ಸುದ್ದಿಬಿಂದು ಬ್ಯೂರೋ ವರದಿ
ಶಿರಸಿ: ಹಳ್ಳಿಯ ದಿನಗೂಲಿ ಕೆಲಸಗಾರ ದಂಪತಿಯ ಮಗನಾದರೂ ತನ್ನ ಛಲ ಹಾಗೂ ಪರಿಶ್ರಮದಿಂದ ಅತೀ ಕಠಿಣವಾದ ಅಂತಿಮ ಹಂತದ Chartared Accountant (CA) ಪರೀಕ್ಷೆಯಲ್ಲಿ, ಶಿರಸಿಯ ಹಳ್ಳಿಕಾನಿನ ರಮೇಶ್ ನಾಯ್ಕ್ ತೇರ್ಗಡೆಗೊಳ್ಳುವ ಮೂಲಕ ಸಾಧನೆ ಮಾಡಿದ್ದಾನೆ

ಮೇ 2025ರಲ್ಲಿ ನಡೆದ ಇನ್‌ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ (ICAI) ನೇಮಿಸಿದ ಅಂತಿಮ ಹಂತದ CA ಪರೀಕ್ಷೆಯಲ್ಲಿ ರಮೇಶ ನಾಯ್ಕ ತೇರ್ಗಡೆಗೊಂಡಿದ್ದಾರೆ. ಮಂಜುನಾಥ ಹಾಗೂ ಶಾರದಾ ದಂಪತಿಗಳ ಪುತ್ರನಾದ ರಮೇಶ ನಾಯ್ಕ ತಂದೆ ತಾಯಿ ಇಬ್ಬರೂ ದಿನಗೂಲಿ ಕೆಲಸದ ಮೂಲಕ ಕುಟುಂಬ ನಿರ್ವಹಣೆ‌ ಮಾಡುತ್ತಿದ್ದಾರೆ. ಇವರು  ಮೂಲಸೌಕರ್ಯವಿಲ್ಲದ ಅರಣ್ಯ ಪ್ರದೇಶದ ಚಿಕ್ಕ ಜೋಪಡಿಯಲ್ಲಿ ವಾಸವಾಗಿದ್ದಾರೆ. ಅವರಿಗೆ  ಸ್ವಂತ ಜಮೀನೂ ಕೂಡ ಇಲ್ಲದೆ‌  ಬೇರೆ ಕಡೆ ಕೂಲಿ ಕೆಲಸ ಮಾಡಿಯೇ ಜೀವನ ನಿರ್ವಹಣೆ ಮಾಡಬೇಕಿದೆ.

ಮನೆಯಲ್ಲಿಯೇ ಓದು, ಛಲದಿಂದ ಗೆಲುವು
ಹಳ್ಳಿಯ ಪರಿಸರ, ಆರ್ಥಿಕ ಸಂಕಷ್ಟಗಳ ನಡುವೆ ಶಾಲಾ ಜೀವನ ಆರಂಭಿಸಿದ ರಮೇಶ, ನಂತರ ಕಾಲೇಜು ಹಾಗೂ CA ತರಬೇತಿಯನ್ನು ಬಡತನದ ನಡುವೆಯೇ ಪರಿಶ್ರಮದಿಂದ  ಓದಿ ಎಲ್ಲಾ ಹಂತಗಳನ್ನು ಯಶಸ್ವಿಯಾಗಿ ಪಾಸ್ ಮಾಡಿದ್ದಾರೆ. ತರಬೇತಿಯ ಕಾಲದಲ್ಲಿಯೇ ಹಲವಾರು ಬಡತನ ಅನುಭವಿಸಿದರೂ, ನಿರಾಸೆಯಾಗದೇ ಧೈರ್ಯದಿಂದ ಮುಂದೆ ಸಾಗಿದ ಅವರು ರಮೇಶ‌ ನಾಯ್ಕ “Chartared Accountant” ಆಗಿ ಹೊರಹೊಮ್ಮಿದ್ದಾರೆ. ರಮೇಶ ನಾಯ್ಕ ಸಾಧನೆಗೆ ಅನೇಕರು ಅಭಿನಂದಿಸಿದ್ದಾರೆ‌.

ಇದನ್ನೂ ಓದಿ:ವಾರದ_ಕಥನ… ಕಾಣದ-ಬಿಂಬ-೩
ಸುಬ್ಬಮ್ಮ ಅನಾಥೆಯಲ್ಲ