ಬೆಂಗಳೂರು: ರಾಜ್ಯದಲ್ಲಿ ಒಂದಲ್ಲಾ ಒಂದು ಸಾಮಗ್ರಿಗಳ‌ ಬೆಳೆ ಏರಿ ಆಗುತ್ತಿರುವುದರಿಂದ ಈಗಾಗಲೆ ಜನಸಾಮಾನ್ಯರು ಹೈರಾಣಾಗಿದ್ದಾರೆ. ಇದರ ನಡುವೆ ಇದೀಗ  ರಾಜ್ಯ ಸರ್ಕಾರ ಸಾರ್ವಜನಿಕರಿಗೆ ಮತ್ತೊಂದು ಶಾಕ್‌ಕಿಂಗ್ ಸುದ್ದಿ ನೀಡಿದೆ. ರಾಜ್ಯದಲ್ಲಿ ನಂದಿನಿ ಹಾಲಿನ ಬೆಲೆಯನ್ನು ಇಂದು ಲೀಟರ್‌ಗೆ 4ರೂಪಾಯಿ ಏರಿಸಲಾಗಿದೆ. ಈ ನಿರ್ಧಾರವನ್ನು ರಾಜ್ಯ ಸರ್ಕಾರ ಗಟ್ಟಿಯಾಗಿ ಸಮರ್ಥಿಸಿಕೊಂಡಿದೆ.

ಏಪ್ರಿಲ್ 1ರಿಂದ ನಂದಿನಿ ಹಾಲಿನ ಬೆಲೆ ಹೆಚ್ಚಳ!
ಕ್ಯಾಬಿನೆಟ್ ಸಭೆಯ ನಿರ್ಧಾರಕ್ಕೆ ಅನುಗುಣವಾಗಿ, ಪಶುಸಂಗೋಪನಾ ಸಚಿವ ಕೆ. ವೆಂಕಟೇಶ್ ಹಾಲಿನ ಬೆಲೆ ಏರಿಕೆಯನ್ನು ಕುರಿತು ಮಾತನಾಡಿ. ಹಾಲಿನ ಉತ್ಪಾದನಾ ವೆಚ್ಚ ಹೆಚ್ಚಳದ ಕಾರಣದಿಂದ ಹಾಲಿನ ದರವನ್ನು ಹೆಚ್ಚಿಸುವ ಒತ್ತಡ ಹಲವು ದಿನಗಳಿಂದ ಇತ್ತು. ಇದೀಗ 4ರೂಪಾಯಿ ಏರಿಸಲು ನಿರ್ಧಾರ ಕೈಗೊಳ್ಳಲಾಗಿದೆ, ಮತ್ತು ಇದು ಏಪ್ರಿಲ್ 1 ರಿಂದ ಜಾರಿಗೆ ಬರಲಿದೆ.

ಕೇರಳದಲ್ಲಿ ಲೀಟರ್ ಹಾಲು 52ರೂಪಾಯಿ‌ಮತ್ತು ಗುಜರಾತ್‌ನಲ್ಲಿ 53ರೂ.ಇದೆ. ರಾಜ್ಯದ ಹಾಲು ಉತ್ಪಾದಕರಿಗಾಗಿ ನಂದಿನಿ ಹಾಲಿನ ದರವನ್ನು ಹೆಚ್ಚಿಸಲಾಗಿದೆ. ಈ ಹೆಚ್ಚುವರಿ ಹಣ ಸಂಪೂರ್ಣವಾಗಿ ರೈತರಿಗೆ ನೀಡಲಾಗುವುದು ಎಂದು ಸಚಿವ ಕೆ. ವೆಂಕಟೇಶ್ ತಿಳಿಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಕಳೆದ 2 ವರ್ಷಗಳಲ್ಲಿ ಹಾಲಿನ ದರವನ್ನು 3 ಬಾರಿ ಹೆಚ್ಚಿಸಿದೆ. 2023 ಆಗಸ್ಟ್ 1 ರಂದು 3ರೂ, 2024 ಜೂನ್ 25 ರಂದು 2ರೂ ಹೆಚ್ಚಿಸಲಾಗಿತ್ತು. ಈಗ 4ರೂ ಹೆಚ್ಚಿಸಿ, ಕಳೆದ 2 ವರ್ಷಗಳಲ್ಲಿ ಒಟ್ಟು 9ರೂ ಏರಿಕೆ ಮಾಡಲಾಗಿದೆ.

ಪ್ರಸ್ತುತ ಮತ್ತು ಹೊಸ ಹಾಲಿನ ದರಗಳು: