ಸುದ್ದಿಬಿಂದು ಬ್ಯೂರೋ, ವರದಿ
ಅಂಕೋಲಾ: ಉತ್ತರ ಕನ್ನಡದಲ್ಲಿ ಮುಂದುವರಿದ ಭಾರಿ ಮಳೆಯ ಪರಿಣಾಮವಾಗಿ ಶಿರಸಿ-ವಡ್ಡಿ ಘಟ್ಟದ ಯಾಣ ಕ್ರಾಸ್ ಬಳಿ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ನಿನ್ನೆ ರಾತ್ರಿ ಎರಡು ಬಸ್ಗಳು ರಸ್ತೆಯಲ್ಲಿ ಹುಗಿದ್ದು ಬಿದ್ದು ಎರಡು ಕಡೆಯ ಸಂಚಾರಕ್ಕೆ ಅಡ್ಡಿ ಉಂಟಾಗಿದೆ.
ಬಸ್ ಹುಗಿದು ಬಿದ್ದ ಸುದ್ದಿ ತಿಳಿದ ಸ್ಥಳೀಯರು ಭಾರೀ ಮಳೆಯ ನಡುವೆಯೇ ಕಷ್ಟಪಟ್ಟು ರಸ್ತೆಯಲ್ಲಿ ಹುಗಿದು ಬಿದ್ದ ಎರಡು ಬಸ್ಗಳನ್ನ ತೆಗೆದಿದ್ದಾರೆ.ಆದರೆ ಆ ಬಸ್ ಹುಗಿದ ಸ್ಥಳದಲ್ಲಿ ಭಾರೀ ಪ್ರಮಾಣದಲ್ಲಿ ಹೊಂಡ ಉಂಟಾಗಿದ್ದು, ಉಳಿದ ವಾಹನ ಓಡಾಟಕ್ಕೆ ತೊಂದರೆ ಆಗಲಿದೆ. ಹೀಗಾಗಿ ಶಿರಸಿ ಮೂಲಕ ವಡ್ಡಿ ಘಟ್ಟ ಮಾರ್ಗವಾಗಿ ಕಾರವಾರ,ಅಂಕೋಲಾ ಕಡೆ ಬರುವ ಅಥವಾ ಕಾರವಾರ, ಅಂಕೋಲಾ ಕಡೆಯಿಂದ ಶಿರಸಿಗೆ ಸಂಚರಿಸುವ ವಾಹನ ಸವಾರರು ವಡ್ಡಿ ಘಟ್ಟ ಮಾರ್ಗದಲ್ಲಿ ಸಂಚರಿಸುವ ಬದಲು ರಸ್ತೆ ದುರಸ್ಥಿ ಆಗುವ ತನಕ ಪರ್ಯಾಯ ಮಾರ್ಗದಲ್ಲಿ ಸಂಚರಿಸುವುದು ಉತ್ತಮ ಎಂದು ಸ್ಥಳೀಯರು ಸುದ್ದಿಬಿಂದು ನ್ಯೂಸ್ಗೆ ಮಾಹಿತಿ ನೀಡಿದ್ದಾರೆ.