ಸುದ್ದಿಬಿಂದು ಬ್ಯೂರೋ ವರದಿ
ಅಂಕೋಲಾ: ತಾಲೂಕಿನ ಅವರ್ಸಾ ಮತ್ತು ಸುತ್ತ ಮುತ್ತ ಊರಿನ ಜನರಿಗೆ ಉಚಿತ ಆರೋಗ್ಯ ಸೇವೆ ನೀಡುವ ನಿಟ್ಟಿನಲ್ಲಿ ಸಾಯಿ ಸ್ವಾಸ್ತ್ಯ ಕ್ಷೇಮ ಕೇಂದ್ರವನ್ನ ಇ ವಿದ್ಯುಕ್ತವಾಗಿ ಉದ್ಘಾಟಿಸಲಾಯಿತು…

ಶ್ರೀಮಧುಸೂದನ ಸಾಯಿ ವೈದ್ಯಕೀಯ ವಿಜ್ಞಾನ ಸಂಶೋಧನಾ ಸಂಸ್ಥೆ ಮತ್ತು ಅವರ್ಸಾ ಶ್ರೀಕಾತ್ಯಾಯನಿ ಬಾಣೇಶ್ವರ ದೇವಾಲಯ ಟ್ರಸ್ಟ್ ಇವರ ಸಹಯೋಗದೊಂದಿಗೆ ಅವರ್ಸಾ ಶ್ರೀಕಾತ್ಯಾಯನಿ ಬಾಣೇಶ್ವರ ದೇವಾಲಯದ ವಸತಿ ಸ್ಥಳದಲ್ಲಿ ಸಾಯಿ ಕ್ಷೇಮ ಕೇಂದ್ರ ಸ್ಥಾಪಿಸಲಾಗಿದೆ…

ಸ್ವಾಸ್ತ್ಯ ಕೇಂದ್ರ ಉದ್ಘಾಟಿಸಿ ಮಾತಾಡಿದ ಶ್ರೀ ಕಾತ್ಯಾಯನಿ ಬಾಣೇಶ್ವರ ದೇವಾಲಯದ ಟ್ರಸ್ಟ್ ನ ಅಧ್ಯಕ್ಷ ಪದ್ಮನಾಭ ಪ್ರಭು ಸಾಯಿ ಸ್ವಾಸ್ತ್ಯ ಕ್ಷೇಮ ಕೇಂದ್ರದ ಉಪಯೋಗ ಜನರು ಪಡೆದುಕೊಳ್ಳಬೇಕು, ಅವರ್ಸಾ ಗ್ರಾಮದಲ್ಲಿ ಯಶಸ್ಸಿನ ದಾರಿಯತ್ತ ಸಾಗಿಸಿದರೆ ಮುಂದಿನ ದಿನದಲ್ಲಿ ಆಸ್ಪತ್ರೆ ಕಟ್ಟಡ ನಿರ್ಮಾಣ ಮಾಡಿ ಸೇವೆ ನೀಡಲು ತಾವು ಸಿದ್ದರಾಗ್ತೇವೆ ಎಂದರು, ಮುಂದಿನ ದಿನದಲ್ಲಿ ಕಾತ್ಯಾಯನಿ ಟ್ರಸ್ಟ್ ಸಾಯಿ ಸ್ವಾಸ್ತ್ಯ ಕೇಂದ್ರದ ಸಹಯೋಗದೊಂದಿಗೆ ಉತ್ತಮ ಸೇವೆ ನೀಡುತ್ತೇವೆ ಎಂದರು…

ಶ್ರೀ ಸತ್ಯ ಸಾಯಿ ಸ್ವಾಸ್ತ್ಯನಿಕೇತನಂ ಪಿ.ಆರ್.ಒ ಆರ್.ಜಿ ಪ್ರಭು ಮಾತನಾಡಿ ಸಮಾಜ ನಮಗೆ ಏನು ಮಾಡಿತು ಎನ್ನೋದಕ್ಕಿಂತ ಸಮಾಜಕ್ಕೆ ನಾವೇನು ಮಾಡಿದ್ದೆವೆ ಎನ್ನೋದು ಮುಖ್ಯ ಆ ದಿಸೆಯಲ್ಲಿ ಇವತ್ತು ಸತ್ಯ ಸಾಯಿ ಟ್ರಸ್ಟ್ ಸಮಾಜದ ಒಳತಿಗಾಗಿ ಸೇವೆ ಸಲ್ಲಿಸುತ್ತಿದೆ ಎಂದರು, ದೇವಿ ಕಾತ್ಯಾಯನಿ ಆಶೀರ್ವಾದ ದಿಂದ ಅವರ್ಸಾದಲ್ಲಿ ಸ್ವಾಸ್ತ್ಯ ಕ್ಷೇಮ ಕೇಂದ್ರ ಉದ್ಘಾಟನೆ ಆಗಿದೆ…ಮುಂದೆ ಇದರ ಸದುಪಯೋಗ ಊರಿನ ಜನ ಪಡೆದುಕೊಳ್ಳಬೇಕು ಎಂದರು..

ಶ್ರೀ ಕಾತ್ಯಾಯನಿ ಶಿಕ್ಷಣ ಸಂಸ್ಥೆಯ ಪ್ರಮುಖ ಉಲ್ಲಾಸ ರೇವಣಕರ್ ಮಾತನಾಡಿ 1968ರಲ್ಲಿ ಸತ್ಯ ಸಾಯಿಬಾಬಾ ರವರು ಅವರ್ಸಾಕ್ಕೆ ಬಂದು ಹೋಗಿದ್ದು ನೆನಪು ಅವರ ಆಶೀರ್ವಾದ ದಿಂದ ಇವತ್ತು ಸಾಯಿ ಸ್ವಾಸ್ತ್ಯ ಕ್ಷೇಮ ಕೇಂದ್ರ ಉದ್ಘಾಟನೆ ಆಗಿರೋದು ನಮ್ಮ ಹೆಮ್ಮೆ ಎಂದರು. ಬಳಿಕ ಕಾರವಾರದ ಬೇಳೂರಿನ ಸತ್ಯಸಾಯಿ ಸತ್ವನಿಕೇತನಂ ಪ್ರಧಾನ ಪಾಲಕ ಎಚ್.ಎಸ್ ಗಿರೀಶ್ ಮಾತನಾಡಿ ಸತ್ಯಸಾಯಿ ಬಾಬಾರವರು ಸಂಕಷ್ಟದಲ್ಲಿ ಇರುವರಿಗೆ ಸುಖದ ದಾರಿ ತೋರಿಸಿದ ಪವಾಡ ಪುರುಷ..ಆರೋಗ್ಯ ಕ್ಷೇತ್ರದಲ್ಲಿ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಇವತ್ತು ಸತ್ಯಸಾಯಿ ಟ್ರಸ್ಟ್ ಅಂತರಾಷ್ಟ್ರೀಯ ಮಟ್ಟದಲ್ಲಿ ಸೇವೆ ಸಲ್ಲಿಸುತ್ತಿರೋದು ಹೆಮ್ಮೆ ಎಂದರು..

ಕಾರ್ಯಕ್ರಮದ ಅಧ್ಯಕ್ಷತೆಯನ್ನ ಸವಿತಾ ಆಗೇರ್ ವಹಿಸಿದ್ದರು, ಕ್ಷೇಮ ಕೇಂದ್ರದ ನರ್ಸ್ ಶ್ವೇತಾ ದರ್ಶನ  ನಾಯ್ಕ್‌ ಮಾತನಾಡಿದರು.

ಕಾರ್ಯಕ್ರಮದಲ್ಲಿ ಕಾತ್ಯಾಯನಿ ಬಾಣೇಶ್ವರ ದೇವಾಲಯದ ಪ್ರಮುಖರಾದ ಗಿರೀಶ್ ಕಿಣಿ, ಚಿಕ್ಕಬಳ್ಳಾಪುರ ಮುದ್ದೇನಹಳ್ಳಿಯ ಸತ್ಯಸಾಯಿ ಟ್ರಸ್ಟ್ ನ ಮ್ಯಾನೇಜರ್ ಗೋಪಿನಾಥ ಖಾರ್ವಿ, ಪ್ರಮುಖರಾದ ಗುರುದಾಸ ಬಾನಾವಳಿ ಹಾಜರಿದ್ದರು, ಕಾತ್ಯಾಯನಿ ಬಾಣೇಶ್ವರ ದೇವಾಲಯದ ಮುಖ್ಯ ಪುರೋಹಿತ ಗಣೇಶ್ ಭಟ್ ಧಾರ್ಮಿಕ ಕಾರ್ಯನೆರವೇರಿಸಿದರು…

ಕಾರ್ಯಕ್ರಮವನ್ನ ವನೀತಾ ಮತ್ತು ಅಶೋಕ ಗಾಂವಕರ್ ನಿರೂಪಿಸಿದರು, ನಿವೃತ್ತ ಮುಖ್ಯೋದ್ಯಾಪಕ ಸತೀಶ್ ಪ್ರಭು ಸ್ವಾಗತಿಸಿದರು, ಭಾನುದಾಸ್ ರೇವಣಕರ್ ಕಾರ್ಯಕ್ರಮದ ಸಂಪೂರ್ಣ ಜವಾಬ್ದಾರಿ ನಿವರ್ಹಿಸಿದರು

ಇದನ್ನೂ ಓದಿ/ಶಬರಿಮಲೆ ಯಾತ್ರಿಕರಿಗೆ ಮಿದುಳು ತಿನ್ನುವ ಅಮೀಬಾದ ಭೀತಿ: ಆರೋಗ್ಯ ಇಲಾಖೆಯಿಂದ ಎಚ್ಚರಿಕೆ