ಸುದ್ದಿಬಿಂದು ಬ್ಯೂರೋ ವರದಿ

ಕಾರವಾರ:ರಾಮಾಯಣದಲ್ಲಿ ಶ್ರೀರಾಮನು ಧರ್ಮ, ಸತ್ಯ, ತಾಳ್ಮೆಯಿಂದ ಇದ್ದರು, ಇನ್ನೂ  ಲಕ್ಷ್ಮಣನು ಅಣ್ಣನ ಮೇಲಿನ ಅಪಾರ ಪ್ರೀತಿ, ನಿಷ್ಠೆ ಮತ್ತು ತ್ಯಾಗದ ಪ್ರತೀಕವಾಗಿದ್ದ. ರಾಮನ ಸುಖದುಃಖಗಳಲ್ಲಿ ಸದಾ ಜೊತೆಯಾಗಿ ನಿಂತ ಲಕ್ಷ್ಮಣ, ವನವಾಸದಲ್ಲೂ ಅಣ್ಣನನ್ನು ಬಿಟ್ಟು ದೂರವಾಗಲಿಲ್ಲ. ಆದರೆ ಕಾರವಾರ ರಾಜಕೀಯಲ್ಲಿ ಅಂದು ರಾಮ-ಲಕ್ಷ್ಮಣ ಎಂದವರು ಇಂದು ಒಂದೊಂದು ದಿಕ್ಕಿನಲ್ಲ ಧಿಕ್ಕಾಪಾಲಾಗಿ ಓಡುತ್ತಿದ್ದಾರೆ.

2023ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಸೈಲ್ ಅವರ ಪರವಾಗಿ ತಮ್ಮದೇ‌ ಪಕ್ಷದ ಅಧಿಕೃತ ಅಭ್ಯರ್ಥಿಯನ್ನ ಸೋಲಿಸಲೇ ಬೇಕೆಂದು ಜೆಡಿಎಸ್ ಮುಖಂಡ ಆನಂದ್ ಅಸ್ನೋಟಿಕರ್, ಅಂದು ಕಾಂಗ್ರೆಸ್ ಅಭ್ಯರ್ಥಿಯ ಗೆಲುವಿಗಾಗಿ ಶ್ರಮಿಸಿದರು ಅದು ಅಲ್ಲದೇ ಹೋದ ಕಡೆಯಲ್ಲೆಲ್ಲಾ ನಾವಿಬ್ಬರೂ ರಾಮ–ಲಕ್ಷ್ಮಣ”, “ಜೋಡೆತ್ತು” ಎಂಬ ಪದಗಳಿಂದ ಬಣ್ಣಿಸಿದ್ದರು. ಚುನಾವಣಾ ಸಂದರ್ಭದಲ್ಲಿ ಒಟ್ಟಾಗಿ ಕಾಣಿಸಿಕೊಂಡಿದ್ದ ಈ ಜೋಡಿ, ರಾಜಕೀಯವಾಗಿ ಪರಸ್ಪರ ಬೆಂಬಲ ನೀಡಿದ್ದರು. ಆದರೆ ಐದೇ ವರ್ಷದಲ್ಲಿ ಪರಿಸ್ಥಿತಿ ಸಂಪೂರ್ಣವಾಗಿ ಬದಲಾಗಿದೆ. “ರಾಮನಿಗೆ ಬಿಟ್ಟು ಲಕ್ಣ್ಮಣನೋ, ಅಥವಾ ಲಕ್ಷ್ಮಣನಿಗೆ ಬಿಟ್ಟು ರಾಮ‌ ಓಡಿ ಹೋದನೋ ಎನ್ನುವುದು ಕ್ಷೇತ್ರದ ಮತದಾರರಿಗೆ ತಿಳಿಯದಂತಾಗಿದೆ.

ಶಾಸಕ ಸತೀಶ್ ಸೈಲ್ ವಿರುದ್ಧ ಅಸ್ನೋಟಿಕರ್ ಅವರ ಇತ್ತೀಚಿನ ಹೇಳಿಕೆಗಳು ಹಾಗೂ ಟೀಕೆಗಳು ಹಿಂದಿನ ಆಪ್ತತೆಯೊಂದಿಗೆ ಹೋಲಿಕೆ ಮಾಡುವಂತೆ ಮಾಡಿವೆ.‌ಅಂದು ಜೋಡೆತ್ತಿನಂತೆ ಹೆಜ್ಜೆ ಹಾಕಿದವರಲ್ಲಿ ಒಬ್ಬರೂ, ಕಾಳಿ ನದಿ ದಾಟಿ ಓಡುತ್ತಿದ್ದರೆ, ಇನ್ನೊಬ್ಬರು ನಿತ್ಯ ಬೆಳಿಗ್ಗೆ ಎಂ‌ ಜೆ ರಸ್ತೆಯಲ್ಲಿ ಅಡ್ಡಾಡುವಂತಾಗಿದೆ. ಅಂದು ರಾಮ–ಲಕ್ಷ್ಮಣ ಎಂದವರು.ಇಂದು ಒಬ್ಬರನೊಬ್ಬರು ಕಂಡರೆ ಬದ್ಧ ವೈರಿಗಳಂತೆ ಆಡುತ್ತಿದ್ದಾರೆ.

ಇವರಿಬ್ಬರ ರಾಮ-ಲಕ್ಷ್ಮಣರ ನಾಟಕವನ್ನ ಗಮನಿಸುತ್ತಿರುವ ಕ್ಷೇತ್ರದ ಜನತೆ ಮುಂದೆ ಏನು ಮಾಡಬೇಕು ಎನ್ನುವ ಬಗ್ಗೆ ಈಗಾಗಲೇ ತೀರ್ಮಾನಿಸಿಕೊಂಡಿರುವಂತಿದೆ….