ಸುದ್ದಿಬಿಂದು ಬ್ಯೂರೋ ವರದಿ
ಬೆಂಗಳೂರು: ಸ್ಟಿಂಗ್ ಆಪರೇಷನ್ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿರುವ ಸಿಸಿಬಿ ಪೊಲೀಸರು, ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಮೂಲದ ರಿತೇಶ್ ಪಾಂಡೆ ಎಂಬಾತನನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ದೆಹಲಿಯಿಂದ ಕರೆತರುತ್ತಿರುವ ಪೊಲೀಸರು, ಪ್ರಕರಣದ ವಿವಿಧ ಆಯಾಮಗಳ ಕುರಿತು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.
ಸ್ಟಿಂಗ್ ಆಪರೇಷನ್ ನಡೆಸುವ ಉದ್ದೇಶದಿಂದಲೇ ಆರೋಪಿ ಹಳೆಯ ಮೊಬೈಲ್ ಫೋನ್ ಖರೀದಿಸಿದ್ದ ಎಂಬ ಮಾಹಿತಿ ತನಿಖೆಯ ವೇಳೆ ಮಹತ್ವ ಪಡೆದಿದೆ. ಈ ಮೊಬೈಲ್ ಖರೀದಿಯ ಹಿಂದಿನ ಉದ್ದೇಶವೇನು? ಸ್ಟಿಂಗ್ ಆಪರೇಷನ್ನಲ್ಲಿ ಆತನ ಪಾತ್ರವೇನು? ಪ್ರಕರಣದಲ್ಲಿ ಇನ್ನೂ ಯಾರಾದರೂ ಭಾಗಿಯಾಗಿದ್ದಾರೆಯೇ ಎಂಬುದರ ಕುರಿತು ಸಿಸಿಬಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ರಿತೇಶ್ ಪಾಂಡೆ ಬಂಧನದಿಂದ ಪ್ರಕರಣದ ತನಿಖೆಗೆ ಮಹತ್ವದ ಸುಳಿವುಗಳು ಲಭ್ಯವಾಗುವ ನಿರೀಕ್ಷೆಯಿದ್ದು, ವಿಚಾರಣೆಯ ಬಳಿಕ ಮತ್ತಷ್ಟು ಮಾಹಿತಿ ಬಹಿರಂಗವಾಗುವ ಸಾಧ್ಯತೆಯಿದೆ.

