಲೆಯ ಬಿಜೆಪಿ ಜಿಲ್ಲಾಧ್ಯಕ್ಷರಾಗಿ ಎನ್ ಎಸ್ ಹೆಗಡೆ ಅವರನ್ನ ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.
ಈ ಮೊದಲು ಕುಮಟಾದ ವೆಂಕಟೇಶ ನಾಯ್ಕ ಅವರು ಬಿಜೆಪಿ ಸಂಘಟನೆಯಲ್ಲು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಿದ್ದಾರೆ.ಅವರ ಅಧಿಕಾರ ಅವಧಿ ಮುಕ್ತಾಯವಾಗಿದ್ದು, ಇದೀಗ ನೂತನ ಜಿಲ್ಲಾಧ್ಯಕ್ಷರಾಗಿ ಎನ್ ಎಸ್ ಹೆಗಡೆ ಅವರನ್ನ ನೇಮಕ ಮಾಡಲಾಗಿದೆ. ಎನ್ ಎಸ್ ಹೆಗಡೆ ಅವರು ಅನೇಕ ವರ್ಷಗಳಿಂದ ಬಿಜೆಪಿಯ ವಿವಿಧ ಸಂಘಟನಾ ಕಾರ್ಯವನ್ನ ನಿರ್ವಹಿಸಿದ್ದು, ಇದೀಗ ಅವರಿಗೆ ಜಿಲ್ಲಾಧ್ಯಕ್ಷ ಸ್ಥಾನ ಲಭಿಸಿದೆ..



 
 
 
 

