ಸುದ್ದಿಬಿಂದು ಬ್ಯೂರೋ ವರದಿ(Suddibindu Digital News)
ಉಡುಪಿ : ಕಾರು ಹಾಗೂ ಸ್ಕೂಟಿ ನಡುವೆ ನಡೆದ ಭೀಕರ ಅಪಘಾತದಲ್ಲಿ ಎಎಸ್ಐ ಪುತ್ರಿ ಸಾವನ್ನಪ್ಪಿರುವ ಘಟನೆ ರಾಷ್ಟ್ರೀಯ ಹೆದ್ದಾರಿ ,66 ನಿಟ್ಟೂರು ಕೆಎಸ್‌ಆರ್‌ಟಿಸಿ ಬಸ್ ಡಿಪೋ ಬಳಿ ನಡೆದಿದೆ.
ಅಪಘಾತದಲ್ಲಿ ಶಿರ್ವ ಪೊಲೀಸ್ ಠಾಣೆಯ ಎಎಸ್ಐ ಸುದೇಶ ಶೆಟ್ಟಿ ಅವರ ಪುತ್ರಿ ಎಂಬಿರ ವಿದ್ಯಾರ್ಥಿನಿ ಸ್ಪರ್ಶ (24) ಸಾವನ್ನಪ್ಪಿರುವ ಯುವತಿಯಾಗಿದ್ದಾಳೆ. ಸ್ಕೂಟಿಯಲ್ಲಿ ತಾಯಿಗೆ ಕರೆದುಕೊಂಡು ಹೋಗುತ್ತಿದ್ದ. ವೇಳೆ ಉಡುಪಿ-ಕುಂದಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರು ಚಾಲಕ ರಾಕೇಶ ಎಂಬುವವರು ಸಂತೆಕಟ್ಟೆ ಬಳಿ ತನ್ನ ಕಾರನ್ನು ಅತಿವೇಗವಾಗಿ ಚಲಿಸಿಕೊಂಡು ಬಂದು ಸ್ಕೂಟಿಗೆ ಡಿಕ್ಕಿ ಹೊಡೆದಿದ್ದಾರೆ.
ಇದರಿಂದಾಗಿ ಸ್ಪರ್ಶ ಸಾವನ್ನಪ್ಪಿದ್ದು, ಅವರ ತಾಯಿ ಶರ್ಮಿಳಾ ಗಂಭೀರವಾಗಿ ಗಾಯವಾಗಿದ್ದು, ಮಣಿಪಾಲ ಆಸ್ಪತ್ರಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಸ್ಥಳೀಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.


