ಸುದ್ದಿಬಿಂದು ಬ್ಯೂರೋ ವರದಿ,suddibindu Digital news
ಕಲಬುರಗಿ : ನಿಂತಿದ್ದ ಲಾರಿಗೆ ಮ್ಯಾಕ್ಸಿಕ್ಯಾಬ್ ಡಿಕ್ಕಿ ಹೊಡೆದು ಒಂದೇ ಕುಟುಂಬದ ಐವರು ಸ್ಥಳದಲ್ಲೆ ಸಾವನ್ನಪ್ಪಿರುವ ಘಟನೆ ಕಲಬುರಗಿ ಜಿಲ್ಲೆ ಜೇವರ್ಗಿ ತಾಲೂಕಿನ ಸೊನ್ನ ಕ್ರಾಸ್ ಬಳಿ ನಡೆದಿದೆ.
ಮಾಲನ್ (52), ವಾಜೀದ್ (2), ಮೆಹಬೂಬ್ ಬಿ (53), ಮೆಹಬೂಬ್ (29), ಪ್ರಿಯಾಂಕಾ (13) ಎಂಬುವವರು ಸಾವನ್ನಪ್ಪಿದ್ದಾರೆ.ಮ್ಯಾಕ್ಸಿಕ್ಯಾಬ್ನಲ್ಲಿ 31ಮಂದಿ ಬಾಗಲಕೋಟೆಯಿಂದ ಕಲಬುರಗಿ ನಗರದ ಖ್ವಾಜಾ ಬಂದೇ ನವಾಜ್ ದರ್ಗಾಕ್ಕೆ ಬರುತ್ತಿದ್ದರು. ಈ ವೇಳೆ ಚಾಲಕ ನಿಯಂತ್ರಣ ತಪ್ಪಿದ ಮ್ಯಾಕ್ಸಿಕ್ಯಾಬ್ ನಿಂತಿದ್ದ ಲಾರಿಗೆ ಡಿಕ್ಕೆ ಹೊಡೆದೆ. ಪರಿಣಾಮ ಐದು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದು, 11ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
KA-22-C 3582 ಸಂಖ್ಯೆಯ ಲಾರಿಗೆ KA-28-A-7224 ಸಂಖ್ಯೆಯ ಮ್ಯಾಕ್ಸಿಕ್ಯಾಬ್ ಡಿಕ್ಕಿ ಹೊಡೆದಿದೆ. ನೇಲೋಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ
- ಕಾರವಾರ ದೇವಭಾಗ ಬೀಚ್ನಲ್ಲಿ ಅದ್ಭುತ ನೋಟ! ರಾಶಿ ರಾಶಿ ಮೀನು ದಡಕ್ಕೆ
- Bigg Boss/ಬಿಗ್ ಬಾಸ್ ಮನೆಗೆ ತಾತ್ಕಾಲಿಕ ಬೀಗ ಜಡಿದ ಅಧಿಕಾರಿಗಳು
- “105 ವರ್ಷಗಳ ಬಳಿಕ ಕೆಡಿಸಿಸಿ ಬ್ಯಾಂಕ್ನ ಇತಿಹಾಸದಲ್ಲಿ ದಿಟ್ಟ ಮಹಿಳೆಯ ಹೊಸ ಅಧ್ಯಾಯ”
- ಶಾಲೆಗಳಿಗೆ ಇನ್ನೂ ಹತ್ತು ದಿನ ರಜೆ ವಿಸ್ತರಣೆ : ಸಿ ಎಂ ಸಿದ್ದರಾಮಯ್ಯ