ಸುದ್ದಿಬಿಂದು ಬ್ಯೂರೋ‌ ವರದಿ
ಬೆಂಗಳೂರು : ರಾಜ್ಯದ ಸರಕಾರಿ ಆಸ್ಪತ್ರೆಗಳಲ್ಲಿ ರಾಷ್ಟ್ರೀಯ ಆರೋಗ್ಯ ಮಿಷನ್ (ಎನ್‌ಎಚ್‌ಎಂ) ಯೋಜನೆಯಡಿಯಲ್ಲಿ ಕೆಲಸ ಮಾಡುತ್ತಿರುವ ವೈದ್ಯರು ಹಾಗೂ ನರ್ಸ್‌ಗಳ ವೇತನವನ್ನು ಪರಿಷ್ಕರಿಸಲಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ
.

ಮಹತ್ವದ ಘೋಷಣೆ ಮಾಡಿದ ಅವರು, “ರಾಜ್ಯದ ಸರಕಾರಿ ಆಸ್ಪತ್ರೆಗಳಲ್ಲಿ ಎನ್‌ಎಚ್‌ಎಂ ಯೋಜನೆಯಡಿಯಲ್ಲಿ ಸೇವೆ ಸಲ್ಲಿಸುತ್ತಿರುವ ವೈದ್ಯಕೀಯ ಸಿಬ್ಬಂದಿಯ ವೇತನ ಪರಿಷ್ಕರಣೆ ಮಾಡಲಾಗಿದೆ. ಈ ವೇತನವೃದ್ಧಿ ಹೊಸದಾಹಿ ನೇಮಕವಾಗುವ ಸಿಬ್ಬಂದಿಗೆ ಮಾತ್ರ ಅನ್ವಯವಾಗಲಿದೆ. ಹಳೆಯ ಸಿಬ್ಬಂದಿಗೆ ಹಳೆಯ ವೇತನವೇ ಮುಂದುವರಿಯಲಿದೆ.ಅವರು ಹೊಸ ವೇತನಕ್ಕೆ ಅರ್ಹರಾಗಬೇಕೆಂದರೆ ರಾಜೀನಾಮೆ ನೀಡಿ ಮತ್ತೆ ಅರ್ಜಿ ಹಾಕಬೇಕಾಗುತ್ತದೆ. ಆದರೆ, ಅವರು ಮತ್ತೆ ನೇಮಕವಾಗುತ್ತಾರೆ ಎಂಬ ಖಾತರಿಯಿಲ್ಲ” ಎಂದು ತಿಳಿಸಿದ್ದಾರೆ.

ಮಾತು ತಪ್ಪಿದ ಸರಕಾರ;
ಚುನಾವಣಾ ಪೂರ್ವದಲ್ಲಿ ಕಾಂಗ್ರೇಸ್ ತನ್ನ ಪ್ರನಾಳಿಕೆಯಲ್ಲಿ ಸಹ ರಾಜ್ಯದಲ್ಲಿ ತಮ್ಮ ಸರಕಾರ ಅಧಿಕಾರ ಬಂದರೆ ಹಾಲಿ ಇರುವ ಎಲ್ಲಾ (NHM) ವೈದ್ಯರು, ಸ್ಟಾಫ್ ನರ್ಸ್‌ಗಳು ಹಾಗೂ ಈ ಯೋಜನೆಯಡಿ ಬರುವ ಸಿಬ್ಬಂದಿಗಳ ವೇತನ ಹೆಚ್ಚಳ ಮಾಡುವುದಾಗಿ ಭರವಸೆ ನೀಡಿತ್ತು. ಅದರೆ ಈಗ ಅಧಿಕಾರಕ್ಕೆ ಬಂದ ಮೇಲೆ ಮಾತು ಬದಲಿಸುತ್ತಿದೆ.. ಹೊಸದಾಗಿ ನೇಮಕಗೊಂಡವರ ವೇತನ ಹೆಚ್ಚಳ‌ ಮಾಡುವುದಾಗಿ ಹೇಳಿಕೆ ನೀಡಿದ್ದಾರೆ.ಸರಕಾರದ ಈ ದ್ವಂದ್ವ ನೀತಿಯಿಂದಾಗಿ ಜೀವನ ಪೂರ್ತಿ ಕಡಿಮೆ‌‌ ಸಂಬಂಳದಲ್ಲಿ ಕೆಲಸ ಮಾಡುತ್ತಿರು ವೈದ್ಯರನ್ನ ಹಾಗೆ ಸ್ಟಾಫ್ ನರ್ಸ್‌ಗಳನ್ನ ಈ ಸರಕಾರ ಜೀವಂತವಾಗಿ ಸಾಯಿಸಿದಂತೆ. ಇಷ್ಟು ವರ್ಷಗಳ ಕಾಲ ಅತೀ ಕಡಿಮೆ‌ ವೇತನದಲ್ಲಿ ಕೆಲಸ‌ ಮಾಡಿಸಿಕೊಂಡು ಇದೀಗ
ಅವರನ್ನ ನಡು ನೀರಿನಲ್ಲಿ ಬಿಡಲು ಮುಂದಾಗಿರುವುದಕ್ಕೆ  ಜನಸಾಮಾನ್ಯರೆ ಅಸಮಧಾನ ವ್ಯಕ್ತಪಡಿಸುತ್ತಿದ್ದಾರೆ.

ವೇತನವೃದ್ಧಿಯ ವಿವರಗಳು ಹೀಗಿವೆ
ಎಂಬಿಬಿಎಸ್ ವೈದ್ಯರು :-
ಹಳೆಯ ವೇತನ :46,895 ರಿಂದ 50,000 ಸಾವಿರ
ಹೊಸ ವೇತನ: 60,000

ತಜ್ಞನ ವೈದ್ಯರು –
ಹಳೆಯ ವೇತನ: 1,10,000 ರಿಂದ ₹1,30,000
ಹೊಸ ವೇತನ: ₹1,40,000

ಸ್ಟಾಫ್ ನರ್ಸ್‌ಗಳು
ಹಳೆಯ ವೇತನ: ₹14,186 ರಿಂದ ₹18,774
ಹೊಸ ವೇತನ: ₹22,000

ಖಾಲಿ ಹುದ್ದೆಗಳ ಮಾಹಿತಿ:
ರಾಜ್ಯದಲ್ಲಿ ಒಟ್ಟು 9,041 ಹುದ್ದೆಗಳಿವೆ. ಅದರಲ್ಲಿ 1,398 ಎಂಬಿಬಿಎಸ್ ವೈದ್ಯರು, 899 ವಿಶೇಷಜ್ಞರು ಹಾಗೂ 936 ಸ್ಟಾಫ್ ನರ್ಸ್‌ಗಳ ಹುದ್ದೆಗಳಿವೆ. ಈ ಪೈಕಿ ಪ್ರಸ್ತುತ 579 ಎಂಬಿಬಿಎಸ್ ವೈದ್ಯರು, 305 ವಿಶೇಷಜ್ಞರು ಹಾಗೂ 936 ನರ್ಸ್‌ಗಳು ಕಾರ್ಯನಿರ್ವಹಿಸುತ್ತಿದ್ದಾರೆ.

ಅರ್ಜಿ ಆಹ್ವಾನಿಸಿದರು ಬಾರದ ವೈದ್ಯರು:
ರಾಜ್ಯದಲ್ಲಿ ವೈದ್ಯಕೀಯ ಸಿಬ್ಬಂದಿಗೆ ನೀಡಲಾಗುತ್ತಿರುವ ಕಡಿಮೆ ವೇತನದ ಕಾರಣದಿಂದಾಗಿ, ಸರ್ಕಾರ ಅಹ್ವಾನ ನೀಡಿದರೂ ವೈದ್ಯರು ಹಾಗೂ ನರ್ಸ್‌ಗಳು ಸರ್ಕಾರಿ ಆಸ್ಪತ್ರೆಗಳಲ್ಲಿ ಕೆಲಸ ಮಾಡಲು ಆಸಕ್ತಿ ತೋರಿಸುತ್ತಿಲ್ಲ. ಈ ಕಾರಣಕ್ಕಾಗಿ ವೇತನ ಪರಿಷ್ಕರಣೆಗೆ ಕೇಂದ್ರ ಸರ್ಕಾರದ ಅನುದಾನದೊಳಗೆ ಅನುಮತಿ ಕೇಳಿದ್ದೇವೆ. ಕಳೆದ ಎಂಟು ತಿಂಗಳಿಂದ ಈ ಕುರಿತು ಮನವಿ ಮಾಡುತ್ತಿದ್ದೆವು, ಈಗ ಕೇಂದ್ರದಿಂದ ಅನುಮತಿ ಸಿಕ್ಕಿದೆ ಎಂದು ಸಚಿವರು ಹೇಳಿದರು.

ಹಳೆಯ ವೈದ್ಯರಿಗೆ ಹೊಸ ವೇತನ ಬೇಕಾದರೆ ರಾಜೀನಾಮೆ ಬೇಕು:
“ಹಳೆಯ ಸಿಬ್ಬಂದಿಗೆ ಹಳೆಯ ವೇತನವೇ. ಅವರು ಹೊಸ ವೇತನ ಬಯಸಿದರೆ, ರಾಜೀನಾಮೆ ನೀಡಿ ಮರುಅರ್ಜಿಸುಲಿಯಬೇಕು. ಅರ್ಜಿ ಆಯ್ಕೆಯಾದರೆ ಮಾತ್ರ ಹೊಸ ವೇತನ ಸಿಗಲಿದೆ. ಇಲ್ಲದಿದ್ದರೆ ಹಳೆಯ ವೇತನದಲ್ಲೇ ಮುಂದುವರೆಯಬೇಕು”
– ದಿನೇಶ್ ಗುಂಡೂರಾವ್, ಆರೋಗ್ಯ ಸಚಿವ

ಮೂರು ತಿಂಗಳಿನಿಂದ 30 ಸಾವಿರ ಸಿಬ್ಬಂದಿಗೆ ವೇತನವಿಲ್ಲ:
ರಾಜ್ಯದ ಆರೋಗ್ಯ ಇಲಾಖೆಯ ಎನ್‌ಎಚ್‌ಎಂ ಯೋಜನೆಯಡಿಯಲ್ಲಿ 28,250 ಕ್ಕಿಂತಲೂ ಹೆಚ್ಚು ವೈದ್ಯರು ಹಾಗೂ ವೈದ್ಯಕೀಯ ಸಹಾಯಕರು ಕೆಲಸ ಮಾಡುತ್ತಿದ್ದಾರೆ. ಆದರೆ, ಕಳೆದ ಮೂರು ತಿಂಗಳಿಂದ ಇವರಿಗೆ ವೇತನ ನೀಡಲಾಗಿಲ್ಲ. ಇದರಿಂದಾಗಿ ವೈದ್ಯಕೀಯ ಸಿಬ್ಬಂದಿ ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ. ಸರ್ಕಾರದ ಸೇವೆ ಮಾಡುತ್ತಿರುವ ಸಿಬ್ಬಂದಿಯೇ ತಮ್ಮ ವೇತನಕ್ಕಾಗಿ ಅಳುವ ಸ್ಥಿತಿ ನಿರ್ಮಾಣವಾಗಿದೆ.

ಇದನ್ನೂ ಓದಿ