ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ: ನಗರದ ಬಸ್ ನಿಲ್ದಾಣ ಎದುರಿನ ಬಾಲಾಜಿ ಸ್ಟೋರ್ಸ್ ನಲ್ಲಿ ನಡೆದ ಕಳ್ಳತನದ ಘಟನೆ ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ಸಂಚಲನ ಸೃಷ್ಟಿಸಿದೆ.
ಸೋಮವಾರ ರಾತ್ರಿ ಸುಮಾರು 7.20ರ ವೇಳೆಗೆ ಗ್ರಾಹಕರ ವೇಷದಲ್ಲಿ ಅಂಗಡಿಗೆ ಬಂದ ವ್ಯಕ್ತಿಯೊಬ್ಬ ಕೌಂಟರ್ ಮೇಲೆ ಇಟ್ಟಿದ್ದ ಮೊಬೈಲ್ ಫೋನ್ನ್ನು ಕ್ಷಣಾರ್ಧದಲ್ಲೇ ಎತ್ತಿಕೊಂಡು ಸ್ಥಳದಿಂದ ಪರಾರಿಯಾಗಿದ್ದಾನೆ. ಮೊಬೈಲ್ ಕಳ್ಳತನದ ದೃಶ್ಯ ಇದೀಗ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಅಗುತ್ತಿದ್ದು, ಕಳ್ಳನ ಗುರುತಿ ಪತ್ತಯಾದಲ್ಲಿ ಮಾಹಿತಿ ನೀಡುವಂತೆ ಅಂಗಡಿ ಮಾಲೀಕರು ಸಾರ್ವಜನಿಕರಲ್ಲಿ ವಿನಂತಿಸಿದ್ದಾರೆ. ಈ ಸಂಬಂಧ ಕಾರವಾರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,ಪೊಲೀಸರು ತನಿಖೆ ನಡೆಸುತ್ತಿದ್ದಾರೆ..
ಇದನ್ನೂ ಓದಿ/ಹೆದ್ದಾರಿಯಲ್ಲಿ ಟಿಪ್ಪರ್- ಸ್ಕೂಟರ್ ಅಪಘಾತ : ಮಹಿಳೆ ಸ್ಥಳದಲ್ಲೇ ಸಾವು, ಪುಟ್ಟ ಮಕ್ಕಳಿಬ್ಬರೂ ಗಂಭೀರ