ಸುದ್ದಿಬಿಂದು ಬ್ಯೂರೋ‌ ವರದಿ
ಕಾರವಾರ: ನಾಳೆ ನಡೆಯಲಿರುವ ರಾಹುಗ್ರಸ್ತ ಚಂದ್ರಗ್ರಹಣದ ಹಿನ್ನಲೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಪ್ರಮುಖ ದೇವಾಲಯಗಳಲ್ಲಿ ಪೂಜೆ ಮತ್ತು ದರ್ಶನ ಸಮಯದಲ್ಲಿ ಬದಲಾವಣೆಗಳನ್ನು ಮಾಡಲಾಗಿದೆ. ಭಕ್ತರು ಇದನ್ನು ಗಮನಿಸಿ ತಮ್ಮ ಭೇಟಿ ಯೋಜಿಸಬೇಕೆಂದು ದೇವಸ್ಥಾನ ಆಡಳಿತ ಮಂಡಳಿ ತಿಳಿಸಿದೆ.

ಗೋಕರ್ಣ ಮಹಾಬಲೇಶ್ವರ ದೇವಾಲಯ
ಗೋಕರ್ಣ ಶ್ರೀಮಹಾಬಲೇಶ್ವರ ದೇವಾಲಯದಲ್ಲಿ ಗ್ರಹಣದ ದಿನ ಮುಂಜಾನೆ 7.00 ಗಂಟೆಯಿಂದ 10.45ರವರೆಗೆ ಮಾತ್ರ ಸ್ಪರ್ಶ ಪೂಜೆಗೆ ಅವಕಾಶವಿರಲಿದೆ.
ಮಧ್ಯಾಹ್ನ 12.30ಕ್ಕೆ ಮಹಾಪೂಜೆ ನೆರವೇರಲಿದೆ.
ಸಂಜೆ 4.00ರಿಂದ 5.30ರವರೆಗೆ ದರ್ಶನಕ್ಕೆ ಮಾತ್ರ ಅವಕಾಶ ನೀಡಲಾಗುವುದು.

ಚಂದ್ರಗ್ರಹಣ ಕಾಲದಲ್ಲಿ ರಾತ್ರಿ 9.45ರಿಂದ ಮಧ್ಯರಾತ್ರಿ 1.26ರವರೆಗೆ ಭಕ್ತರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದು.
ಮರುದಿನ ಬೆಳಿಗ್ಗೆ ದೇವಾಲಯದಲ್ಲಿ ಸ್ವಚ್ಚತಾ ಕಾರ್ಯ ನಡೆಸಿ ದೇವರ ಪೂಜೆ ನೆರವೇರಿಸಲಾಗುವುದು.

ಶಿರಸಿ ಶ್ರೀಮಾರಿಕಾಂಬಾ ದೇವಾಲಯ
ಶಿರಸಿಯ ನಾಡದೇವಿ ಶ್ರೀಮಾರಿಕಾಂಬಾ ದೇವಾಲಯದಲ್ಲಿ ನಾಳೆ ಮುಂಜಾನೆಯಿಂದ ಮಧ್ಯಾಹ್ನ 3.30ರವರೆಗೆ ಪೂಜಾ ವಿನಿಯೋಗ ನಡೆಯಲಿದೆ.
ಸಂಜೆ 6.00 ಗಂಟೆಯವರೆಗೆ ದರ್ಶನಕ್ಕೆ ಅವಕಾಶ ನೀಡಲಾಗಿದೆ..
ಸಂಜೆ 6 ಗಂಟೆಯ ನಂತರ ದೇವಾಲಯ ಬಾಗಿಲು ಬಂದ್ ಮಾಡಲಾಗುವುದು. ಚಂದ್ರಗ್ರಹಣದ ಹಿನ್ನಲೆಯಲ್ಲಿ ಭಕ್ತರು ಸಮಯವನ್ನು ಗಮನಿಸಿ ದೇವರ ದರ್ಶನಕ್ಕೆ ಬರಬೇಕೆಂದು ದೇವಸ್ಥಾನ ಆಡಳಿತ ಮಂಡಳಿ ಮನವಿ ಮಾಡಲಾಗಿದೆ.

Uttara Kannada Temples Announce Changes in Darshan Timings Ahead of Lunar Eclipse
SuddiBindu beuro report
Karwar: In view of the Rahu-graasta Chandra Grahana (lunar eclipse) scheduled for tomorrow, several prominent temples in Uttara Kannada district have announced changes to their regular puja and darshan timings. Temple authorities have urged devotees to take note of these revised schedules and plan their visits accordingly.

Gokarna Sri Mahabaleshwar Temple:
On the day of the eclipse, devotees will be allowed to perform Sparsha Puja (ritual worship) between 7:00 AM and 10:45 AM.
The Maha Puja will be conducted at 12:30 PM, followed by general darshan between 4:00 PM and 5:30 PM.

During the eclipse, darshan will be open from 9:45 PM to 1:26 AM (midnight). The next morning, temple authorities will undertake cleansing rituals before resuming regular worship services.

Sirsi Sri Marikamba Temple:
At the Sirsi Sri Marikamba Temple, puja rituals will be performed from early morning until 3:30 PM.
Darshan will be available for devotees until 6:00 PM, after which the temple doors will remain closed throughout the eclipse period.

Temple authorities have requested devotees to strictly follow the revised timings for a smooth and orderly visit.