ಸುದ್ದಿಬಿಂದು ಬ್ಯೂರೋ ವರದಿ
ಶಿರಸಿ: ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಸೋಮನಹಳ್ಳಿ ಗ್ರಾಮದಲ್ಲಿ ನಡೆದ ಹೃದಯ ಕಲುಕುವ ಘಟನೆದಲ್ಲಿ, 9 ವರ್ಷದ ಬಾಲಕನೊಬ್ಬ ತನ್ನ ತಮ್ಮನಿಂದ ಎಯರ್ ಗನ್ ಗುಂಡು ತಗುಲಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ. ಸೋಮನಹಳ್ಳಿ ಗ್ರಾಮದ ರಾಘವೇಂದ್ರ ತೋಟದ ಮನೆಯಲ್ಲಿ ನಡೆದಿದೆ.

ಮೃತ ಬಾಲಕ ಹಾವೇರಿ ಜಿಲ್ಲೆಯ ಹೊಸ ಕಿತ್ತೂರ ಗ್ರಾಮದ ಬಸಪ್ಪ ಉಂಡಿ ಅವರ ಪುತ್ರನಾಗಿದ್ದಾನೆ. ಕುಟುಂಬವು ಶಿರಸಿ ತಾಲೂಕಿನ ಸೋಮನಹಳ್ಳಿ ಗ್ರಾಮದಲ್ಲಿ ತೋಟದ ಕೆಲಸ ಮಾಡುವುದಕ್ಕಾಗಿ ಶಿರಸಿಯಲ್ಕಿ ನೆಲೆಸಿದ್ದರು, .

ತೋಟದಲ್ಲಿ ಮಂಗಗಳನ್ನು ಓಡಿಸಲು ಬಳಸುವ ಎಯರ್ ಗನ್ ಮಕ್ಕಳು ಆಟವಾಡಲು ತೆಗೆದುಕೊಂಡಿದ್ದು, ತಮಾಷೆಯಾಗಿ 7 ವರ್ಷದ ತಮ್ಮ ಗುಂಡು ಹೊಡೆದಾಗ ಅದು ಅಪಘಾತವಾಗಿ ಅಣ್ಣನಿಗೆ ತಗುಲಿ, ಅವನು ತಕ್ಷಣವೇ ನೆಲಕ್ಕುರುಳಿದ. ಗಂಭೀರವಾಗಿ ಗಾಯಗೊಂಡಿದ್ದ ಅಣ್ಣ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಮೃತ ಬಾಲಕನ ದೇಹವನ್ನು ಶಿರಸಿ ಆಸ್ಪತ್ರೆಗೆ ರವಾನಿಸಲಾಗಿದೆ.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಎಎಸ್ಪಿ ಜಗದೀಶ್, ಸಿಪಿಐ ಶಶೀಕಾಂತ ವರ್ಮಾ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸುತ್ತಿದ್ದಾರೆ.. ಪೋಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ : ದೇಶಪಾಂಡೆ ವಿವಾದಾತ್ಮಕ ಹೇಳಿಕೆ : ಬಿಜೆಪಿ ರಾಜ್ಯ ಉಪಾಧ್ಯಕ್ಷ ರೂಪಾಲಿ ನಾಯ್ಕ ಖಂಡನೆ