ಮುಂಬೈ: ಪ್ರಧಾನಮಂತ್ರಿ ಆದ ನಂತರ ಮೊದಲ ಬಾರಿಗೆ ನರೇಂದ್ರ ಮೋದಿ ಅವರು ನಾಗ್ಪುರದಲ್ಲಿರುವ ಆರ್ಎಸ್ಎಸ್ ಕಚೇರಿಗೆ ಭೇಟಿ ನೀಡಿದ್ದಾರೆ. ಗುಡಿ ಪಾಡ್ವಾ ಪ್ರಯುಕ್ತ, ನರೇಂದ್ರ ಮೋದಿ ಅವರು ನಾಗ್ಪುರದ ಸ್ಮೃತಿ ಮಂದಿರಕ್ಕೆ ತೆರಳಿ ಆರ್ಎಸ್ಎಸ್ ಸ್ಥಾಪಕ ಡಾ. ಕೆ.ಬಿ. ಹೆಡ್ಗೇವಾರ್ ಅವರಿಗೆ ನಮನ ಸಲ್ಲಿಸಿದರು. ಪ್ರಧಾನಿ ಮೋದಿ ಅವರ ಭೇಟಿಯ ಕುರಿತಾಗಿ ಶಿವಸೇನೆ ನಾಯಕ ಸಂಜಯ್ ರಾವುತ್ ಅವರ ಹೇಳಿಕೆ ರಾಜಕೀಯ ವಲಯದಲ್ಲಿ ಸಂಚಲನ ಸೃಷ್ಟಿಸಿದೆ.
ಪ್ರಧಾನಮಂತ್ರಿ ಮೋದಿ ಅವರು ಸೆಪ್ಟೆಂಬರ್ನಲ್ಲಿ ತಮ್ಮ ನಿವೃತ್ತಿಯನ್ನು ಘೋಷಿಸುವ ಹಿನ್ನೆಲೆಯಲ್ಲಿ ಅವರು ಆರ್ಎಸ್ಎಸ್ ಕಚೇರಿಗೆ ಭೇಟಿ ನೀಡಿದ್ದಾರೆ ಎಂಬ ಸಂಜಯ್ ರಾವುತ್ ಅವರ ಹೇಳಿಕೆ ಈಗ ರಾಜಕೀಯ ವಲಯಲ್ಲಿ ಹೊಸ ಚರ್ಚೆ ಕಾರಣವಾಗಿದೆ..
ಕಳೆದ 10-11 ವರ್ಷಗಳಲ್ಲಿ ಮೋದಿ ಅವರು ಆರ್ಎಸ್ಎಸ್ ಕಚೇರಿಗೆ ಭೇಟಿ ನೀಡಿಲ್ಲ. ಆದರೆ ಈಗ ಅವರು ಮುಖ್ಯಸ್ಥ ಮೋಹನ್ ಭಾಗವತ್ ಅವರಿಗೆ ‘ಟಾಟಾ, ಬೈ ಬೈ’ ಹೇಳಲು ಆಗಮಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಉತ್ತರಾಧಿಕಾರಿಯನ್ನು ಆರ್ಎಸ್ಎಸ್ ನಿರ್ಧರಿಸುತ್ತದೆ ಎಂದು ಸಂಜಯ್ ರಾವುತ್ ಹೇಳಿದ್ದಾರೆ.
‘ನಾನು ಅರ್ಥಮಾಡಿಕೊಂಡಂತೆ, ಸಮಗ್ರ ಸಂಘ ಪರಿವಾರ ದೇಶದ ನಾಯಕರಲ್ಲಿ ಬದಲಾವಣೆಯನ್ನು ಬಯಸುತ್ತದೆ. ಪ್ರಧಾನಿ ಮೋದಿ ಅವರ ಅವಧಿ ಮುಗಿಯಿದೆ.ಆರ್ಎಸ್ಎಸ್ ಬದಲಾವಣೆ ಬಯಸುತ್ತದೆ. ಅವರು ಮುಂದಿನ ಬಿಜೆಪಿ ಮುಖ್ಯಸ್ಥರನ್ನು ಆಯ್ಕೆ ಮಾಡಲು ಇಚ್ಛಿಸುತ್ತಿದ್ದಾರೆ’ ಎಂದು ಸಂಜಯ್ ರಾವುತ್ ಮುಂಬೈಯಲ್ಲಿ ಪತ್ರಕರ್ತರೊಂದಿಗೆ ಮಾತನಾಡುವ ವೇಳೆ ಹೇಳಿದ್ದಾರೆ.
ಇದನ್ನೂ ಓದಿ
- ದೇಶಪಾಂಡೆ ವಿವಾದಾತ್ಮಕ ಹೇಳಿಕೆ : ಬಿಜೆಪಿ ರಾಜ್ಯ ಉಪಾಧ್ಯಕ್ಷ ರೂಪಾಲಿ ನಾಯ್ಕ ಖಂಡನೆ
- State Level Teacher Award: ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಪಿ ಆರ್ ನಾಯ್ಕ, ಗೋಪಾಲ ನಾಯ್ಕ ಸೇರಿ ಮೂವರು ಆಯ್ಕೆ
- ಕುಮಟಾದಲ್ಲಿ ಗಣೇಶ ವಿಸರ್ಜನೆ ವೇಳೆ ಡಿಜೆ ಬಳಕೆ ವಿರೋಧಿಸಿದ ವ್ಯಕ್ತಿಗೆ ಪೊಲೀಸರ ಎದುರೆ ಹಲ್ಲೆ
- Lunar Eclipse 2025:ಸೆಪ್ಟಂಬರ್ 7ಕ್ಕೆ ಮಧ್ಯಾಹ್ನದ ಬಳಿಕ ಭೋಜನ ಮಾಡುವಂತಿಲ್ಲ