ಸುದ್ದಿಬಿಂದು ಬ್ಯೂರೋ ವರದಿ
ದಾಂಡೇಲಿ: ನಗರದ ಕೆ.ಸಿ ವೃತ್ತದ ಬಳಿ ಶುಕ್ರವಾರ ಮಧ್ಯಾಹ್ನ ಲಾರಿ ಚಾಲಕನೊಬ್ಬಕ್ಕೆ ಹೃದಯಾಘಾತ ಸಂಭವಿಸಿ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ.

ಮೃತ ಚಾಲಕ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಕುಟ್ಟಪಟ್ಟಿ ಗ್ರಾಮದ ನಿವಾಸಿ ಮುರ್ಗನ್ ಪಚ್ಚಪ್ಪ (52) ಎಂದು ಗುರುತಿಸಲಾಗಿದೆ. ಈತ ಕಾಗದ ಕಾರ್ಖಾನೆಗೆ ಕಚ್ಚಾ ವಸ್ತುಗಳನ್ನು ದಾಂಡೇಲಿಗೆ ಬಂದಿದ್ದ, ಮಧ್ಯಾಹ್ನ ಮಳಿಗೆಯ ಮೆಟ್ಟಿಲಿನ ಮೇಲೆ ಕುಳಿತುಕೊಂಡಿದ್ದ ವೇಳೆ ಅಕಸ್ಮಿಕವಾಗಿ ಹೃದಯಾಘಾತವಾಗಿ ಕುಸಿದು ಬಿದ್ದು ಮೃತಪಟ್ಟಿದ್ದಾನೆ.

ಘಟನೆಯನ್ನು ಗಮನಿಸಿದ ಸ್ಥಳೀಯರು ತಕ್ಷಣ ದಾಂಡೇಲಿ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮುಂದಿನ ತನಿಖೆ ಪ್ರಾರಂಭಿಸಲಾಗಿದೆ.

Dandeli: A lorry driver died on the spot after suffering a heart attack near the K.C. Circle in the city on Friday afternoon.

The deceased has been identified as Murugan Pachappa (52), a resident of Kuttappatti village in Krishnagiri district of Tamil Nadu. He had brought raw materials to the paper factory in Dandeli. On Friday afternoon, while sitting on the steps of a shop, he suddenly collapsed after suffering a heart attack and died on the spot.

Locals who noticed the incident immediately informed the Dandeli police. Police rushed to the spot and conducted an inspection. A case has been registered at the Dandeli Police Station, and further investigation is underway.

ಇದನ್ನೂ ಓದಿ/ಶಾಸಕ ಸತೀಶ್ ಸೈಲ್‌ಗೆ ಮತ್ತೆ ಸಂಕಷ್ಟ : ಮಧ್ಯಂತರ ಜಾಮೀನು ಅರ್ಜಿ ವಜಾ