ಸುದ್ದಿಬಿಂದು ಬ್ಯೂರೋ ವರದಿ
ಕುಮಟಾ: ಕ್ಷೇತ್ರದಲ್ಲಿ ನಡೆದಿರುವ ಭ್ರಷ್ಟಾಚಾರದ ವಿರುದ್ಧ ದಾಖಲೆ ಸಮೇತ ಸಾಬೀತುಮಾಡಿ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಿ ಎಂದು ಶಾಸಕ ದಿನಕರ ಶೆಟ್ಟಿ ಅವರು ಮೈತ್ರಿ ಪಕ್ಷವಾಗಿರುವ ಜೆಡಿಎಸ್ ಮುಖಂಡ ಸೂರಜ್ ಸೋನಿ ಅವರಿಗೆ ಸವಾಲೆಸೆದಿದ್ದಾರೆ.

ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಾಸಕ ದಿನಕರ ಶೆಟ್ಟಿ ಅವರು, ಇತ್ತೀಚೆಗೆ ಹೈಕೋರ್ಟ್ ಜೆಡಿಎಸ್ ಮುಖಂಡ ಸೂರಜ್ ಸೋನಿ ಹಾಕಿದ ಅರ್ಜಿಯನ್ನು ವಜಾಗೊಳಿಸಿ, ನನ್ನ ಆಯ್ಕೆಯನ್ನು ಸಿಂಧುಗೊಳಿಸಿದೆ. ಈ ಬಗ್ಗೆ ನನ್ನ ಬಿಜೆಪಿ ಕಾರ್ಯಕರ್ತರಯ ವಿಜಯೋತ್ಸವ ಆಚರಿಸಿದಕ್ಕೆ ಮೈತ್ರಿಧರ್ಮ ಪಾಲಿಸುತ್ತಿಲ್ಲ ಎಂದು ಸೋನಿ ಆರೋಪಿಸಿದ್ದಾರೆ. ಸೋನಿ ಹೇಳಿಕೆಯನ್ನು ನಾನು ಖಂಡಿಸುವ ಜೊತೆಗೆ ಅಷ್ಟು ಮೈತ್ರಿಧರ್ಮದ ಬಗ್ಗೆ ಮಾತನಾಡುವ ಅವರು ಏನು ಮಾಡಿದ್ದಾರೆ ಎಂಬುದು ನನಗೆ ತಿಳಿದಿದೆ.

2023 ಫಲಿತಾಂಶ ಚುನಾವಣೆಯ ಹೊರಬಂದಾಗ, ನಾನು 671 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದೇನೆ ಎಂದು ಘೋಷಣೆ ಆಗುವ ಮೊದಲೇ, ವಿರೋಧ ಪಕ್ಷದ ಸೂರಜ್ ನಾಯ್ಕ ಅವರೇ ಮುಂದಿದ್ದಾರೆ. ಅವರೇ ಗೆಲುವು ಸಾಧಿಸಿದ್ದಾರೆಂದು ವಿಜಯೋತ್ಸವ ಆಚರಣೆ ಮಾಡಿದ ಬಗ್ಗೆ ನಮ್ಮ ಬಳಿ ದಾಖಲೆಗಳಿವೆ. ಅವರು ಮಾಡಬಹುದು ನಾವು ಮಾಡಬಾರದೆ..? ಎಂದು ಪ್ರಶ್ನಿಸಿದ ಶಾಸಕರು, ನಿಖಿಲ್ ಕುಮಾರಸ್ವಾಮಿ ಅವರು ಕುಮಟಾಕ್ಕೆ ಬಂದಿದ್ದಾಗ, ಬಿಜೆಪಿ ಮಂಡಳ ಅಧ್ಯಕ್ಷರಿಗೆ ಹೇಳಿ ಮುಖಾಮುಖ ಮಾಡಿಸಿದ್ದರೆ ಆಗ ಮೈತ್ರಿ ಧರ್ಮಕ್ಕೆ ಇನ್ನೂ ಹೆಚ್ಚಿನ ಶಕ್ತಿ ಬರುತ್ತಿತ್ತು. ಆಗ ಅವರಿಗೆ ಮೈತ್ರಿ ಧರ್ಮದ ನೆನಪು ಆಗಲಿಲ್ಲ. ಮೈತ್ರಿ ಆದ ಬಳಿಕ ಸೋನಿ ಸಲ್ಲಿಸಿದ ಅರ್ಜಿಯನ್ನು ಹೈಕೋರ್ಟ್‌ನಲ್ಲಿ ವಾಪಸ್ ಪಡೆದಿದ್ದರೆ, ಅವರ ಗೌರವ ಹೆಚ್ಚಾಗುತ್ತಿತ್ತು. ಅವರು ಹಾಗೆ ಮಾಡಲಿಲ್ಲ.ಹಾಗೆ ಮಾಡಿದ್ದರೆ ಎರಡು ಪಕ್ಷದವರು ಅವರನ್ನ ದೊಡ್ಡ ಮನುಷ್ಯ ಎಂದು ಕರೆಯುವ ಅನಿವಾರ್ಯತೆ ಎದುರಾಗುತ್ತಿತ್ತು. ಆದರೆ ಅವರು ಹಾಗೆ ಮಾಡಲಿಲ್ಲ.

ಅವರು ಚುನಾವಣೆ ಪೂರ್ವದಲ್ಲೇ ಹೊನ್ನವರದಿಂದ ಕುಮಟಾದವರೆಗೆ ವರೆಗೆ ಪಾದಯಾತ್ರೆ ನಡೆಸಿದರು. ಆ ಸಂದರ್ಭದಲ್ಲಿ, ಜೆಡಿಎಸ್ ನವರ ಫೋಟೋವನ್ನು ಅವರು ಹಾಕಿಕೊಂಡಿಲ್ಲ. ಆ ಸಂದರ್ಭದಲ್ಲಿ ಅವರಿಗೆ ಒಂದು ಆಪ್ತನ್ ಇತ್ತು. ಕಾಂಗ್ರೆಸ್ ನವರು ಕರೆದರೆ ಕಾಂಗ್ರೆಸ್ ಕಡೆಗೆ ಹೋಗೋಣ ಅಥವಾ ಜೆಡಿಎಸ್ ನ ಕಡೆಗೆ ಹೋಗೋಣ ಎನ್ನುವ ರೀತಿಯಲ್ಲಿ ಅವರಿದ್ದರು. ಚುನಾವಣಾ ಸೋಲಿನ ನಂತರದಲ್ಲಿಯೂ ಅವರು ಮಧು ಬಂಗಾರಪ್ಪ, ಡಿ.ಕೆ.ಶಿವಕುಮಾರ್, ಡಿ.ಕೆಸುರೇಶ್ ಅವರಿಂದ ಶಾಲು ಹಾಕಿಸಿಕೊಂಡರು. ಅದೆಲ್ಲಾ ದಾಖಲೆ ನಮ್ಮ ಹತ್ತಿರ ಇದೆ.

ಆಗ ನಿಮ್ಮ ಪಕ್ಷನಿಷ್ಠೆ ಎಲ್ಲಿ ಹೋಯಿತು ಎಂದು ದಿನಕರ ಶೆಟ್ಟಿ ಪ್ರಶ್ನಿಸಿದರು. ಕೇಂದ್ರದಲ್ಲಿ ಕುಮಾರಸ್ವಾಮಿ ಅವರು ಸಚಿವರಾಗದೆ ಇದ್ದರೆ ಇವರು ಕಾಂಗ್ರೆಸ್ ಗೆ ಹೋಗುವ ಲಕ್ಷಣಗಳು ಇತ್ತು. ವೇದಾಂತ ಹೇಳುವುದು ಸುಲಭ, ಆಚರಣೆ ಕಷ್ಟ. ಇದೆಲ್ಲವೂ ಅವರ ಇತಿಹಾಸ, ಇದೆಲ್ಲಾ ಇದ್ದೂ ತಾನೇ ಸತ್ಯ ಹರಿಶ್ಚಂದ್ರ ಉಳಿದವರು ಸುಳ್ಳಿನ ಸರದಾರರು ಎಂಬಂತೆ ಹೇಳುತ್ತಿದ್ದಾರೆ ಎಂದು ಸೋನಿ ವಿರುದ್ಧ ಕಿಡಿಕಾರಿದ ಶಾಸಕ ದಿನಕರ ಶೆಟ್ಟಿ ಅವರು, ನಾನು ಶಾಸಕನಾಗಿ 13 ವರ್ಷಗಳು ಸಂದಿದೆ. ನನ್ನ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಮಾಡಿದ್ದೇನೆ.

ನನ್ನ ಕ್ಷೇತ್ರದಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪ ಮಾಡುವ ಸೂರಜ್ ಸೋನಿ ಅವರು, ಈ ಹಿಂದೆ ಅಂದಿನ ಸಂಸದ ಅನಂತ ಕುಮಾರ್ ಹೆಗಡೆಯವರಿಂದ ಕಾಮಗಾರಿಗೆ ಹಣ ಪಡೆದು ನಿರ್ಮಾಣ ಮಾಡಿದ್ದು ಉದಾಹರಣೆಯಿದೆ. ನಡೆದಿದ್ದರೆ ದಾಖಲೆ ಸಮೇತ ಬಿಡುಗಡೆಗೊಳಿಸಿ. ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಿ. ಇದು ನಾನು ಹಾಕುತ್ತಿರುವ ಛಾಲೆಂಜ್ ಎಂದು ಗುಡುಗಿದರು.

ಕುಮಟಾ ಮಂಡಲಾಧ್ಯಕ್ಷ ಜಿ.ಐ ಮಾತನಾಡಿ ಮೈತ್ರಿ ಧರ್ಮವನ್ನು ಪಾಲಿಸುತ್ತಿಲ್ಲ ಎಂಬ ಸೂರಜ್ ಸೋನಿ ಅವರ ಹೇಳಿಕೆ ನಮಗೆ ಬೇಸರ ತಂದಿದೆ. ಸೋನಿ ಅವರು ಬಿಜೆಪಿಗೆ ಬಂದಾಗ ಅವರನ್ನು ಬಿಜೆಪಿ ಪಕ್ಷದವರಾಗಿ ಸ್ವಾಗತ ಮಾಡಿದ್ದೇವೆ. ಅಭ್ಯರ್ಥಿ ಟಿಕೆಟ್ ಗೆ ವಿನೋದ ಪ್ರಭು ಹಾಗೂ ಸೂರಜ್ ನಾಯ್ಕ ಎಂ.ಎಲ್.ಎ ಅವರ ಹೆಸರು ಬಂದಾಗ, ಯುವ ನಾಯಕರಿಗೆ ಕೊಡಲು ನಿರ್ಧಾರ ಮಾಡಿ ಸೋನಿಯವರಿಗೆ ಟಿಕೆಟ್ ಕೊಟ್ಟೆವು. ಅವರು ಪ್ರಚಾರದಲ್ಲಿ ನಮ್ಮದು ನಲವತ್ತು ಸಾವಿರ ಓಟು ಇದೆ ಎಂದು ಪ್ರಚಾರ ಮಾಡಿದರು. ಅಂದಿನ ಸಂಸದ ಅನಂತಕುಮಾರ್ ಹೆಗಡೆಯವರು ಸಂಸದ ಸ್ಥಾನದ ಪ್ರಚಾರ-ಕ್ಕೆ ಬಂದಾಗ ಅನಂತಕುಮಾರ್ ಅವರ ಪ್ರಚಾರದಲ್ಲಿಯೇ ನಿಮ್ಮ ನೋವು ತೋಡಿಕೊಂಡಿರಿ. ಅನಂತಕುಮಾರ್ ಗೆಲ್ಲಿಸಲಿಲ್ಲ ಎಂದಿರಿ. ನಂತರ ಬದಲಾದ ಕಾಲಘಟ್ಟದಲ್ಲಿ ಬಿಜೆಪಿ ಪಕ್ಷದಲ್ಲಿ ಪೈಪೋಟಿ ನಡೆಯಿತು. ಆದಾಗಲೇ ಪಕ್ಷದ ವಿವಿಧ ಸ್ಥಾನ ಹಾಗೂ ನಿಮ್ಮ ಕುಟುಂಬದವರು ವಿವಿಧ ಸ್ಥಾನ ಅನುಭವಿಸಿದ್ದರು. ಪಕ್ಷದ ಬಗ್ಗೆ ಮಾತನಾಡುವ ನೀವು ಆಗ ಯಾಕೆ ಬಿಜೆಪಿಯನ್ನು ತೊರೆದಿರಿ? ಪಕ್ಷೇತರ ಅಭ್ಯರ್ಥಿಯಾಗಿ ಏಕೆ ಚುನಾವಣೆಗೆ ನಿಂತಿರಿ ಎಂದು ಪ್ರಶ್ನಿಸಿದರು. ಇಂದು ಬಿಜೆಪಿಗೆ ಮೈತ್ರಿ ಧರ್ಮದ ಬಗ್ಗೆ ಪಾಠ ಹೇಳುವ ನಿಮಗೆ, ಅಂದು ಪಕ್ಷದ ತತ್ವ ನಿಷ್ಠೆ ಎಲ್ಲಿ ಹೋಗಿತ್ತು? ಎಂದು ಪ್ರಶ್ನಿಸಿದರು.

ಸುದ್ದಿಗೋಷ್ಠಿಯಲ್ಲಿ ನಿಕಟಪೂರ್ವ ಜಿಲ್ಲಾ ಅಧ್ಯಕ್ಷ ನಾಯಕ, ವೆಂಕಟೇಶ ನಿಕಟಪೂರ್ವ ಮಂಡಲಾಧ್ಯಕ್ಷ ಹೇಮಂತಕುಮಾರ್ ಗಾಂವರ್, ರಾಜ್ಯ ಶಿಕ್ಷಣ ಪ್ರಕೆ ಎಂ.ಜಿ ಭಟ್ಟ, ಕುಮಟಾ ಕಾರ್ಯದರ್ಶಿ ಗಣೇಶ ಪ್ರಮುಖರಾದ ವಿಶ್ವನಾಥ ಡಾ ಜಿ ಜಿ ಹೆಗಡೆ, ತಿಮ್ಮಪ್ಪ ~ ಹಾಗೂ ಇತರರು ಇದ್ದರು.

ಇದನ್ನೂ ಓದಿ: ಕಾರವಾರ ದೇವಭಾಗ ಬೀಚ್‌ನಲ್ಲಿ ಅದ್ಭುತ ನೋಟ! ರಾಶಿ ರಾಶಿ ಮೀನು ದಡಕ್ಕೆ