ಸುದ್ದಿಬಿಂದು ಬ್ಯೂರೋ ವರದಿ
ಕುಮಟಾ:“ಬುದ್ಧಿ ಇದ್ದವರಿಗೆ ಏನಾದರೂ ಹೇಳಬಹುದು… ಆದರೆ ಬುದ್ಧಿಯೇ ಇಲ್ಲದವರಿಗೆ ಏನು ಹೇಳಿದರೂ ಪ್ರಯೋಜನವಿಲ್ಲವೆಂದು ಶಾಸಕ ದಿನಕರ ಶೆಟ್ಟಿ ಅವರು ಮೈತ್ರಿ ಪಕ್ಷದ ಮುಖಂಡ ಸೂರಜ್ ನಾಯ್ಕ ಸೋನಿ ವಿರುದ್ಧ ಕಿಡಿಕಾರಿದ್ದಾರೆ
“ಭ್ರಷ್ಟಾಚಾರ ! ಭ್ರಷ್ಟಾಚಾರ! ಎಂದು ಕೂಗುವ ಸೂರಜ ನಾಯ್ಕ ಮೊದಲು ತಮ್ಮ ಭ್ರಷ್ಟಾಚಾರದ ಬಗ್ಗೆ ಯೋಚಿಸಲಿ, ಅವರ ಪತ್ನಿ ಜಿಲ್ಲಾ ಪಂಚಾಯತ್ ಸದಸ್ಯೆಯಾಗಿದ್ದಾಗ ಕಮಿಷನ್ ಹಣ ಪಡೆದಿದ್ದರು ಎಂಬುದು ಎಲ್ಲರಿಗೂ ಗೊತ್ತಿದೆ” ಎಂದು ಶಾಸಕರು ಕಟುವಾಗಿ ಟಿಕೀಸಿದ್ದಾರೆ..
“ಸೂರಜ ನಾಯ್ಕ ಅವರಿಗೆ ಅನೇಕ ಸಂಬಂಧಿಕರು ಇದ್ದಾರೆ. ಅವರ ಹೇಳಿದ್ದು ಎಲ್ಲವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿಸುತ್ತಾರೆ. ಆದರೆ ನನಗೆ ಅಂಥವರಿಲ್ಲ… ಆದ್ದರಿಂದ ನನ್ನ ಮಾತು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಲ್ಲವೆಂದು ವ್ಯಂಗ್ಯವಾಡಿದ್ದಾರೆ.
ವೆಂಕಟೇಶ್ ನಾಪತ್ತೆ ಪ್ರಕರಣದ ಕುರಿತು ಮಾತ್ನಾಡಿದ ಶಾಸಕ ದಿನಕರ ಶೆಟ್ಟಿ ಅವರು, ನಾನು ಅವರನ್ನ ಇದುವರೆಗೂ ನೋಡಿಲ್ಲ, ಮಾತನಾಡಿಲ್ಲ. ಅವರ ಪತ್ರದಲ್ಲಿಯೂ ನನ್ನ ವಿರುದ್ಧ ಯಾವುದೇ ಆರೋಪ ಇಲ್ಲ. ಪುರಸಭೆ ಮುಖ್ಯಾಧಿಕಾರಿ 4 ಲಕ್ಷ ರೂ ಪಡೆಯುವ ಬಗ್ಗೆ ಮಾತ್ರ ಇದೆ. ಸೂರಜ ನಾಯ್ಕ ಅವರ ಆರೋಪ ಸುಳ್ಳು ಎಂದಿದ್ದಾರೆ.
“ನನ್ನ ವಿರುದ್ಧದ ಪ್ರಕರಣದಲ್ಲಿ ಈಗಾಗಲೇ ತೀರ್ಪು ನನ್ನ ಪರವಾಗಿ ಬಂದಿದೆ. ಇದರಿಂದಾಗಿ ಅವರು ಹತಾಶರಾಗಿ ಸುಳ್ಳು ಆರೋಪ ಮಾಡುತ್ತಿದ್ದಾರೆ. ಸತ್ಯಕ್ಕೆ ಎಂದು ಸಾವಿಲ್ಲ. ನಾನು ಅಭಿವೃದ್ಧಿಪರ. ಮುಂದಿನ ದಿನಗಳಲ್ಲಿ ಇಂತಹ ಸುಳ್ಳು ಆರೋಪಗಳಿಗೆ ಪ್ರತಿಕ್ರಿಯೆ ನೀಡುವುದಿಲ್ಲ ಎಂದಿದ್ದಾರೆ.
ಇದನ್ನೂ ಓದಿ : ವೃದ್ಧೆಯ ಆಭರಣ ದೋಚಿದ ಖದೀಮರು: ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯ


