ಸುದ್ದಿಬಿಂದು ಬ್ಯೂರೋ ವರದಿ
ರಾಮನಗರ: ಇಲ್ಲಿನ ಶಾಲಾ ಪ್ರಾಥಮಿಕ ಹಾಗೂ ಮಾಧ್ಯಮಿಕ ಶಾಲೆ ಮೈದಾನ ಸಮೀದಲ್ಲೇ ವ್ಯಕ್ತಿ ಓರ್ವನ ಶವ ಪತ್ತೆಯಾಗಿರುವ ಘಟನೆ ಇಂದು ಬೆಳಿಗ್ಗೆ ನಡೆದಿದೆ.
ಶುಕ್ರವಾರ ಬೆಳಗಿನ ಜಾವ ರಾಮನಗರ ಪ್ರಾಥಮಿಕ ಹಾಗೂ ಮಾಧ್ಯಮಿಕ ಶಾಲೆಯ ಮೈದಾನದಲ್ಲಿ ಚಾಲಕನ ಶವ ಪತ್ತೆಯಾಗಿದ್ದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಜೋಯಿಡಾ ತಾಲೂಕಿನ ಕುಂಭಾರವಾಡದ ಉಮೇಶ್ ನಾಯಕ್ (42) ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ. ಬೆಳಿಗ್ಗೆ ವಾಕಿಂಗ್‌ಗೆ ಬಂದ ಸ್ಥಳೀಯರು ಮೈದಾನದಲ್ಲಿ ಶವ ಬಿದ್ದಿರುವುದನ್ನ ಕಂಡು ತಕ್ಷಣ ರಾಮನಗರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.
ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಉಮೇಶ್ ನಾಯಕ್ ಅವರು ಕಳೆದ ಎರಡು ದಿನಗಳಿಂದ ಆಹಾರ ಸೇವನೆ ಮಾಡದೇ ಅತಿಯಾಗಿ ಮದ್ಯಪಾನ ಮಾಡುತ್ತಿದ್ದರಿಂದ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದೆ. ಮೃತ ವ್ಯಕ್ತಿ ಹಲವು ವರ್ಷಗಳಿಂದ ರಾಮನಗರದ ಕಲ್ಲು ಖಾನೆಯಲ್ಲಿ ಚಾಲಕರಾಗಿ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ.
ಈ ಸಂಬಂಧ ರಾಮನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ.
ಇದನ್ನೂ ಓದಿ/ಕೆಡಿಸಿಸಿ ಬ್ಯಾಂಕ್ ಎಲೆಕ್ಷನ್’ಗೆ ಕೌಂಟ್ ಡೌನ್!! ರಂಗೇರಿದ ಕದನ ಕಣ



