ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ: ಪ್ರಧಾನಿ ನರೇಂದ್ರ ಮೋದಿ ಯಾರಿಗೂ ಉತ್ತರ ನೀಡುವುದಿಲ್ಲ, ಪ್ರಶ್ನೆ ಕೇಳಲು ಅವಕಾಶ ನೀಡುವುದೇ ಇಲ್ಲ.ಇದು ಸರ್ವಾಧಿಕಾರಿ ಧೋರಣೆಯಾಗಿದೆ,ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮೋದಿ ನಡೆಯ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅವರು ಕಾರವಾರದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಸಿದಿದ್ದಾರೆ.ಪುಲ್ವಾಮಾ ದಾಳಿಯ ಕುರಿತು ಕೇಂದ್ರ ಸರ್ಕಾರ ವೈಫಲ್ಯದ ಬಗ್ಗೆ ಯಾವುದೇ ಉತ್ತರ ನೀಡಿಲ್ಲವೆಂದು ಅವರು ಆರೋಪಿಸಿದರು. “ನಮ್ಮ 40 ಸೈನಿಕರು ಹುತಾತ್ಮರಾದ ಘಟನೆಗೆ ಸಂಬಂಧಿಸಿದಂತೆ ಯಾವುದೇ ಸ್ಪಷ್ಟನೆ ನೀಡಿಲ್ಲ.ಪಹಲ್ಗಾಮ್ ದಾಳಿಯಲ್ಲೂ ಉತ್ತರ ಸಿಗಲಿಲ್ಲ. ಪಾಕಿಸ್ತಾನವು ಭಾರತದ ಐದು ಯುದ್ಧವಿಮಾನಗಳನ್ನು ಹೊಡೆದು ಹಾಕಿದೆ ಎಂದು ಹೇಳಿದ್ರು, ಆದರೆ ಸರ್ಕಾರ ಇದುವರೆಗೆ ಸತ್ಯಾಂಶ ಬಹಿರಂಗಪಡಿಸಿಲ್ಲ, ಎಂದು ಹೇಳಿದರು.

ಮೋದಿ ವಿಶ್ವಗುರು ಎಂದು ಹೇಳುತ್ತಾರೆ, ಆದರೆ ಅಕ್ಕಪಕ್ಕದ ದೇಶಗಳೂ ನಮ್ಮ ಪರ ನಿಲ್ಲುತ್ತಿಲ್ಲ, ಪಾಕ್ ಪ್ರಧಾನಿ ಅಮೆರಿಕಾ ಅಧ್ಯಕ್ಷರೊಂದಿಗೆ ಕಾಣಿಸಿಕೊಂಡಿದ್ದಾರೆ.ಹಾಗಿದ್ದರೆ ವಿಶ್ವಗುರು ಎಂದರೇನು?” ಎಂದು ಪ್ರಶ್ನಿಸಿದರು.ಈಡಿಗೆ ಸುಪ್ರೀಂ ಕೋರ್ಟ್ ಛೀಮಾರಿ ಹಾಕಿರುವುದನ್ನು ಉಲ್ಲೇಖಿಸಿ, “ಈಡಿ, ಐಟಿ,ಎಲೆಕ್ಷನ್ ಕಮಿಷನ್ ಎಲ್ಲವನ್ನೂ ಕೇಂದ್ರ ಸರ್ಕಾರ ದುರುಪಯೋಗಪಡಿಸಿಕೊಂಡು ನಾಶ ಮಾಡುತ್ತಿದೆ,” ಎಂದು ದಿನೇಶ್ ಗುಂಡೂರಾವ್ ವಾಗ್ದಾಳಿ ನಡೆಸಿದರು.

ಬರಗಾಲ ಪರಿಹಾರಕ್ಕಾಗಿ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಹೋಗಬೇಕಾದ ಪರಿಸ್ಥಿತಿ ಉಂಟಾದ ಹಿನ್ನೆಲೆಯಲ್ಲಿ, “ಬಿಜೆಪಿ ಸಂಸದರು ತಮ್ಮ ಪಾಲಿನ ಹೊಣೆಗಾರಿಕೆ ಪೂರೈಸಿದ್ದಾರೆಯೇ? ಕಾಗೇರಿ, ಪ್ರಹ್ಲಾದ್ ಜೋಶಿ ದೆಹಲಿಯಲ್ಲಿ ಏನು ಮಾಡುತ್ತಿದ್ದಾರೆ?” ಎಂದು ಪ್ರಶ್ನಿಸಿದರು.

ಇದನ್ನೂ ಓದಿ:ಕರ್ನಾಟಕ ನಂಬರ್ ವಾಹನಗಳಿಗೆ ಬಿಗ್ ಶಾಕ್ ನೀಡಿದ ಗೋವಾ ಸರಕಾರ !