ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ: ಉತ್ತರ ಕನ್ನಡದಲ್ಲಿ ಈಗ ಎಲ್ಲೆ ಕೇಳಿದರೂ ಒಂದೇ ಮಾತು…”ನಾನು ಅಷ್ಟು ಗುಂಡಿ ಲೆಕ್ಕ ಮಾಡಿದೆ,”
“ಇಷ್ಟು ಗುಂಡಿ ಲೆಕ್ಕ ಮಾಡಿದೆ,” ಅನ್ನೋದು. ಇನ್ನೊಂದೆಡೆ, “ಇವರು ಲೆಕ್ಕ ಮಾಡುವ ಗುಂಡಿಯಲ್ಲಿ ಹೋಗಿ ನಾನು ಕುಂಡಿ ನೋಯಿಸಿಕೊಂಡೆ,” ಅನ್ನೋದು.
ಇದನ್ನ ಬಿಟ್ಟರೆ ಬೇರೆ ಯಾವ ಮಾತೂ ಕೇಳುತ್ತಿಲ್ಲ.

ಚಹಾ ಅಂಗಡಿಯಲ್ಲಿ ಕುಳಿತಿದ್ದ ಸೋಮಪ್ಪ ಹೇಳ್ತಾ ಇದ್ದ
“ಬೈಕ್‌ನಲ್ಲಿ ರಸ್ತೆಯಲ್ಲಿ ಬಂದು ಕುಂಡಿ ನೋವಾಯ್ತು. ಅದಕ್ಕೆ ಸ್ವಲ್ಪ ಹೊತ್ತು ಆರಾಮ ತೆಗದುಕೊಂಡು ಹೋಗೋಣ ಅಂತ ಇಲ್ಲೇ ನಿಂತೆ. ಆಗ ಯಾರೋ ಒಬ್ಬ ಬಂದು ಗುಂಡಿ ಲೆಕ್ಕ ಮಾಡ್ತಾ ಇದ್ದ. ಗುಂಡಿ ತುಂಬೋದಕ್ಕೆ ಜಲ್ಲಿ, ಮಣ್ಣು ಎಷ್ಟು ಬೇಕು ಅಂತ ಲೆಕ್ಕ ಹಾಕ್ತಾ ಇದ್ದಾನಂತಾ ನೋಡದೆ.ಮೊದಲು ನೋಡಿದಾಗ ಅರ್ಥ ಆಗ್ಲಿಲ್ಲ. ಆದರೆ ಬಳಿಕ ಗೊತ್ತಾಯ್ತು –ಅವನು ಲೆಕ್ಕ ಹಾಕಿದ್ದು ಗುಂಡಿ ತುಂಬೋದು ಅಲ್ಲ, ಗುಂಡಿಗಳ ಸಂಖ್ಯೆ!”

ಸೋಮಪ್ಪ ಕೆಂಗಣ್ಣಿನಿಂದ ಕೇಳಿದ –
“ಇವರು ವರ್ಷ ಪೂರ್ತಿ ಈ ಗುಂಡಿ ಲೆಕ್ಕ ಮಾಡೋದಲ್ಲೇ ಕಾಲ ಕಳೆಯ್ತಾ ಇದ್ದರೆ, ದುರಸ್ತಿ ಮಾಡೋದು ಯಾರು?” ಇನ್ನೊಂದು ಸಮಸ್ಯೆ ಏನಂತೀರಾ…ಈ ರಸ್ತೆ ಸರಿಯಿಲ್ಲ ಅನ್ನೋದು ಗೊತ್ತಾಗಿ,ಮತ್ತೊಂದು ರಸ್ತೆಗೆ ಹೋದರೆ, ಅದು ಇದಕ್ಕಿಂತಲೂ ಕೆಟ್ಟದಾಗಿದೆ. ಅಲ್ಲಿ ಬಿದ್ದಿರುವ ಗುಂಡಿ ಹಾಗೂ ಕುಂಡಿ ನೋವು ಹೋಲಿಸಿದರೆ, ಈ ರಸ್ತೆಯಲ್ಲಿ ಇನ್ನೂ ಹೆಚ್ಚು ಕಷ್ಟ. ಯಾರಾದ್ರೂ ಅನಾರೋಗ್ಯಕ್ಕೆ ಒಳಗಾಗಿದ್ದಾರೆ ಅಂತ ನೋಡಕೊಂಡ ಬರೋಣ ಅಂತ ಹೊರಟರೆ, ಈ ರಸ್ತೆಯಲ್ಲಿ ಕುಂಡಿ ನೋವು ಮಾಡ್ಕೊಂಡು, ಗುಂಡಿ ದಾಟುತ್ತಾ ಹೋಗುವ ತನಕ ಅನಾರೋಗ್ಯಕ್ಕೆ ಒಳಗಾದ ಆ ವ್ಯಕ್ತಿ ಶಿವನ ಪಾದ ಸೇರೋದು ಪಕ್ಕಾ! ಈಗ ಹೊಸ ಮಾತು ಹರಿದಾಡುತ್ತಿದೆ

“ಹೊಂಡದಲ್ಲಿ ಬಿದ್ದು ನಾವು ಕುಂಡಿ ನೊಯಿಸಿಕೊಂಡರೂ, ನಾಯಕರ ಗುಂಡಿ ಜಗಳ ಯಾವತ್ತು ನಿಲ್ಲತ್ತೊ ಗೊತ್ತಿಲ್ಲ! ಹೀಗೆ ಗುಂಡಿ-ಕುಂಡಿ ಜಗಳ ಮುಂದುವರಿದ್ರೆ, ರಸ್ತೆಗಿಂತ ರಾಜಕೀಯವೇ ಜನರಿಗೆ ಹೆಚ್ಚಿನ ಅಪಾಯ ತಂದುಕೊಡುವಂತಾಗಿದೆ! ಇದೇ ರೀತಿ ಗುಂಡಿ ಜಗಳ ಹೀಗೆ ಮುಂದುವರಿತ್ತಾ ಹೋದರೆ ಸದ್ಯಕ್ಕೆ ಕುಂಡಿನೋವು ಕಮ್ಮಿ ಆಗುವ ಲಕ್ಷಣ‌ ಕಾಣತ್ತಾ ಇಲ್ಲ..

ಇದನ್ನೂ ಓದಿ : ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಸಾರ್ವಜನಿಕರು ಸ್ವಯಂ ಮಾಹಿತಿ ದಾಖಲಿಸಲು ಅವಕಾಶ