ಸುದ್ದಿಬಿಂದು ಬ್ಯೂರೋ ವರದಿ
ಶಿರಸಿ: ಆರ್ಯಈಡಿಗ, ನಾಮಧಾರಿ, ಬಿಲ್ಲವ ಸಮುದಾಯದ ಗುರುಮಠ ಶ್ರೀರಾಮ ಕ್ಷೇತ್ರದ ಶಿರಸಿ ವಿಭಾಗಾಧ್ಯಕ್ಷರಾಗಿ ಡಾ. ವೆಂಕಟೇಶ ಎಲ್. ನಾಯ್ಕ ರವರನ್ನು ನೇಮಕ ಮಾಡಲಾಗಿದೆ.

ಇಂದು ಶಿರಸಿಯ ಸುಪ್ರಿಯಾ ಇಂಟರ್‌ನ್ಯಾಷನಲ್ ಹೋಟೇಲ್‌ನ ಸಭಾಭವನದಲ್ಲಿ ನಡೆದ ೧೦೦೮ ಮಹಾಮಂಡಲೇಶ್ವರರಾಗಿ ಪಟ್ಟಾಭಿಶಿಕ್ತರಾದ ಸದ್ಗುರು ಶ್ರೀ ಶ್ರೀ ಬೃಹ್ಮಾನಂದ ಸರಸ್ವತೀ ಮಹಾಸ್ವಾಮಿಗಳು ವಿಶೇಷ ಅಭಿನಂದನಾ ಪಾದಪೂಜಾ ಸೇವಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ, ವಿವಿಧ ತಾಲೂಕುಗಳ ಸಮಾಜದ ಹಾಗೂ ಶ್ರೀರಾಮ ಕ್ಷೇತ್ರದ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಹಿರಿಯ ಮುಖಂಡರ ಸಮ್ಮುಖದಲ್ಲಿ ಡಾ. ನಾಯ್ಕರವರ ನೇಮಕಾತಿಯನ್ನು ಪ್ರಕಟಿಸಿದ್ದಾರೆ.

ಸಾಮಾಜಿಕ ಹಾಗೂ ಧಾರ್ಮಿಕ ಕ್ಷೇತ್ರಗಳಲ್ಲಿ ಅಪಾರ ಅನುಭವ ಹೊಂದಿದ,ಡಾ. ವೆಂಕಟೇಶ ನಾಯ್ಕರವರು ಹಲವಾರು ಸಂಘ-ಸಂಸ್ಥೆಗಳ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದು ಮುಂದಿನ ದಿನಗಳಲ್ಲಿ ಶಿರಸಿ, ಸಿದ್ದಾಪುರ, ಯಲ್ಲಾಪುರ, ಮುಂಡಗೋಡ, ಹಳಿಯಾಳ, ದಾಂಡೇಲಿ ವ್ಯಾಪ್ತಿಯಲ್ಲಿ ಸಮಾಜ ಮತ್ತು ಶ್ರೀ ರಾಮ ಕ್ಷೇತ್ರದ ಧಾರ್ಮಿಕ ಸಂಘಟನೆ ಹಾಗೂ ಇತರ ಕಾರ್ಯಕ್ರಮಗಳ ಅನುಷ್ಠಾನ ಕಾರ್ಯದ ಜವಾಬ್ದಾರಿಯನ್ನು ಹೊಂದಿರುತ್ತಾರೆ ಎಂದು ಶ್ರೀಗಳು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಶಿರಸಿ ತಾಲೂಕು ಆರ್ಯಈಡಿಗ, ನಾಮಧಾರಿ, ಬಿಲ್ಲವ ಅಭಿವೃದ್ಧಿ ಸಂಘದ ಅಧ್ಯಕ್ಷ ಹಾಗೂ ಶಿರಸಿ-ಸಿದ್ದಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಭೀಮಣ್ಣ ನಾಯ್ಕ, ಸಿದ್ದಾಪುರದ ಕೆ.ಜಿ. ನಾಯ್ಕ, ವಿ.ಎನ್. ನಾಯ್ಕ, ಶಿರಸಿಯ ಗಣಪತಿ ನಾಯ್ಕ ದೇವಿಕೆರೆ, ಶ್ರೀನಿವಾಸ ನಾಯ್ಕ, ಆನಂದ ನಾಯ್ಕ, ಡಾ. ನಾಗೇಶ ನಾಯ್ಕ, ಭಟ್ಕಳದ ಶ್ರೀಧರ ನಾಯ್ಕ, ಕೃಷ್ಣ ನಾಯ್ಕ, ಮೋಹನ್ ನಾಯ್ಕ, ಹೊನ್ನಾವರದ ಟಿ.ಟಿ. ನಾಯ್ಕ, ವಾಮನ ನಾಯ್ಕ, ಕುಮಟಾದ ಮಂಜುನಾಥ ನಾಯ್ಕ, ಹೆಚ್.ಆರ್. ನಾಯ್ಕ, ಅಂಕೋಲಾದ ನಾಗೇಶ ನಾಯ್ಕ, ಯಲ್ಲಾಪುರದ ನರಸಿಂಹ ನಾಯ್ಕ ಸೇರಿದಂತೆ ಸಮಾಜದ ನೂರಾರು ಪ್ರಮುಖರು ಉಪಸ್ಥಿತರಿದ್ದರು.

ಇದನ್ನೂ ಓದಿ: ಭಟ್ಕಳದಲ್ಲಿ ವಿಚಿತ್ರ ಹೆಣ್ಣು ಶಿಶು ಜನನ,ಆಸ್ಪತ್ರೆಗೆ ದಾಖಲು