ಸುದ್ದಿಬಿಂದು ಬ್ಯುರೋ ವರದಿ
ಕಾರವಾರ: ನಗರಸಭೆ ಮಾಜಿ ಸದಸ್ಯನ ಕೊಲೆ ಮಾಡಿ ಆರೋಪಿ ಮೇಲೆ ಪೊಲೀಸರು ಫೈರಿಂಗ್ ಮಾಡಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಮಾಜಾಳಿ ಬಳಿ ನಡೆದಿದೆ.
ಕೊಲೆ ಆರೋಪಿ ನಿತೇಶ ತಾಂಡೇಲ್ ಎಂಬಾತನ ಮೇಲೆ ಫೈರಿಂಗ್ ಮಾಡಲಾಗಿದೆ. ರವಿವಾರ ಏ 20ರಂದು ಬೆಳಿಗ್ಗೆ ನಗರಸಭೆಯ ಮಾಜಿ ಸದಸ್ಯನಿಗೆ ನಗರದ ಬಿಎಸ್ಎನ್ಎಲ್ ಕಚೇರಿ ಎದುರಿನ ರಸ್ತೆಯಲ್ಲಿ ಚಾಕು ಇರಿದು ಕೊಲೆ ಮಾಡಲಾಗಿತ್ತು. ಘಟನೆ ಬಳಿಕ ಕೊಲೆ ಆರೋಪಿ ತಲೆ ಮರೆಸಿಕೊಂಡಿದ್ದು, ಆತನನ್ನು ಇಂದು ಬೆಳಿಗ್ಗೆ ಕಾರವಾರಕ್ಕೆ ಕರೆತಂದ ಪೊಲೀಸರು ಪಂಚನಾಮೆ ನಡೆಸಿದ್ದರು…
ಬಳಿಕ ಆರೋಪಿ ನಿತೇಶ ಸತೀಶ್ ಕೋಳಂಕರ್ ಅವರನ್ನ ಹತ್ಯೆ ಮಾಡಿದ ಬಳಿಕ ತನ್ನ ಸ್ಕೂಟಿಯಲ್ಲಿ ಗೋವಾಕ್ಕೆ ಹೋಗಿದ್ದ ಎನ್ನಲಾಗಿದೆ. ತೆಗೆದುಕೊಂಡು ಹೋಗಿದ್ದ ಸ್ಕೂಟಿಯನ್ನ ಕುಕ್ಕಳ್ಳಿ ಬಳಿ ಇಟ್ಟು, ಗೋವಾಕಡೆ ಓಡಿ ಹೋಗಿದ್ದ ಎನ್ನಲಾಗಿದೆ. ಹೀಗಿ ಇಂದು ಬೆಳಿಗ್ಗೆ ಪಂಚನಾಮೆಗಾಗಿ ಆರೋಪಿಯನ್ನ ಕಾರವಾರಕ್ಕೆ ಕರೆತಂದು ಬಳಿಕ ಸ್ಕೂಟಿ ಇಟ್ಟು ಹೋಗಿದ್ದ ಕುಕ್ಕಳ್ಳಿಗೆ ಪಂಚನಾಮೆಗಾಗಿ ಕರೆದುಕೊಂಡು ಹೋಗಿದ್ದರು ಎನ್ನಲಾಗಿದ್ದು, ಪಂಚನಾಮೆ ಮುಗಿಸಿ ವಾಪಾಸ್ ಕಾರವಾರಕ್ಕೆ ಬರುವ ವೇಳೆ ಅರೋಪಿ ಮೂತ್ರ ವಿಸರ್ಜನೆಗೆ ಹೋಗಿದ್ದ ವೇಳೆ ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದ ಎನ್ನಲಾಗಿದೆ. ತಪ್ಪಿಸಿಕೊಂಡಿ ಓಡುವ ಸಮಯಲ್ಲಿ ನಿತೇಶ ತಾಂಡೇಲ್ ಕಾಲಿಗೆ ಪೊಲೀಸರು ಗುಂಡು ಹಾರಿಸಿರುವುದಾಗಿ ತಿಳಿದು ಬಂದಿದ್ದು, ಗಾಯಗೊಂಡ ನಿತೇಶ್ನಿಗೆ ಇದೀಗ ಕಾರವಾರ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದನ್ನೂ ಓದಿ
- ದೇಶಪಾಂಡೆ ವಿವಾದಾತ್ಮಕ ಹೇಳಿಕೆ : ಬಿಜೆಪಿ ರಾಜ್ಯ ಉಪಾಧ್ಯಕ್ಷ ರೂಪಾಲಿ ನಾಯ್ಕ ಖಂಡನೆ
- State Level Teacher Award: ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಪಿ ಆರ್ ನಾಯ್ಕ, ಗೋಪಾಲ ನಾಯ್ಕ ಸೇರಿ ಮೂವರು ಆಯ್ಕೆ
- ಕುಮಟಾದಲ್ಲಿ ಗಣೇಶ ವಿಸರ್ಜನೆ ವೇಳೆ ಡಿಜೆ ಬಳಕೆ ವಿರೋಧಿಸಿದ ವ್ಯಕ್ತಿಗೆ ಪೊಲೀಸರ ಎದುರೆ ಹಲ್ಲೆ
- Lunar Eclipse 2025:ಸೆಪ್ಟಂಬರ್ 7ಕ್ಕೆ ಮಧ್ಯಾಹ್ನದ ಬಳಿಕ ಭೋಜನ ಮಾಡುವಂತಿಲ್ಲ