ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ: ಸರ್ಕಾರಿ ಉತ್ಸವಗಳಲ್ಲಿ ಪ್ರಮುಖ ಉತ್ಸವವಾದ ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಉತ್ಸವ ದಿನಾಂಕ ನಿಗದಿ ಆಗಿದೆ. ಆದರೆ ಇದುವರೆಗೂ ಅಧಿಕೃತವಾಗಿ ಯಾರು ಕೂಡಾ ಮಾದ್ಯಮದ ಮೂಲಕ ಹೇಳಿಕೆ ನೀಡದಿದೆ ಇರುವುದು ಸಾಕಷ್ಟು ಗೊಂದಲಕ್ಕೆ ಕಾರಣವಾಗಿದೆ..ಕರಾವಳಿ ಉತ್ಸವ ಕೇವಲ ದಿನಾಂಕಕ್ಕೆ ಮಾತ್ರ ಸೀಮಿತವಾಗಿದೆ…

ಉತ್ತರ ಕನ್ನಡ ಜಿಲ್ಲೆಯಲ್ಲಿ 1990ರ ದಶಕದಿಂದ ಸರ್ಕಾರದ ಉತ್ಸವವಾಗಿ ಕರಾವಳಿ ಉತ್ಸವವನ್ನ ಕಾರವಾರದ ರವೀಂದ್ರನಾಥ ಕಡಲತೀರದಲ್ಲಿ ಆಚರಿಸಲಾಗುತ್ತದೆ, ಆದರೆ ಕಳೆದ ಆರು ವರ್ಷದಿಂದ ಕರಾವಳಿ ಉತ್ಸವ ಆಚರಣೆ ಆಗಿಲ್ಲ, ಆದರೆ ಕಳೆದ ಮೂರು ವರ್ಷದಿಂದ ಕೇವಲ‌ ದಿನಾಂಕ ಘೋಷಣೆ ಮಾಡಿ ದಿನಾಂಕ ಹತ್ತಿರ ಬರುತ್ತಿದ್ದಂತೆ ಉತ್ಸವ ಮುಂದೂಡಲಾಗಿದೆ, ಮುಂದಿನ ದಿನಾಂಕ ತಿಳಿಸಲಾಗುವುದು ಎಂದು ಹೇಳಿ ಜನರಲ್ಲಿ ಉತ್ಸಾಹ ತುಂಬಿ ನಿರಾಸೆ ಮಾಡುತ್ತಿದ್ದರು, ಹಾಗೆ ಈ ವರ್ಷವೂ ಕೂಡಾ ಡಿಸೆಂಬರ್ 22ರಿಂದ 28ರ ವರೆಗೆ 7ದಿನಗಳ‌ ಕಾಲ ಕರಾವಳಿ ಉತ್ಸವ ಆಚರಣೆ ಮಾಡಲು ದಿನಾಂಕ ನಿಗದಿಯಾಗಿದೆ ಆದರೆ ಇದುವರೆಗೂ ಅಧಿಕೃತವಾಗಿ ಮಾದ್ಯಮದ ಮುಂದೆ ಬಂದು ಜಿಲ್ಲಾಧಿಕಾರಿ ಯಾಗಲಿ, ಶಾಸಕರಾಗಲಿ ಹೇಳಿಕೆ ನೀಡಿಲ್ಲ, ಈ‌ ಹಿನ್ನಲೆಯಲ್ಲಿ ಈ‌ ವರ್ಷವೂ ಕೂಡಾ ಕರಾವಳಿ ಉತ್ಸವ ಕೇವಲ‌ ದಿನಾಂಕಕ್ಕೆ ಮಾತ್ರ ಸೀಮಿತ ಎಂದು ಜನ ಲೇವಡಿ ಮಾಡುತ್ತಿದ್ದಾರೆ..

ಇನ್ನು ಕರಾವಳಿ ಉತ್ಸವ ಯಾವಾಗಿಂದ ಆರಂಭವಾಯಿತೋ ಅಲ್ಲಿಂದ ಕೇವಲ ಮೂರು ದಿನಗಳ ಕಾಲ ಮಾತ್ರ ಕರಾವಳಿ ಉತ್ಸವ ಆಚರಣೆ ಮಾಡಿಕೊಂಡು ಬರಲಾಗುತ್ತಿದೆ, ಆದರೆ ಈ‌ ವರ್ಷ ಮಾತ್ರ 7 ದಿನಗಳ ಕಾಲ ಆಚರಣೆ ಮಾಡಲು ನಿರ್ಧರಿಸಲಾಗಿದೆ, ಈ ಹಿಂದೆ ಕರಾವಳಿ ಉತ್ಸವ ದಿನಾಂಕ ಘೋಷಣೆಯಾದ ಬಳಿಕ ಒಂದು‌ ತಿಂಗಳುಗಳ ಕಾಲ ಪೂರ್ವತಯಾರಿ ಸಭೆಗಳು ನಡೆಯುತ್ತಿದ್ದವು, ಅದರ ಜತೆಗೆ ಹತ್ತಾರು ಸಮಿತಿ, ಉಪಸಮಿತಿಯ ರಚನೆ ಮಾಡಿ ಹಲವಾರು ಜವಬ್ದಾರಿ ಹಂಚಿಕೆ ಮಾಡಲಾಗುತ್ತಿತ್ತು ಆದರೆ ಈ ವರ್ಷ ಅದ್ಯಾವುದು ಕಾಣುತ್ತಿಲ್ಲ, ಅದರ ಜತೆಗೆ ಉತ್ಸವ ನಡೆಯುವ ಜಾಗದಲ್ಲಿ ಯಾವುದೆ ಪೂರ್ವ ತಯಾರಿ‌ ಸಿದ್ಧತೆ ಬಗ್ಗೆ ಕಾಣುತ್ತಿಲ್ಲ,

ಈ‌ ಹಿನ್ನಲೆಯಲ್ಲಿ ಇಷ್ಟು ಕಡಿಮೆ ಅವಧಿಯಲ್ಲಿ ಹೇಗೆ ಇವರು ಕರಾವಳಿ ಉತ್ಸವ ಆಚರಣೆ ಮಾಡುತ್ತಾರೆ ಎಂಬ ಗೊಂದಲ ಕಾಡುತ್ತಿದೆ. ಜನ ಕರಾವಳಿ ಉತ್ಸವ ಈ ವರ್ಷವೂ ಆಗಲ್ಲ ಎಂದು ಹೇಳುತ್ತಿದ್ದಾರೆ. ಕರಾವಳಿ ಉತ್ಸವ ಕೇವಲ ದಿನಾಂಕಕ್ಕೆ ಮಾತ್ರ‌ ಸೀಮಿತ ವಾಗಿರದೆ ಆಚರಣೆಗೆ ಬರಲಿ ಎನ್ನೋದು ಹಲವರ ಆಶಯವಾದರೆ ಇನ್ನು ಕೆಲವರು ಜಿಲ್ಲಾಡಳಿತವನ್ನ, ಸ್ಥಳೀಯ ಶಾಸಕರನ್ನ ಲೇವಡಿ ಮಾಡುತ್ತಿದ್ದಾರೆ.