ಸುದ್ದಿಬಿಂದು ಬ್ಯೂರೋ ವರದಿ
ಶಿರಸಿ: ಉತ್ತರ ಕನ್ನಡ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ (ಕೆಡಿಸಿಸಿ) ಆಡಳಿತ ಮಂಡಳಿ ಚುನಾವಣಾ ಕಾವೂ ಜೋರಾಗಿದ್ದು. ನಾಮಪತ್ರ ಹಿಂಪಡೆಯುವ ಕೊನೆಯ ದಿನವಾದ ಇಂದು, ಒಟ್ಟು 44ನಾಮಪತ್ರಗಳಲ್ಲಿ 11 ಅಭ್ಯರ್ಥಿಗಳು ತಮ್ಮ ನಾಮಪತ್ರಗಳನ್ನು ಹಿಂಪಡೆದುಕೊಂಡಿದ್ದಾರೆ.ಇದರೊಂದಿಗೆ 33 ಅಭ್ಯರ್ಥಿಗಳು ಚುನಾವಣಾ ಕಣದಲ್ಲೇ ಉಳಿದಿದ್ದಾರೆ.
ಮಧ್ಯಾಹ್ನ 3 ಗಂಟೆಯವರೆಗೂ ನಾಮಪತ್ರ ಹಿಂಪಡೆಯಲು ಅವಕಾಶ ನೀಡಲಾಗಿದ್ದು, ಅಂತಿಮ ಪಟ್ಟಿ ಪ್ರಕಟಗೊಂಡಿದೆ. ಹಿಂಪಡೆದವರಲ್ಲಿ ಶಿರಸಿ ಮತ ಕ್ಷೇತ್ರದಿಂದ ಎಸ್.ಎನ್. ಹೆಗಡೆ, ಗಣಪತಿ ವೆಂಕಟರಮಣ ಜೋಶಿ, ಬಾಲಚಂದ್ರ ಶಾಂತಾರಾಮ ಶಾಸ್ತ್ರಿ, ಯಲ್ಲಾಪುರ ಮತ ಕ್ಷೇತ್ರದಿಂದ ರಾಮಕೃಷ್ಣ ನಾರಾಯಣ ಹೆಗಡೆ, ಕಾರವಾರ ಮತ ಕ್ಷೇತ್ರದಿಂದ ಸುರೇಶ ರಾಮಾ ಪೆಡ್ನೇಕರ್, ಜೋಯಿಡಾ ಮತ ಕ್ಷೇತ್ರದಿಂದ ಶ್ರೀಕಾಂತ ಬಾವುರಾವ್ ದೇಸಾಯಿ, ಹೊನ್ನಾವರ ಮತ ಕ್ಷೇತ್ರದಿಂದ ನಾರಾಯಣ ಮಹಾಭಲೇಶ್ವರ ಹೆಗಡೆ ಮತ್ತು ಶಿವಾನಂದ ರಾಮಚಂದ್ರ ಹೆಗಡೆ, ತಾಲ್ಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಂಘದಿಂದ ರಾಮಚಂದ್ರ ಮಹಾಭಲೇಶ್ವರ ಹೆಗಡೆ, ಅಂಕೋಲಾ ಮತ ಕ್ಷೇತ್ರದಿಂದ ಗೋಪಾಲಕೃಷ್ಣ ರಾಮಚಂದ್ರ ನಾಯ್ಕ ಹಾಗೂ ಸಹಕಾರಿ ಸಂಘ ಕ್ಷೇತ್ರದಿಂದ ವಿನಾಯಕ ರಾ. ಹೆಗಡೆ ಅವರ ಹೆಸರುಗಳಿವೆ.
ಈ ಹಿನ್ನೆಲೆಯಲ್ಲಿ ಉಳಿದ ಸ್ಥಾನಗಳಿಗೆ ಚುನಾವಣಾ ಕಣ ಬಿರುಸುಗೊಂಡಿದ್ದು, ಅಭ್ಯರ್ಥಿಗಳ ನಡುವೆ ತುರುಸಿನ ಪೈಪೋಟಿ ಆರಂಭವಾಗಲಿದ್ದು, ಕೆಡಿಸಿಸಿ ಬ್ಯಾಂಕ್ ಆಡಳಿತ ಮಂಡಳಿ ಚುನಾವಣೆಗೆ ಈಗ ಕೌಂಟ್‌ಡೌನ್ ಆರಂಭವಾಗಿದೆ
ಇದನ್ನೂ ಓದಿ/ ಕೆಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಮಂಕಾಳ ವೈದ್ಯರಿಗೆ ಎದುರಾಳಿಯೇ ಇಲ್ಲ