ಸುದ್ದಿಬಿಂದು ಬ್ಯೂರೋ ವರದಿ
ಕುಮಟಾ :ಉತ್ತರ ಕನ್ನಡ ಜಿಲ್ಲಾದ್ಯಂತ ವರುಣನ ಆರ್ಭಟ ಜೋರಾಗುತ್ತಿದ್ದು,ಮೊದಲ ಮಳೆಗೆ ಜನಜೀವನ ಅಸ್ತವ್ಯಸ್ಥಗೊಳ್ಳುವಂತಾಗಿದೆ. ಇದೀಗ ಕುಮಟಾ-ಶಿರಸಿ ಹೆದ್ದಾರಿಯ ದೇವಿಮನೆ ಘಟ್ಟದ ರಸ್ತೆ ಬದಿಯಲ್ಲಿ ಸಣ್ಣ ಪ್ರಮಾಣದಲ್ಲಿ ಗುಡ್ಡದ ಮಣ್ಣು ಜರಿದಿದೆ. ಗುಡ್ಡ ಕುಸಿಯುವ ಭೀತಿ ಎದುರಾಗಿದೆ.
ಕುಮಟಾ-ಶಿರಸಿ ರಾಷ್ಟ್ರೀಯ ಹೆದ್ದಾರಿ 766E ಗುಡ್ಡದ ಮಣ್ಣು ಕುಸಿದು ಹೆದ್ದಾರಿಯ ಮೇಲೆ ಬಿದ್ದಿದೆ.ಇದರಿಂದಾಗಿ ಕುಮಟಾ-ಶಿರಸಿ ಹೆದ್ದಾರಿಯಲ್ಲಿ ಸಂಚಾರ ಅಸ್ತವ್ಯಸ್ತ.ಹೆದ್ದಾರಿ ಕಾಮಗಾರಿ ಪ್ರಗತಿಯಲ್ಲಿ ಇರೋದ್ರಿಂದ ಸಂಚಾರ ಕಿರಿಕಿರಿಯಾಗಿದೆ.ಕಾಮಗಾರಿ ಪ್ರಗತಿಯಲ್ಲಿ ಇರುವ ಕಾರಣ ಇಲ್ಲಿ ಲಘುವಾಹನಗಳಿಹೆ ಮಾತ್ರ ಸಂಚಾರ ನೀಡಲಾಗಿದೆ. ಮಳೆಗಾಲ ಆರಂಭವಾದರು ಇದುವರೆಗೂ ಹೆದ್ದಾರಿ ಕಾಮಗಾರಿ ಪೂರ್ಣವಾಗದೆ ಅಸ್ತವ್ಯಸ್ಥವಾಗಿದ್ದು, ವಾಹನ ಸವಾರರು ಪರದಾಡುವಂತಾಗಿದೆ.
ಕಳೆದ ವರ್ಷದ ಮಳೆಗಾಲದಲ್ಲಿಯೂ ಸಹ ದೇವಿಮನೆ ಘಟ್ಟದಲ್ಲಿ ಗುಡ್ಡಕುಸಿತ ಉಂಟಾಗಿ ವಾಹನ ಸವಾರರು ಪರದಾಡುವಂತಾಗಿತ್ತು.ಈ ವರ್ಷದಲ್ಲಿ ಹೆದ್ದಾರಿ ಕಾಮಗಾರಿಗಾಗಿ ಸಾಕಷ್ಟು ಕಡೆಯಲ್ಲಿ ಅವೈಜ್ಞಾನಿಕವಾಗಿ ಗುಡ್ಡದ ಮಣ್ಣು ತೆಗೆಯಲಾಗಿದ್ದು,ಹೀಗಾಗಿ ಈ ಭಾರಿ ಆ ಎಲ್ಲಾ ಕಡೆ ಗುಡ್ಡ ಕುಸಿಯುವ ಪರಿಸ್ಥಿತಿ ನಿರ್ಮಾಣವಾಗಿದೆ.ದೇವಿಮನೆಯ ಹಲವು ಭಾಗದಲ್ಲಿ ಈ ಸಲದ ಮಳೆಗೆ ಗುಡ್ಡಕುಸಿಯುವುದಾಗಿ ಈಗಾಗಲೇ ತಜ್ಞನರು ಸಹ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ