ಸುದ್ದಿಬಿಂದು ಬ್ಯೂರೋ ವರದಿ
ಮುರುಡೇಶ್ವರ: ಉತ್ತರಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ್ ವೈದ್ಯ ಅವರ ವಿರುದ್ಧ ನಕಲಿ ಫೇಸಬುಕ್ ಖಾತೆಗಳನ್ನ ರಚಿಸಿ ಸಚಿವರ ವಿರುದ್ಧ ಅವಹೇಳನಕಾರಿಯಾಗಿ ವಿಡಿಯೋ ಪೋಸ್ಟ್‌ ಮಾಡಿದ ವ್ಯಕ್ತಿ ಓರ್ವನನ್ನ ಮುರುಡೇಶ್ವರ ಪೊಲೀಸರು ಬಂಧಿಸಿದ್ದಾರೆ.

ಮೇ 29, 2025ರಂದು ಮಂಜುನಾಥ ನಾಯ್ಕ ಅವರು “ತೇಜು ನಾಯ್ಕ ಹೊನ್ನಾವರ” ಎಂಬ ಖಾತೆಯಿಂದ ತಮ್ಮ ಬಗ್ಗೆ ಅಸಭ್ಯ ಹಾಗೂ ಅವಹೇಳನಕಾರಿ ಶಬ್ದಗಳಲ್ಲಿ ಪೋಸ್ಟ್ ಮಾಡಲಾಗಿದೆ ಎಂದು ಠಾಣೆಗೆ ದೂರು ನೀಡಿದ್ದರು. ದೂರು ಆಧರಿಸಿ ಪ್ರಕರಣ ದಾಖಲಾಗಿತ್ತು. ಬಳಿಕ, ಜೂನ್ 6, 2025ರಂದು ನಾಗಪ್ಪ ನಾಯ್ಕ ಅವರು “ತೇಜು ನಾಯ್ಕ ಹೊನ್ನಾವರ” ಮತ್ತು “ವಂದನಾ ಪೂಜಾರಿ” ಎಂಬ ನಕಲಿ ಖಾತೆಗಳ ಮೂಲಕ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯರ ವಿರುದ್ಧ ಸುಮಾರು 1.29 ನಿಮಿಷಗಳ ಅವಹೇಳನಕಾರಿ ವಿಡಿಯೋ ಹಂಚಲಾಗಿದೆ ಎಂದು ಪೊಲೀಸರಿಗೆ ಮಾಹಿತಿ ನೀಡಿದ್ದರು. ಇದರ ಆಧಾರದ ಮೇಲೆ ಮತ್ತೊಂದು ಪ್ರಕರಣ ದಾಖಲಾಗಿತ್ತು.

ಪೊಲೀಸ್ ತನಿಖೆಯಲ್ಲಿ, ಭಟ್ಕಳ ತಾಲೂಕಿನ ಬೈಲೂರು ದೊಡ್ಡಬಲಸೆಯ ಪುರಂದರ ಮಂಜುನಾಥ ನಾಯ್ಕ (37) ಎಂಬಾತ ಈ ಕೃತ್ಯದಲ್ಲಿ ತೊಡಗಿಕೊಂಡಿರುವುದು ಪತ್ತೆಯಾಗಿದೆ.   ಈ ಕಾರಣಕ್ಕೆ ಇದೀಗ ಮುರುಡೇಶ್ವರ  ಪೊಲೀಸರು ಆರೋಪಿ ಪುರಂದರ ನಾಯ್ಕ ಎಂಬಾತನನ್ನ ಬಂಧಿಸಿ, ಕೃತ್ಯಕ್ಕೆ ಬಳಸಿದ ಎರಡು ಮೊಬೈಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ.ಮುರ್ಡೇಶ್ವರ ಪೊಲೀಸರು ಪ್ರಕರಣದ ತನಿಖೆಯನ್ನು ಮುಂದುವರೆಸಿದ್ದಾರೆ.

ಇದನ್ನೂ ಓದಿ/ಹಿರೇಗುತ್ತಿ ಪೊಲೀಸ್ ಚೆಕ್ ಪೊಸ್ಟ್ ಬಳಿ ಲಾರಿ ಪಲ್ಟಿ : ಕರ್ತವ್ಯದಲ್ಲಿದ್ದ ಸಿಬ್ಬಂದಿಗಳು ಪ್ರಾಣಾಪಾಯದಿಂದ ಪಾರು