ಸುದ್ದಿಬಿಂದು ಬ್ಯೂರೋ ವರದಿ
ಕುಮಟಾ : ಕರ್ನಾಟಕ ರಾಜ್ಯ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ ನಿ.ಬೆಂಗಳೂರು. ಇದರ ಸನ್ 2024-25 ನೇ ಸಾಲಿನ 96ನೇ ವಾರ್ಷಿಕ ಸರ್ವ ಸಾಧಾರಣ ಸಭೆಯು ಬೆಂಗಳೂರಿನ ಕೇಂದ್ರ ಕಛೇರಿಯ ಡಾ. ವಿಶ್ವನಾಥ ಸಭಾಂಗಣದಲ್ಲಿ ಜರುಗಿತು.
ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃಧ್ಧಿ ಬ್ಯಾಂಕ ನಿ ಕುಮಟಾ. ಉ.ಕ ಇವರಿಗೆ ಸನ್ 24-25 ನೇ ಸಾಲಿನ ವಸೂಲಾತಿ ವಿಭಾಗದಲ್ಲಿ ರಾಜ್ಯ ಮಟ್ಟಕ್ಕೆ ದ್ವಿತೀಯ ಸ್ಥಾನ ಹಾಗೂ ಜಿಲ್ಲಾ ಮಟ್ಟಕ್ಕೆ ಪ್ರಥಮ ಸ್ಥಾನದ ಪ್ರಶಸ್ತಿಯನ್ನು ಪಡೆದಿದ್ದು, ಬ್ಯಾಂಕಿನ ಸಾಧನೆಯ ಪ್ರಗತಿಯನ್ನು ಗುರುತಿಸಿ ಸರ್ವಾಂಗೀಣ ಸಾಧನೆ ಪ್ರಶಸ್ಥಿಯನ್ನು ನೀಡಿ ಗೌರವಿಸಲಾಯಿತು.
ಬ್ಯಾಂಕಿನ ಪರವಾಗಿ ಅಧ್ಯಕ್ಷರು ಹಾಗೂ ಪ್ರಧಾನ ವ್ಯವಸ್ಥಾಪಕರು ಪ್ರಶಸ್ತಿಸ್ವಿeಕರಿಸಿದರು. ಈ 3 ಪ್ರಶಸ್ತಿಗಳನ್ನು ಪಡೆಯಲಿಕ್ಕೆ ಸಹಕರಿಸಿದ ಬ್ಯಾಂಕಿನ ಗೌರವಾನ್ವಿತ ಆಡಳಿತ ಮಂಡಳಿ ಸದಸ್ಯರು, ಸಿಬ್ಬಂದಿಗಳು,ಹಾಗೂ ಸಾಲಗಾರ ಸದಸ್ಯರಿಗೂ ಹಾಗೂ ಠೇವಣಿದಾರರಿಗೂ ಬ್ಯಾಂಕಿನ ಪರವಾಗಿ ಅನಂತಾನಂತ ವಂದನೆಗಳು.
ಇದನ್ನೂ ಓದಿ: ಯೂಟ್ಯೂಬರ್ ಮುಕಳೆಪ್ಪ ಲವ್ ಜಿಹಾದ್ ಪ್ರಕರಣ—ಪ್ರಮೋದ ಮುತಾಲಿಕ್ ಪ್ರತಿಭಟನೆ