ನವದೆಹಲಿ: ಭಾರತೀಯ ಸಶಸ್ತ್ರ ಪಡೆಗಳು ಮಧ್ಯರಾತ್ರಿಯಲ್ಲಿ ಪಾಕಿಸ್ತಾನ ಮತ್ತು ಪಾಕಿಸ್ತಾನ ವಶದಲ್ಲಿರುವ ಜಮ್ಮು ಮತ್ತು ಕಾಶ್ಮೀರದಲ್ಲಿನ ಭಯೋತ್ಪಾದಕ ನೆಲೆಗಳ ಮೇಲೆ ದಾಳಿ ನಡೆಸಿ ‘ಆಪರೇಶನ್ ಸಿಂಧೂರ’ ಆರಂಭಿಸಿವೆ. ಒಟ್ಟು ಒಂಬತ್ತು ಸ್ಥಳಗಳನ್ನು ಗುರಿಯಾಗಿಸಲಾಗಿದೆ ಎಂದು ರಕ್ಷಣಾ ಸಚಿವಾಲಯ ಹೇಳಿದೆ. ಯಾವುದೇ ಪಾಕಿಸ್ತಾನಿ ಸೇನಾ ಸೌಕರ್ಯಗಳನ್ನು ಗುರಿಯಾಗಿಸಲಾಗಿಲ್ಲ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.
25 ಭಾರತೀಯರು ಮತ್ತು ಒಬ್ಬ ನೆಪಾಳಿ ನಾಗರಿಕನ ಬಲಿದಾನಕ್ಕೆ ಕಾರಣವಾದ ಪಹಲ್ಗಾಮ್ ಭಯಾನಕ ಉಗ್ರದಾಳಿಯ ನಂತರ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸಚಿವಾಲಯ ಹೇಳಿದೆ. ಈ ದಾಳಿಗೆ ಹೊಣೆವಿರುವವರನ್ನು ಖಂಡಿತವಾಗಿ ಶಿಕ್ಷೆಗೊಳಪಡಿಸಲಾಗುವುದು ಎಂದು ತಿಳಿಸಿದೆ. ‘ಆಪರೇಶನ್ ಸಿಂಧೂರ’ ಕುರಿತು ಹೆಚ್ಚಿನ ಮಾಹಿತಿಯನ್ನು ಬಳಿಕ ನೀಡಲಾಗುವುದು ಎಂದು ಕೂಡ ಸಚಿವಾಲಯ ಹೇಳಿದೆ.
ರಾತ್ರಿ ಪೂರ್ತಿ ನಡೆದ ಖಚಿತ ಗುರಿ ದಾಳಿಗಳಲ್ಲಿ ಒಟ್ಟು ಒಂಬತ್ತು ಉಗ್ರಗೂಡುಗಳನ್ನು ನಾಶಗೊಳಿಸಲಾಗಿದೆ. ಈ ದಾಳಿಗಳಲ್ಲಿ 70ಕ್ಕೂ ಹೆಚ್ಚು ಭಯೋತ್ಪಾದಕರ ಹತ್ಯೆಯಾಗಿದೆ.
ಇದನ್ನೂ ಓದಿ
- ಬ್ರೇಕ್ಫಾಸ್ಟ್ ಟೇಬಲ್ ಮೇಲೆ ಸಿಎಂ ನಿರ್ಧಾರ..? ಕುತೂಹಲ ಮೂಡಿಸಿರುವ ನಾಳೆಯ ಸಿದ್ಧು–ಡಿಕೆ ಮಾತುಕತೆ
- ಬಿಸಿಯೂಟ ಸೇವಿಸಿದ 22 ವಿದ್ಯಾರ್ಥಿಗಳು ಅಸ್ವಸ್ಥ
- ಮಠವು ಪರಂಪರೆ ಹಾಗೂ ಆಧುನಿಕತೆಯ ಜೊತೆ ಸೇತುವೆಯಾಗುವ ಪ್ರಮುಖ ಭೂಮಿಯಕೆಯಾಗಲಿ: ನರೇಂದ್ರ ಮೋದಿ
- ಕಾಲ ಬಳಿ ಹೆಡೆ ಎತ್ತಿದ ಕಿಂಗ್ ಕೋಬ್ರಾ! ಕ್ಷಣಾರ್ಧದಲ್ಲಿ ಬುದ್ಧಿವಂತಿಕೆಯಿಂದ ಪತ್ನಿಯನ್ನ ಉಳಿಸಿದ ಪತಿ : ಮಿರ್ಜಾನದಲ್ಲೊಂದು ಅಚ್ಚರಿಯ ಘಟನೆ


