ಸುದ್ದಿಬಿಂದು ಬ್ಯೂರೋ ವರದಿ
ಬೆಂಗಳೂರು : ದೆಹಲಿಯ ಐತಿಹಾಸಿಕ ಕೆಂಪುಕೋಟೆ ಸಮೀಪ ಕಾರಿನಲ್ಲಿ ಸಂಭವಿಸಿದ ಸ್ಫೋಟದಿಂದ ಹನ್ನೊಂದು ಮಂದಿ ಸಾವನ್ನಪ್ಪಿದ್ದು, ರಾಜ್ಯಾದ್ಯಂತ ಭದ್ರತಾ ವ್ಯವಸ್ಥೆ ಅಲರ್ಟ್ ಆಗಿದೆ.
ಈ ಘಟನೆಗೆ ಕೆಲವೇ ಗಂಟೆಗಳ ಮೊದಲೇ ಜಮ್ಮು-ಕಾಶ್ಮೀರ ಪೊಲೀಸರು ದೆಹಲಿ ಹೊರವಲಯದಲ್ಲಿ ಭಾರೀ ಪ್ರಮಾಣದ ಸ್ಫೋಟಕ ವಸ್ತುಗಳನ್ನು ಪತ್ತೆಹಚ್ಚಿದ್ದರಿಂದ ಆತಂಕ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಡಾ. ಎಂ.ಎ. ಸಲೀಂ ಅವರು ಕರ್ನಾಟಕದಲ್ಲಿ ಕಟ್ಟೆಚ್ಚರ ಕ್ರಮಗಳನ್ನು ಜಾರಿಗೊಳಿಸಲು ಸೂಚನೆ ನೀಡಿದ್ದಾರೆ.
ಬೆಂಗಳೂರು ನಗರದಲ್ಲಿ ಹೆಚ್ಚಿನ ಎಚ್ಚರಿಕೆ
ನಗರದ ಕೆಆರ್ ಮಾರುಕಟ್ಟೆ, ಮೆಜೆಸ್ಟಿಕ್ ಪ್ರದೇಶ, ಶಾಪಿಂಗ್ ಮಾಲ್‌ಗಳು, ದೇವಾಲಯಗಳು, ಸಿನಿಮಾ ಮಂದಿರಗಳು ಹಾಗೂ ಜನಸಂದಣಿ ಜಾಗಗಳಲ್ಲಿ ಕಠಿಣ ತಪಾಸಣೆ ಮತ್ತು ನಿಗಾವಹಿಸುವಂತೆ ಪೊಲೀಸರು ಆದೇಶಿತರಾಗಿದ್ದಾರೆ.
ರಾತ್ರಿ ವೇಳೆಯಲ್ಲಿ ಸಹ ಹೆಚ್ಚಿ ತಪಾಸಣೆ ಜೊತೆಗೆ, ನಗರದಲ್ಲಿರುವ ಎಲ್ಲಾ ಲಾಡ್ಜ್ ಹಾಗೂ ವಸತಿಗೃಹಗಳಲ್ಲಿ ಪರಿಶೀಲನೆ ನಡೆಸಿ ಹೊರರಾಜ್ಯದವರ ಮಾಹಿತಿ ಪರಿಶೀಲನೆ ಮಾಡುವಂತೆ ಸೂಚನೆ ನೀಡಲಾಗಿದೆ. ಅನುಮಾನಾಸ್ಪದ ವ್ಯಕ್ತಿಗಳನ್ನು ಕಂಡುಬಂದರೆ ತಕ್ಷಣ ವಿಚಾರಣೆ ನಡೆಸಲು ಸೂಚಿಸಲಾಗಿದೆ.
ಮಲ್ಲೇಶ್ವರಂ ಮತ್ತು ಬಸವನಗುಡಿಯಲ್ಲಿ ನಡೆಯಲಿರುವ ಪರಂಪರೆಯ ಕಡಲೇಕಾಯಿ ಪರಿಷೆಗೆ ಹೆಚ್ಚುವರಿ ಭದ್ರತಾ ಪಡೆ ನಿಯೋಜಿಸಲಾಗುತ್ತದೆ ಎಂದು ತಿಳಿಸಲಾಗಿದೆ.
ಜಿಲ್ಲೆಗಳಲ್ಲಿಯೂ ಕಟ್ಟೆಚ್ಚರ
ರಾಜ್ಯಾದ್ಯಂತ ಮಾರುಕಟ್ಟೆಗಳು, ಜಾತ್ರೆಗಳು, ಹಬ್ಬ-ಹರಿದಿನ ಮೆರವಣಿಗೆ ಸ್ಥಳಗಳು ಮತ್ತು ಚಿತ್ರಮಂದಿರಗಳಿಗೆ ವಿಶೇಷ ಭದ್ರತೆ ನೀಡಲು ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪೊಲೀಸ್ ವ್ಯವಸ್ಥೆಗಳಿಗೆ ನಿರ್ದೇಶನ ನೀಡಲಾಗಿದೆ. ರಾಜ್ಯ ಪೊಲೀಸ್ ಇಲಾಖೆ ಜನರನ್ನು ಸಹ ಜಾಗೃತಿಯಿಂದ ವರ್ತಿಸಲು ಮತ್ತು ಅನುಮಾನಾಸ್ಪದ ಚಟುವಟಿಕೆ ಕಂಡುಬಂದರೆ ತಕ್ಷಣ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡಲು ಮನವಿ ಮಾಡಿದ್ದಾರೆ..
Bengaluru: Eleven people have died in an explosion that occurred near the historic Red Fort in Delhi, prompting heightened security measures across the state.
The explosion took place just hours after the Jammu and Kashmir Police had detected a large quantity of explosive materials in the outskirts of Delhi, which has further raised concerns. In this regard, Karnataka Director General of Police Dr. M.A. Saleem has issued instructions to enforce strict precautionary measures across the state.
Increased Vigilance in Bengaluru
Strict surveillance and checking have been ordered in crowded areas of Bengaluru such as KR Market, Majestic area, shopping malls, temples, movie theaters, and other public places.
Night patrolling has also been intensified. Additionally, all lodges and guest houses in the city are being inspected, and the details of people coming from other states are being verified. Police have been instructed to immediately question any suspicious individuals.
Extra security forces will also be deployed for the upcoming traditional Kadalekai Parishe festival in Malleswaram and Basavanagudi, officials said.
ಇದನ್ನೂ ಓದಿ/ ಕುಮಾರಸ್ವಾಮಿಯ ಜೊತೆ ಆನಂದ ಅಸ್ನೋಟಿಕರ್ ಮಾತುಕತೆ; ಪಕ್ಷ ಸಂಘಟನೆ ಕುರಿತು ಚರ್ಚೆ


