ಸುದ್ದಿಬಿಂದು ಬ್ಯೂರೋ ವರದಿ
ಭಟ್ಕಳ : ಆಪರೇಷನ್ ಸಿಂದೂರ್ ಬಗ್ಗೆ ನಮಗೆ ಗೌರವವಿದೆ.ಯೋಧರಿಗೆ ತಂದೆ ತಾಯಿಯ ಸ್ಥಾನ ಕೊಡುತ್ತೇವೆ. ಆದರೆ ಬಿಜೆಪಿಗರು ಅಪರೇಷನ್ ಸಿಂಧೂರ್ ಹೆಸರಲ್ಲಿ ರಾಜಕಾರಣ ಮಾಡುತ್ತಿದ್ದಾರೆಂದು ಉತ್ತರ ಕನ್ನಡ ಜಿಲ್ಲಾ‌ ಉಸ್ತುವಾರಿ ಸಚಿವ ಮಂಕಾಳ್ ವೈದ್ಯ ಬಿಜೆಪಿ ವಿರುದ್ದ ಗುಡುಗಿದ್ದಾರೆ.

ನಮ್ಮ ಹೆಣ್ಣು ಮಕ್ಕಳ ಸಿಂಧೂರ ಅಳಿಸಿದ ಪಾಪಿ ಪಾಕಿಸ್ತಾನದ ವಿರುದ್ದ ಕ್ರಮ ಕೈಗೊಳ್ಳಲು ನಾವು ಬೆಂಬಲಿಸಿದ್ದೆವು. ಆದರೆ ಬಿಜೆಪಿಗರಿಗೆ ಸಾವು ಬೇಕಾಗಿದೆ. ಈ ವಿಚಾರದಲ್ಲೂ ರಾಜಕೀಯ ಮಾಡುತ್ತಿದ್ದಾರೆ. ಸೈನಿಕರ ವಿಚಾರದಲ್ಲಿ ಬಿಜೆಪಿಗರು ರಾಜಕೀಯ ಮಾಡಬಾರದು.ನಾವು ಇಲ್ಲಿ ಬದುಕಿದ್ದೇವೆ ಎಂದರೆ ಅದು ಸೈನಿಕರಿಂದ ಎನ್ನುವುದನ್ನ ತಿಳಿದುಕೊಳ್ಳಬೇಕು. ಪದೇ ಪದೇ ಬಿಜೆಪಿಗರು ರಾಜಕೀಯ ಮಾಡುವುದು ಒಳ್ಳೆಯದಲ್ಲ ಎಂದರು.

ಇದನ್ನೂ ಓದಿ