ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ ::ಉತ್ತರ ಕನ್ನಡ ಜಿಲ್ಲೆಗೆ ಆಗಮಿಸಿದ ಹಿಂದೂ ಜಾಗರಣ ವೇದಿಕೆಯ ಸಂಸ್ಥಾಪಕ ಪ್ರಮೋದ ಮುತಾಲಿಕ್, ‘ಮುಕಳೆಪ್ಪ ಲವ್ ಜಿಹಾದ್’ ಪ್ರಕರಣದ ಕುರಿತು ಅಪರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಈ ವೇಳೆ ಮುತಾಲಿಕ್ ಜೊತೆ ಮುಕಳೆಪ್ಪನ ತಾಯಿ ಶಿವಕ್ಕ ಸಹ ಹಾಜರಿದ್ದರು , “ಮುಕಳೆಪ್ಪ ನನ್ನ ಹುಡುಗಿ ಗಾಯತ್ರಿಯ ಮೇಲೆ ಬ್ಲ್ಯಾಕ್ ಮ್ಯಾಜಿಕ್ ಮಾಡಿ ಮದುವೆಯಾಗಿದ್ದಾನೆ” ಎಂದು ಗಂಭೀರ ಆರೋಪ ಮಾಡಿದರು. ಇಂತಹ ಘಟನೆಗಳು ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪೊಲೀಸರು ಹಾಗೂ ಆಡಳಿತಗಂಭೀರವಾಗಿ ಪರಿಗಣಿಸಿ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ನಾವು ಹಿಂದೂ ಹುಡುಗಿಯರ ರಕ್ಷಣೆ ಮಾಡಬೇಕಾ ಬೇಡವಾ, ನಮ್ಮ ದೂರಿಗೆ ಯಾವುದೇ ಮನ್ನಣೆ ಇಲ್ವಾ..?ಮುಸ್ಲಿಂ ಯುವಕರಿಗ ನಮ್ಮ ಹಿಂದೂ ಯುವಕರ ಬೇಕಾ, ಅವರ ಮನೆಯ ಹೆಣ್ಣಮಕ್ಕಳ ಕರೆದುಕೊಂಡು ಹೋದರೆ ಇವರು ಸುಮ್ಮನಿರತ್ತಾರ..ಈ ಘಟನೆ ಬಗ್ಗೆ ಕ್ರಮ ತೆಗೆದುಕೊಳ್ಳದೆ ಹೋದರೆ ಮುಂದಿನ ದಿನದಲ್ಲಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದ್ದಾರೆ.