ಸುದ್ದಿಬಿಂದು ಬ್ಯೂರೋ‌ ವರದಿ
ಧರ್ಮಸ್ಥಳ : ಧರ್ಮಸ್ಥಳದ ಸುತ್ತುಲು‌ ನೂರಾರು ಶವಗಳನ್ನ ಹುತ್ತಿರುವುದಾಗಿ ಅನಾಮಿಕನೋರ್ವ‌ ನೀಡಿದ ಮಾಹಿತಿ ಆಧರಿಸಿ ಕಳೆದ ಮೂರು ದಿನಗಳಿಂದ‌ ತನಿಖೆ‌‌ ನಡೆಸಲಾಗಿದ್ದು, ಈಗ ಮೂರನೆ ದಿನವಾದ ಇಂದು 6ನೇ ಪಾಯಿಂಟನಲ್ಲಿ ಅಸ್ತಿಪಂಚರ‌ ಪತ್ತೆಯಾಗಿದೆ ಎನ್ನಲಾಗಿದೆ.

ಮೂರು ದಿನಗಳಿಂದ ಎಸ್‌ಐಟಿ ತಂಡ ನಡೆಸುತ್ತಿದ್ದ ತೀವ್ರ ಕಾರ್ಯಚರಣೆಯಲ್ಲಿ ಇಂದು ಮಹತ್ವದ ಸುಳಿವು ಸಿಕ್ಕಿದೆ. ಮೂರನೇ ದಿನ ನಡೆದ ಉತ್ಖನನದಲ್ಲಿ ಇಂದು 6ನೇ ಪಾಯಿಂಟ್‌ನಲ್ಲಿ ಮಾನವನ ಅಸ್ತಿಪಂಜರ ಪತ್ತೆಯಾಗಿದೆ ಎನ್ನಲಾಗಿದೆ.

ಮೂರೂ ದಿನಗಳಿಂದ ನಿರಂತರವಾಗಿ ನಡೆಯುತ್ತಿದ್ದ ಕಾರ್ಯಚರಣೆಗೆ ಇಂದು ತಿರುವು ದೊರೆತಿದ್ದು, ಪತ್ತೆಯಾದ ಅಸ್ತಿಪಂಜರದ ಸ್ಥಳವನ್ನು ಒಬ್ಬ ಅನಾಮಿಕ ವ್ಯಕ್ತಿಯೇ ತೋರಿಸಿದ್ದಾನೆ ಎಂದು ಮೂಲಗಳು ತಿಳಿಸಿವೆ.

ಅಸ್ತಿಪಂಜರ ಯಾರದ್ದು ಎಂಬುದು ಹಾಗೂ ಪ್ರಕರಣದ ಹಿನ್ನೆಲೆ ಕುರಿತು ಎಸ್‌ಐಟಿ ಮುಂದಿನ ತನಿಖೆ ಕೈಗೊಂಡಿದ್ದು, ಪ್ರಕರಣದಲ್ಲಿ ಹೆಚ್ಚಿನ ಬೆಳಕು ಚೆಲ್ಲುವ ನಿರೀಕ್ಷೆಯಿದೆ.

ಇದನ್ನೂ ಓದಿ:ಉತ್ತರಕನ್ನಡ ಶಾಮಿಯಾನ-ಡೆಕೋರೇಷನ್ ಸಂಘದ ಪದಾಧಿಕಾರಿಗಳ ಆಯ್ಕೆ