ಸುದ್ದಿಬಿಂದು ಬ್ಯೂರೋ ವರದಿ
ನವದೆಹಲಿ: ಪ್ರಧಾನಿ ಮೋದಿ ದೇಶವನ್ನುದ್ದೇಶಿಸಿ ಮಾತನಾಡಿದ ಎರಡು ಗಂಟೆಗಳೊಳಗೆ ಪಾಕಿಸ್ತಾನವು ಮತ್ತೆ ಜಮ್ಮು ಗಡಿಯಲ್ಲಿ ಡ್ರೋನ್ ದಾಳಿಯನ್ನು ನಡೆಸಿದ್ದು, ಇದು ಸಣ್ಣ ಮಟ್ಟದ ದಾಳಿ ಎಂದು ಸೇನೆ ಸ್ಪಷ್ಟಪಡಿಸಿದೆ.

ಜಮ್ಮುವಿನ ಸಾಂಬಾ ಕ್ಷೇತ್ರದಲ್ಲಿ ಪಾಕಿಸ್ತಾನ ಡ್ರೋನ್ ದಾಳಿ ನಡೆಸಿದ್ದು, ಎಲ್ಲಾ ಡ್ರೋನ್‌ಗಳನ್ನು ಭಾರತೀಯ ಸೇನೆ ಯಶಸ್ವಿಯಾಗಿ ಹೊಡೆದು ಹಾಕಿದೆ. ಈ ಬೆಳವಣಿಗೆಯ ಬಳಿಕ ಗಡಿಭಾಗದಲ್ಲಿ ಮತ್ತೊಂದು ಬಾರಿ ಉದ್ವಿಗ್ನತೆ ಉಂಟಾಗಿದ್ದು, ಅಮೃತಸರಕ್ಕೆ ತೆರಳುತ್ತಿದ್ದ ವಿಮಾನವೊಂದು ದೆಹಲಿಗೆ ಹಿಂದಿರುಗಿದೆ.

ಜಮ್ಮು ಮತ್ತು ಕಾಶ್ಮೀರವಲ್ಲದೆ ಕಥುವಾ ಮತ್ತು ಅಮೃತಸರದಲ್ಲಿಯೂ ಪಾಕಿಸ್ತಾನ ಡ್ರೋನ್‌ಗಳ ಮೂಲಕ ದಾಳಿ ಮಾಡಲು ಯತ್ನಿಸಿದೆ. ಆದರೆ ಭಾರತೀಯ ಸೇನೆ ಈ ಎಲ್ಲಾ ಪ್ರಯತ್ನಗಳನ್ನು ಪರಿಣಾಮಕಾರಿಯಾಗಿ ತಡೆದು ಹಾಕಿದೆ.

ಇದನ್ನೂ ಓದಿ