ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ : ಸಿದ್ದಾಪುರದ ಹಿರೇಕೈ ಗ್ರಾಮದ ಶರತ್ ಆಚಾರಿ ಕೊಲೆ ಅಪರಾಧಿಗಳಿಗೆ ಶಿರಸಿ ಜಿಲ್ಲಾ ಪ್ರಧಾನ ಹೆಚ್ಚುವರಿ ನ್ಯಾಯಾಲಯ ಸೋಮವಾರ ಜೀವಾವಧಿ ಶಿಕ್ಷೆ ಪ್ರಕಟಸಿದೆ

ಅಗಸ್ಟ 2016 ರಲ್ಲಿ ಸಿದ್ದಾಪುರ ತಾಲುಕಿನ ಹಿರೇಕೈಯಲ್ಲಿ ಶರತ್ ಗಣೇಶ್ ಅಚಾರಿ ಕೊಲೆ ನಡೆದಿತ್ತು.
ಅಪರಾಧಿಗಳಾದ ದಿಲರಾಜ ದ್ಯಾನಿ, ಭರತ್ ಸಿಂಗ್ ತ್ರಿಲೋಕ ಸಿಂಗಗೆ ಜೀವಾವಧಿ ಶಿಕ್ಷೆ ಹಾಗೂ ಹತ್ತು ಸಾವಿರ ರೂ.ದಂಡವನ್ನು ನ್ಯಾಯಾಧೀಶರಾದ ಕಿರಣ್ ಕಿಣಿ ಪ್ರಕಟಿಸಿದರು.

ಕಾನಸೂರು ನಿಂದ ಶರತ್ ಬೈಕ್‌ನಲ್ಲಿ ಸಂಜೆ ಹಿರೇಕೈಗೆ ಹೊರಟಿದ್ದ. ಡ್ರಾಪ್ ಕೇಳಿದ ದಿಲರಾಜ್ ಧ್ಯಾನಿ ಮತ್ತು ಭರತ್ ಸಿಂಗ್ ತ್ರಿಲೋಕ ಸಿಂಗ್ ದಾರಿ ಮಧ್ಯ ಬೈಕ್ ನಿಂದ ದಾರಿ ಪಕ್ಕದ ಕಾಲುವೆಗೆ ತಳ್ಳಿ, ಕಲ್ಲು ಎತ್ತಿ ಹಾಕಿದ್ದರು. ಅಲ್ಲದೆ ಕತ್ತಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದರು. ದಿಲರಾಜ್ ಪೊಲೀಸರ ಕೈಗೆ ಸಿಕ್ಕಿದ್ದ. ಕೊಲೆಯಾದ ದಿನದಿಂದ ಭರತ‌ ಸಿಂಗ್ ತಲೆ ಮರೆಸಿಕೊಂಡಿದ್ದ. ನಂತರ ಆತನನ್ನು ಹಿಡಿದ ಸಿದ್ದಾಪುರ ಪೊಲೀಸರು ಪ್ರತ್ಯೇಕ ಚಾರ್ಜಶೀಟ್ ಸಲ್ಲಿಸಿದ್ದರು.

ಪ್ರಕರಣದಲ್ಲಿ ಸರ್ಕಾರಿ ವಕೀಲರಾದ ರಾಜೇಶ್ ಮಳಗೀಕರ ಸಮರ್ಥವಾಗಿ ವಾದ ಮಂಡಿಸಿ, ಆರೋಪಿಗಳ ಅಪರಾಧವನ್ನು ಸಾಬೀತು ಮಾಡಿದ್ದರು. ವೈಜ್ಞಾನಿಕ ಸಾಕ್ಷಾಧಾರದಿಂದ ಆರೋಪ ಸಾಬೀತಾಗಿತ್ತು.
ನ್ಯಾಯಾಧೀಶರು ಎಲ್ಲಾ ಅಂಶ ಗಮನಿಸಿ ಅಪರಾಧಿಗಳ ಅಪರಾಧ ಸಾಬೀತಾದ ಹಿನ್ನೆಲೆಯಲ್ಲಿ ದಿಲರಾಜ್ ದ್ಯಾನಿ ಮತ್ತು ಭರತ್ ತ್ರಿಕೋಕ ಸಿಂಗ್ ಇಬ್ಬರಿಗೂ ಜೀವಾವಧಿ ಶಿಕ್ಷೆ ಪ್ರಕಟಿಸಿದರು. ಶರತ್ ಆಚಾರಿ ಕುಟುಂಬಕ್ಕೆ ಒಂದು ಲಕ್ಷ ರೂ.ಪರಿಹಾರ ನೀಡಬೇಕೆಂದು ಆದೇಶಿಸಿದ್ದಾರೆ.

ಇದನ್ನೂ ಓದಿ:ಹರ್ಮನ್ ಮೊಗ್ಲಿಂಗ್ ಪ್ರಶಸ್ತಿಗೆ ಹಿರಿಯ ಪತ್ರಕರ್ತ ನಾಗರಾಜ್ ಹರಪನಹಳ್ಳಿ ಆಯ್ಕೆ