ಸುದ್ದಿಬಿಂದು ಬ್ಯೂರೋ ವರದಿ
ಅಂಕೋಲಾ: ತಾಲೂಕಿನ ಬೆಳಂಬಾರ ಗ್ರಾಮದ ಮಾನ್ಯ ಮಂಜುನಾಥ ನಾಯ್ಕ ಅವರು ಮನೆಯಿಂದಲೇ ಓದಿ ನೀಟ್ ಪರೀಕ್ಷೆಯ ವೈದ್ಯಕೀಯ ಶಿಕ್ಷಣ.ವಿಭಾಗದಲ್ಲಿ ಶೇ.99.34 ಅಂಕ ಪಡೆಯುವ ಮೂಲಕ ದೇಶಕ್ಕೆ 14000ನೇ ರ್ಯಾಂಕ್ ಪಡೆದುಕೊಂಡಿದ್ದಾಳೆ.
ಬೆಳಂಬಾರ ಗ್ರಾಮದ ಮಂಜುನಾಥ ನಾಯ್ಕ ಹಾಗೂ ಸುಮಾ ನಾಯ್ಕ ದಂಪತಿಗಳ ಪುತ್ರಿ ಮಾನ್ಯ ಅಂಕೋಲಾದ ಜಿಸಿ ಕಾಲೇಜಿನ ವಿದ್ಯಾರ್ಥಿಯಾಗಿದ್ದ ಮಾನ್ಯ ಮಂಜುನಾಥ ನಾಯ್ಕ ಅವರು ದ್ವಿತೀಯ ಪಿಯುಸಿಯಲ್ಲಿ ರಾಜ್ಯಕ್ಕೆ ಒಂಬತ್ತನೇ ರ್ಯಾಂಕ್ ಗಳಿಸಿದ್ದರು. ನೀಟ್ ಬರೆಯುವ ಸಲುವಾಗಿಯೇ ಒಂದು ವರ್ಷ ಯಾವ ಕಾಲೇಜಿಗೂ ಹೋಗದೆ ಸಿದ್ಧತೆ ಮಾಡಿದ್ದರು. ಈ ವರ್ಷ ಮನೆಯಿಂದಲೇ ನೋಯ್ಡಾ ಮೂಲದ ತರಬೇತಿ ಸಂಸ್ಥೆಯಿಂದ ಆನ್ಲೈನ್ನಲ್ಲಿ ತರಬೇತಿ ಪಡೆದು ಪರೀಕ್ಷೆ ಬರೆದಿದ್ದರು.
ಮೊದಲ ಯತ್ನದಲ್ಲಿಯೇ ಉತ್ತಮ ಅಂಕ ಗಳಿಸಿದ್ದಾರೆ. ಮಾನ್ಯ ಅವರ ತಂದೆ ಮಂಜುನಾಥ ನಾಯ್ಕ ಸ್ವಂತ ಉದ್ಯೋಗ ಮಾಡಿಕೊಂಡಿದ್ದಾರೆ. ಇನ್ನೂ ವಿದ್ಯಾರ್ಥಿ ಸಾಧನೆಗೆ ಬೆಳಂಬರ ಗ್ರಾಮದ ಜನತೆ ಅಷ್ಟೆ ಅಲ್ಲದೆ ಜಿಲ್ಲಾದ್ಯಂತ ಸೋಶಿಯಲ್ ಮಿಡಿಯಾದಲ್ಲಿ ಮಾನ್ಯ ಸಾಧನೆಗೆ ಅಭಿನಂದನೆಗಳ ಮಹಾಪುರವೆ ಹರಿದು ಬರತ್ತಾ ಇದೆ.ಬಹುತೇಕರು ತಮ್ಮ ಮೊಬೈಲ್ ಸ್ಟೇಟಸ್ನಲ್ಲಿ ಮಾನ್ಯಾಳ ಪೊಟೋ,ವಿಡಿಯೋ ಹಾಕಿಕೊಂಡು ಅಭಿನಂಧಿಸುತ್ತಿದ್ದಾರೆ.
ಇದನ್ನೂ ಓದಿ