ಸುದ್ದಿಬಿಂದು ಬ್ಯೂರೋ ವರದಿ
ಕುಮಟಾ: ಕರ್ನಾಟಕ ರಾಜ್ಯ ಕಂದಾಯ ಇಲಾಖೆ ಉಪ ತಹಸೀಲ್ದಾರ ಹಾಗೂ ಶಿರಸ್ತೇದಾರರ ಕೇಂದ್ರ ಸಂಘ ಪದಾಧಿಕಾರಿಗಳ ಆಯ್ಕೆ ಸಭೆಯಲ್ಲಿ ಕುಮಟಾ ತಹಸಿಲ್ದಾರ ಕಚೇರಿಯ ಶಿರಸ್ತೇದಾರರಾದ ಜಗದೀಶ್ ಪೂಜಾರಿ ಅವರನ್ನು ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿ ಆಯ್ಕೆ ಆಗಿದ್ದು
ಈ ನಿಟ್ಟಿನಲ್ಲಿ ಕುಮಟಾ ತಾಲೂಕು ಕಚೇರಿಯಲ್ಲಿ ಶಿರಸ್ತೇದಾರರಾದ ಜಗದೀಶ್ ಪೂಜಾರಿ ಅವರನ್ನು ಕಂದಾಯ ನೌಕರರ ಸಂಘ, ತಾಲೂಕು ನೌಕರರ ಸಂಘ, ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಗ್ರೇಡ್ 2ತಹಶಿಲ್ದಾರ ಸತೀಶ ಗೌಡ, ತಾಲೂಕು ನೌಕರರ ಸಂಘದ ಅಧ್ಯಕ್ಷ ವಿನಾಯಕ ಭಂಡಾರಿ, ಶಿರಸ್ತೆದಾರ ಟಿ.ಎಸ್ ಗಾಣಿಗೇರ್, ಸಾಮಂತ, ಉಷಾ ನಾಯ್ಕ, ಸಿಬ್ಬಂದಿಗಳಾದ ಶಿವಾನಂದ ಹಳೊಳ್ಳಿ , ಲಕ್ಷ್ಮಣ ಪಾವಸ್ಕರ್, ತುಳಸಿ ಸೇರಿದಂತೆ ಇತರರು ಇದ್ದರು.
ಇದನ್ನೂ ಓದಿ