ಸುದ್ದಿಬಿಂದು ಬ್ಯೂರೋ
Kumta ಕುಮಟಾ: ಉತ್ತರಕನ್ನಡ ಜಿಲ್ಲೆಯ. ಕುಮಟಾ ತಾಲೂಕಿನ ಬರ್ಗಿ ಗ್ರಾಮದಲ್ಲಿನ ಶ್ರೀ ಮಹಾಲಿಂಗೇಶ್ವರ ಹಾಗೂ ಪರಿವಾರ ದೇವರ ಜಾತ್ರೆ ಇಂದು ಜ.15-16ರಂದು ನಡೆಯಿಲಿದೆ.

ಇಂದು ಜನವರಿವ15ರಂದು ರಾತ್ರಿ ಜಾತ್ರೆಯಾದ್ರೆ ನಾಳೆ 16ರಂದು ಹಗಲು ಜಾತ್ರೆ ನಡೆಯಲಿದೆ. ಮಹಾಲಿಂಗೇಶ್ವರ, ಯಜಮಾನ ಹಾಗೂ ಘಟಬೀರ ದೇವರ ಜಾತ್ರೆ ಅತೀ ವಿಜ್ರಂಭಣೆಯಿಂದ ನಡೆಯಲಿದೆ. ಶ್ರೀ ದೇವರ ಜಾತ್ರೆಗೆ ಕೇವಲ ಬರ್ಗಿ ಗ್ರಾಮದಲ್ಲಿನ ಭಕ್ತರಷ್ಟೆ ಅಲ್ಲದೆ ಜಿಲ್ಲೆಯ ನಾನಾ ಕಡೆಯಿಂದ ಸಾವಿರಾರು ಭಕ್ತರು ಪ್ರತಿವರ್ಷ ಜಾತ್ರೆಗೆ ಆಗಮಿಸುತ್ತಾರೆ.

ಈ ಜಾತ್ರೆಗೆಯಲ್ಲಿ ಘಟಭೀರ ದೇವರಿಗೆ ತುಲಬಾರ ಸೇವೆ, ಹಣ್ಣುಕೊನೆ ಸೇವೆ ವಿವಿಧ ಸೇವಗಳನ್ನ ಕೂಡ ಸಲ್ಲಿಸಬಹುದಾಗಿದೆ. ಈ ಹಿಂದೆ ದೇವರಲ್ಲಿ ಪ್ರಾರ್ಥಿಸಿಕೊಂಡವರು ತಮ್ಮ ಇಷ್ಠಾರ್ಥ ಸಿದ್ದಿಯಾದ ಬಳಿಕ ಇಲ್ಲ ತಮ್ಮ‌ಕಷ್ಟವೆಲ್ಲಾ ದೂರವಾಗುವಂತೆ ದೇವರಿಗ ತುಲಾಬಾರ ಸೇವೆಯನ್ನ ಸಹ ಸಲ್ಲಿಸುತ್ತಾರೆ. ಹೀಗಾಗಿ ಬರ್ಗಿಯಲ್ಲಿ ಎರಡು ದಿನ ನಡೆಯುವ ಬರ್ಗಿಯ ಸಂಕ್ರಾಂತಿ ಜಾತ್ರೆ ಅತೀ ಸಂಭ್ರಮ,ಸಡಗರದಿಂದ ನಡೆಯಲಿದೆ.

ಜಾತ್ರಾ ಪ್ರಯುಕ್ತ ನಾಟಕ
ಸಂಕ್ರಾಂತಿ ಜಾತ್ರಾ ಪ್ರಯುಕ್ತವಾಗಿ ಶ್ರೀ ಗೋಳಿಬೀರ ನಾಟ್ಯ ಮಂಡಳಿ ಗೆಳಯರ ಬಳಗ ಬರ್ಗಿ ಇವರಿಂದ 25ನೇ ವರ್ಷದ ಕಲಾಕುಸಮವಾಗಿ ಬಡವನ ಒಡಲು, ಬೆಂಕಿಯ ಸಿಡಿಲು ಎಂಬ ಕ್ರಾಂತಿಕಾರಿ ನಾಟಕ ಪ್ರದರ್ಶನಗೊಳ್ಳಲಿದೆ.ಕಳೆದ 24ವರ್ಷಗಳಿಂದ ಬರ್ಗಿ ಊರಿನ ಸ್ಥಳೀಯ ಕಲಾವಿದರು ಸಂಕ್ರಾಂತಿ ಜಾತ್ರಾ ಅಂಗವಾಗಿ ನಿರಂತರವಾಗಿ ನಾಟಕ ಪ್ರದರ್ಶನ ನೀಡುತ್ತಾ ಬಂದಿದ್ದು, ಈ ಭಾರಿ 25ನೇ ವರ್ಷಕ್ಕೆ ಕಾಲಿಟ್ಟಿದೆ.