ಅಹಮದಾಬಾದ್: ನಿರೀಕ್ಷೆಯಂತೆಯೇ ನಡೆದ ಐಪಿಎಲ್ ಟೂರ್ನಿಯ ಅಂತಿಮ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ರನ್ನು ಸೋಲಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಮ್ಮ ಮೊದಲ ಐಪಿಎಲ್ ಟ್ರೋಫಿಯನ್ನು ಎತ್ತಿಹಿಡಿದಿದ್ದಾರೆ.
ಅಹಮದಾಬಾದ್ನ ನರೆಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ನ್ನು 6 ರನ್ಗಳಿಂದ ಸೋಲಿಸಿದ ಬೆಂಗಳೂರು ತಂಡ, 18 ವರ್ಷದ ನಂತರ ಮೊದಲ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಆರ್ಸಿಬಿ ನೀಡಿದ್ದ 191 ರನ್ಗಳ ಕಠಿಣ ಗುರಿಯನ್ನು ಬೆನ್ನು ಹತ್ತಿದ ಪಂಜಾಬ್ ಕಿಂಗ್ಸ್ 20 ಓವರ್ಗಳಲ್ಲಿ 7 ವಿಕೆಟ್ ಕಳೆದು 184 ರನ್ಗಳನ್ನು ಮಾತ್ರ ಮಾಡಿದರು. ಪಂಜಾಬ್ ಪರವಾಗಿ ಪ್ರಿಯಾಂಶ್ ಆರ್ಯಾ 24 ರನ್ ಮಾಡಿದರು, ಪ್ರಭ್ ಸಿಮ್ರನ್ ಸಿಂಗ್ 26 ರನ್ಗಳಿಗೆ ಔಟಾದರು.
ಕ್ಯಾಪ್ಟನ್ ಶ್ರೇಯಸ್ ಅಯ್ಯರ್ ಕೇವಲ 1 ರನ್ ಮಾಡಿ ರೊಮಾರಿಯೋ ಶೆಪರ್ಡ್ ಅವರಿಗೆ ವಿಕೆಟ್ ಒಪ್ಪಿಸಿದರು. ಈ ಹಂತದಲ್ಲಿ ಪಂಜಾಬ್ ಇನಿಂಗ್ಸ್ಗೆ ಬಲ ನೀಡಿದ ಜೋಷ್ ಇಂಗ್ಲಿಸ್ 23 ಎಸೆತಗಳಲ್ಲಿ 39 ರನ್ಗಳನ್ನು ಮಾಡಿದರು. ಆದರೆ ಅವರು ಕುನಾಲ್ ಪಾಂಡ್ಯಾ ಅವರ ಬಳಿಗೆ ವಿಕೆಟ್ ನೀಡಿದರು.
ಆರ್ಸಿಬಿ ಪರವಾಗಿ ಭುವನೇಶ್ವರ್ ಕುಮಾರ್ ಮತ್ತು ಕುನಾಲ್ ಪಾಂಡ್ಯಾ ತಲಾ 2 ವಿಕೆಟ್ ಪಡೆದರು, ಯಶ್ ದಯಾಲ್, ಜೋಷ್ ಹೇಜಲ್ವುಡ್ ಮತ್ತು ರೊಮಾರಿಯೋ ಶೆಪರ್ಡ್ ತಲಾ 1ವಿಕೆಟ್ ಪಡೆದರು.
ಈ ಇನಿಂಗ್ಸ್ನಲ್ಲಿ ಶಶಾಂಕ್ ಸಿಂಗ್ ಕೊನೆಯ ಹಂತದಲ್ಲಿ ಪಂಜಾಬ್ ಪರ ಹೋರಾಟ ನಡೆಸಿ ಕೇವಲ 30 ಎಸೆತಗಳಲ್ಲಿ 6 ಸಿಕ್ಸರ್ ಮತ್ತು 3 ಬೌಂಡರಿಗಳ ಸಹಾಯದಿಂದ ಅಜೇಯ 61 ರನ್ ಗಳಿಸಿದರು. ಆದರೆ ತಮ್ಮ ತಂಡವನ್ನು ಸೋಲಿನಿಂದ ರಕ್ಷಿಸಲು ಸಾಧ್ಯವಾಗಲಿಲ್ಲ. ಕೊನೆಗೆ ಪಂಜಾಬ್ 20 ಓವರ್ಗಳಲ್ಲಿ 7 ವಿಕೆಟ್ ಕಳೆದು 184 ರನ್ಗಳನ್ನು ಮಾಡಿತು ಮತ್ತು ಕೇವಲ 6 ರನ್ಗಳಿಂದ ಸೋಲಿಗೆ ಒಳಗಾಯಿತು.