ಸುದ್ದಿಬಿಂದು ಬ್ಯೂರೋ ವರದಿ
ಹುಬ್ಬಳ್ಳಿ: ಮೊಬೈಲ್ ಫೋನ್‌ಗಳ ಬಳಕೆ ಮತ್ತು ಶಾರೀರಿಕ ಚಟುವಟಿಕೆಗಳ ಕೊರತೆಯಿಂದಾಗಿ ಮಕ್ಕಳಲ್ಲಿ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತಿದೆ ಎಂದು ಹೊಸ ಅಧ್ಯಯನವೊಂದು ಎಚ್ಚರಿಕೆ ನೀಡಿದೆ. ಅತೀಯಾದ ಮೊಬೈಲ್ ಬಳಕೆ ಸಹ ಮಕ್ಕಳ ಹೃದಯಾಘಾತಕ್ಕೂ ಕಾರಣವಾಗಬಹದು ಎನ್ನುವ ಆತಂಕಕಾರಿ ವಿಚಾರ ಈ ಅಧ್ಯಯನದಿಂದ ತಿಳಿದುಬಂದಿದೆ.

ಕರ್ನಾಟಕ ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ (KMCRI), ಹುಬ್ಬಳ್ಳಿಯ ಮಲ್ಟಿಡಿಸಿಪ್ಲಿನರಿ ರಿಸರ್ಚ್ ಯೂನಿಟ್ (MRU) ಈ ಅಧ್ಯಯನವನ್ನ ನಡೆಸಿದ್ದು, ಅಧ್ಯಯನಕ್ಕಾಗಿ ಧಾರವಾಡ ಜಿಲ್ಲೆಯ ಆರು ಶಾಲೆಗಳ 8ನೇ ಹಾಗೂ 9ನೇ ತರಗತಿಯ 30ಮಂದಿ ಹೆಚ್ಚು ತೂಕವಿರುವ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗಿತ್ತು.ಈ ಮಕ್ಕಳಲ್ಲಿ ಯಾವುದೇ ಆರೋಗ್ಯ ಲಕ್ಷಣಗಳು ಹೊರಗೆ ಗೋಚರವಾಗಿಲ್ಲದಿದ್ದರೂ, ಒಳಗೋಳಿಂದ ಹಲವಾರು ಗಂಭೀರ ಸಮಸ್ಯೆಗಳು ಬೆಳೆಯುತ್ತಿವೆ ಎಂಬುದನ್ನು ಅಧ್ಯಯನದಿಂದಾಗಿ ಗೊತ್ತಾಗಿದೆ..

ಮಕ್ಕಳಲ್ಲಿ ಶಾರೀರಿಕ ಚಟುವಟಿಕೆ ಕಡಿಮೆಯಾಗಲು  ಪ್ರಮುಖ ಕಾರಣ.
ದಿನಕ್ಕೆ ಒಂದು ಗಂಟೆಗಿಂತ ಹೆಚ್ಚು ಮೊಬೈಲ್ ಬಳಕೆ, ಕಾಲ ಕಳೆಯುವುದು. ಜಂಕ್ ಫುಡ್ ಸೇವನೆ ಹೆಚ್ಚಾಗಿದೆ. ಇದರ ಪರಿಣಾಮವಾಗಿ ಮಧುಮೇಹ (ಡಯಾಬಿಟಿಸ್) ಮತ್ತು ಹೈಪರ್‌ಟೆನ್ಷನ್ (ರಕ್ತದೊತ್ತಡ) ಅಂದರೆ ರಕ್ತದ ಒತ್ತಡದ ಕಾಯಿಲೆಗಳು ಬಾಲ್ಯದಲ್ಲಿಯೇ ಕಂಡುಬರುತ್ತಿವೆ.

ಹೃದಯಾಘಾತದ ಅಪಾಯ ಎಷ್ಟು?
ಅಧ್ಯಯನದ 30 ಮಕ್ಕಳ ಪೈಕಿ ಸುಮಾರು 26 ಮಂದಿ ಮಕ್ಕಳಿಗೆ ಭವಿಷ್ಯದಲ್ಲಿ ಹೃದಯ ಸಂಬಂಧಿತ ಕಾಯಿಲೆಗಳ ಅಪಾಯ ಹೆಚ್ಚಾಗಿ ಇರುವುದು ಪತ್ತೆಯಾಗಿದೆ. ಇದು ಅತ್ಯಂತ ಆತಂಕಕಾರಿ ಅಂಶವಾಗಿದೆ ಎಂದು ಮುಖ್ಯ ಸಂಶೋಧಕ ಡಾ. ರಾಮ್ ಎಸ್. ಕೌಲ್ಗುಡ್ ತಿಳಿಸಿದ್ದಾರೆ.

ಇದನ್ನೂ ತಪ್ಪದೆ ಕ್ಲಿಕ್ ಮಾಡಿ ನಿರಂತರ ಸುದ್ದಿ ಓದಿ