ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ: ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಕುರಿತ ಚರ್ಚೆ ನಡೆಯುತ್ತಿರುವ ನಡುವೆಯೇ, ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ್ ವೈದ್ಯ ಸ್ಪಷ್ಟನೆ ನೀಡಿದ್ದು,‌ನಮ್ಮ‌ ಕುಟುಂಬದಲ್ಲಿ ಯಜಮಾನರಿದ್ದಾರೆ. ಅವರು ಇರೋದಕ್ಕೆ ನಾವೇಲ್ಲಾ ಮಂತ್ರಿಯಾಗಿರೋದು. ಎಲ್ಲವನ್ನ ವಿಚಾರ ಮಾಡಿ ಸರಿಯಾದ ಸಮಯದಲ್ಲಿ ಅವರು ತೀರ್ಮಾನ ತೆಗದುಕೊಳ್ಳಲಿದ್ದಾರೆಂದು ಸ್ಪಷ್ಟ ಪಡಿಸಿದ್ದಾರೆ.

ಕಾರವಾರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, “ನಮ್ಮ ಕುಟುಂಬದಲ್ಲಿ ಯಜಮಾನರಿದ್ದಾರೆ. ಮನೆಯನ್ನ ಹೇಗೆ ನಡೆಸಿಕೊಳ್ಳಬೇಕು ಎನ್ನುವುದರ ತಿಳುವಳಿಕೆ ಅವರಿಗೆ ಇದೆ. ಹಾಗಾಗಿ ನಾವು ಮಂತ್ರಿ ಆಗಿರುವುದೂ, ಸಿಎಂ ಸಿದ್ದರಾಮಯ್ಯ ಅಧಿಕಾರದಲ್ಲಿರುವುದೂ ಹೈಕಮಾಂಡ್ ತೀರ್ಮಾನದಿಂದ,” ಎಂದು ಹೇಳಿದರು.

ಸಿಎಂ ಬದಲಾವಣೆ ವಿಚಾರಕ್ಕೂ ಹೈಕಮಾಂಡ್ ತೀರ್ಮಾನವೇ ಅಂತಿಮವಾಗಲಿದೆ ಎಂದು ಅವರು ಹೇಳಿದರು. “ರಾಜ್ಯದ ಜನರ ಅಭಿವೃದ್ಧಿ ನಮ್ಮ ಮೊದಲ ಆದ್ಯತೆ. ಸಿಎಂ, ಡಿಸಿಎಂ ಸೇರಿದಂತೆ ನಾವೆಲ್ಲರೂ ಜನರ ಹಿತಕ್ಕಾಗಿ ಯಾವುದೇ ತ್ಯಾಗಕ್ಕೂ ಸಿದ್ಧರಾಗಿದ್ದೇವೆ,” ಎಂದು ಸಚಿವ ಮಂಕಾಳ್ ವೈದ್ಯ ತಿಳಿಸಿದರು.

Karwar: Amid ongoing discussions about a possible change in the Chief Minister’s post in Karnataka, Uttara Kannada District In-charge Minister Mankal Vaidya has given a clear statement.

He said, “Our family has a head — the one who knows how to run the house well. We are ministers because of his guidance. He will take the right decision at the right time after considering everything,” he clarified.

Speaking to reporters in Karwar, Minister Vaidya added, “Our family has a leader who knows how to manage things. We became ministers because of the high command’s decision, and even Siddaramaiah became the Chief Minister because of the same,” he said.

Regarding the Chief Minister change issue, he asserted that the final decision will rest with the high command. “The development of the state’s people is our top priority. Along with the CM and DCM, we are all ready to make any sacrifice for the welfare of the people,” the minister said.

He thus reaffirmed that the High Command’s decision will be final in all political matters.

ಇದನ್ನೂ ಓದಿ/ಪತ್ರಕರ್ತ ಮೆಹಬೂಬ ಮುನವಳ್ಳಿ ಅವರಿಗೆ ‘ಧೀಮಂತ ಪ್ರಶಸ್ತಿ’ ಘೋಷಣೆ…