ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ : ಭಾರೀ ತಾಪಮಾನದಿಂದಾಗಿ ಈವರ್ಷ ಅವಧಿಗೂ ಮೊದಲೆ ಕೆರೆ,ಬಾವಿಗಳಲ್ಲಿ ನೀರಿನ ಮಟ್ಟ ಕುಸಿಯುತ್ತಿದ್ದು, ಜನ, ಜಾನುವಾರುಗಳು ನೀರಿಗಾಗಿ ಪರದಾಡುವ ಪರಿಸ್ಥಿತಿ ಎದುರಾಗುತ್ತಿದೆ. ಈ ನಡುವೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಜಿಲ್ಲೆಯಲ್ಲಿ ಉತ್ಬವಿಸುತ್ತಿರುವ ನೀರಿನ ಸಮಸ್ಯೆಗೆ ಕ್ರಮ ಜರುಗಿಸುವ ಬಗ್ಗೆ ಹೇಳಿಕೆ ನೀಡಿಕೆ ನೀಡುವುದರಲ್ಲೇ ಅಧಿಕಾರಿಗಳು,ಜನಪ್ರತಿನಿಧಿಗಳು ಕಾಲಹರಣ ಮಾಡುತ್ತಿದ್ದಾರೆಂದು ಗ್ರಾಮೀಣ ಬಾಗದ ಜನ ದೂರುತ್ತಿದ್ದಾರೆ.
ಕಳೆದ ಕೆಲ ದಿನಗಳಿನದ ಉಷ್ಟಾಂಶ ಮೊದಲಿಗಿಂತಲ್ಲೂ ಭಾರೀ ಪ್ರಮಾಣದಲ್ಲಿ ಏರಿಕೆ ಆಗುತ್ತುದ್ದು, ವಾತಾವರಣದಲ್ಲಿ ಏರುಪೇರು ಉಂಟಾಗುತ್ತಿರುವ ಕಾರಣ ಕೆರೆ, ಬಾವಿಗಳಲ್ಲಿನ ನೀರು ಈಗಾಲೇ ತಳ ಕಾಣುವಂತಾಗಿದೆ.ಪಟ್ಟಣ,ನಗರ ಪ್ರದೇಶಗಳಲ್ಲಿ ನಲ್ಲಿಗಳ ಮೂಲಕ ನೀರು ಸರಬರಾಜು ಮಾಡಲಾಗುತ್ತಿದ್ದು, ಗ್ರಾಮೀಣ ಭಾಗದಲ್ಲಿ ನಲ್ಲಿಗಳ ವ್ಯವಸ್ಥೆಗಳಿದ್ದರು ಸರಿಯಾಗಿ ನೀರು ಬಿಡಲಾಗುತ್ತಿಲ್ಲ, ಅದು ಅಲ್ಲದೆ ಜಿಲ್ಲೆಯ ಅನೇಕ ಗ್ರಾಮದಲ್ಲಿ ಜನ ಜೀವನ ಮೀಷನ್ ಯೋಜನೆ ಅಡಿಯಲ್ಲಿ ಮನೆ ಮನೆಯಲ್ಲಿ ನಲ್ಲಿ ಅಳವಡಿಸಲಾಗಿದ್ದರು ನೀರು ಪೊರೈಕೆ ಆರಂಭಿಸಿಲ್ಲ ಎಂದು ಜನ ಆರೋಪಿಸುತ್ತಿದ್ದಾರೆ.
ಇನ್ನೂ ಕೆಲವು ಕಡೆಯಲ್ಲಿ ಕಾಮಗಾರಿ ಕೂಡ ಪೂರ್ಣವಾಗಿಲ್ಲ.ಕಾಮಗಾರಿ ಪ್ರಗತಿಯನ್ನ ನೋಡಿದರೆ. ಮಳೆಗಾಲ ಬಂದರು ಕಾಮಗಾರಿ ಪೂರ್ಣಗೊಳ್ಳುವ ಲಕ್ಷಣಗಳು ಕಾಣುತ್ತಿಲ್ಲ.ಜಿಲ್ಲಾದ್ಯಂತ ದಿನದಿಂದ ದಿನಕ್ಕೆ ನೀರಿನ ಸಮಸ್ಯೆ ಉಲ್ಬಣಿಸಲಾರಂಭಿಸಿದರು ಸಂಬಂಧಿಸಿದ ಅಧಿಕಾರಿಗಳಾಗಲಿ ಅಥವಾ ಸ್ಥಳೀಯ ಜನಪ್ರತಿನಿಧಿಗಳು ಮೌನವಾಗಿರುವುದಕ್ಕೆ ಗ್ರಾಮೀಣ ಭಾಗದ ಜನ ಹಿಡಿಶಾಪ ಹಾಕುವಂತಾಗಿದೆ.ಈಗಾಗಲೇ ಜಲ ಜೀವನ್ ಮೀಷನ್ ಯೋಜನೆಯ ಗುತ್ತಿಗೆ ಅವಧಿ ಮುಕ್ತಾಯವಾಗಿದ್ದರು ಅಂತಹವರ ವಿರುದ್ಧ ಅಧಿಕಾರಿಗಳು ಯಾಕೆ ಎನ್ನೂ ಕ್ರಮ ತೆಗೆದುಕೊಂಡಿಲ್ಲ ಎಂದು ಜನ ಪ್ರಶ್ನೆ ಮಾಡುತ್ತಿದ್ದಾರೆ. ನೀರಿನ ಸಮಸ್ಯೆ ಬಗ್ಗೆ ಕ್ರಮ ತೆಗೆದುಕೊಳ್ಳದೆ ಹೋದರೆ ಆಯಾ ಭಾಗದ ಜನ ಪ್ರತಿಭಟನೆ ನಡೆಸಲು ಸಹ ಸಿದ್ದರಾಗಿದ್ದಾರೆನ್ನಲಾಗುತ್ತಿದೆ..
ಇದನ್ನೂ ಓದಿ
- ಯಲ್ಲಾಪುರ ಬಳಿ ಭೀಕರ ರಸ್ತೆ ದುರಂತ: ಬಸ್–ಲಾರಿ ಡಿಕ್ಕಿ, ಮೂವರು ಸಾವು – ಏಳು ಮಂದಿ ಗಂಭೀರ”
- Murder/200ರೂ ಕೂಲಿ ಹಣಕ್ಕೆ ಬೀದಿಯಲ್ಲಿ ಬಿತ್ತು ಹೆಣ : ಉತ್ತರ ಕನ್ನಡದಲ್ಲಿ ಭೀಕರ ಘಟನೆ
- ಕಡಲತೀರದಲ್ಲಿ ಜಿಂಕೆಯ ಮೃತದೇಹ ಪತ್ತೆ
- ಹಟ್ಟಿಕೇರಿಯಲ್ಲಿ ಗ್ರಾಮೀಣ ಕ್ರೀಡೆಗೆ ಜೀವ ತುಂಬಿದ ಕೇಸರುಗದ್ದೆ ಕ್ರೀಡಾಕೂಟ