ಸುದ್ದಿಬಿಂದು ಬ್ಯೂರೋ ವರದಿ
ಕುಮಟಾ : ವಾಲಗಳ್ಳಿ ಪಂಚಾಯತ್ ಗ್ರಂಥಾಲಯ ನೂತನ ಕಟ್ಟಡ ನಿರ್ಮಾಣಕ್ಕೆ ಅನುದಾನ ಬಂದು ಎರಡು ತಿಂಗಳಾದರೂ, ತಾ.ಪಂ.‌ ಆಡಳಿತಾತ್ಮಕ ಅನುದಾನ ನೀಡದೆ ಸತಾಯಿಸುತ್ತಿರುವ ಸಂಗತಿಯನ್ನು ಪಂಚಾಯತ್ ಅಧ್ಯಕ್ಷ ಉಪಾಧ್ಯಕ್ಷರೇ ಬಯಲಿಗೆ ಎಳೆದಿದ್ದಾರೆ. ಹೊಸ ಗ್ರಂಥಾಲಯ ಕಟ್ಟವಾದರೆ ಯಾರಿಗೆ ಹೆಚ್ಚಿನ ನಷ್ಟವಾಗಲಿದೆ ಎನ್ನುವುದೇ ಅರ್ಥವಾಗದಂತಾಗುತ್ತಿದೆ.

ಮಾರ್ಚ 2025 ರಲ್ಲಿ ಕಟ್ಟಡ ಕಾಮಗಾರಿ ಆರಂಭವಾಗದಿದ್ದರೆ, ಅನುದಾನ ವಾಪಾಸ್ ಆಗಲಿದೆ ಎಂಬ ಆತಂಕ ಶುರುವಾಗಿದೆ.ಅಕ್ಷರ ಬೆಳಕನ್ನು ಗ್ರಾಮದ ಮಕ್ಕಳು, ಹಿರಿಯರಿಗೆ, ಯುವಕರಿಗೆ ತಲುಪಲಿ ಎಂಬ ಆಶಯದೊಂದಿಗೆ ಪ್ರಾರಂಭವಾದ ಗ್ರಾಮ ಪಂಚಾಯಿತಿ ಗ್ರಂಥಾಲಯ ನೂತನ ಕಟ್ಟಡಕ್ಕೆ ಕಾಣದ ದಳಗಳು ಅಡ್ಡಿಯಾಗಿವೆ ಎಂಬ ಗುಸು ಗುಸು ಚರ್ಚೆ ಪ್ರಾರಂಭವಾಗಿವೆ.‌ ಪ್ರತಿ ಪಕ್ಷದ ಸ್ಥಾನದಲ್ಲಿರುವ ಸ್ಥಳೀಯ ಶಾಸಕರು ತಮ್ಮ ಕ್ಷೇತ್ರಕ್ಕೆ ಬಂದ ಅನುದಾನವನ್ನು ಎರಡು ತಿಂಗಳಾದರೈ ಬಳಸಿಕೊಳ್ಳದಿರುವುದು ತಾಲೂಕಾ ಪಂಚಾಯದಿಂದ ಅನುಮೋದನೆ ಕೊಡಿಸದಿರುವುದು ದುರಂತ ಎಂದು ಜ‌ನ ಆಡಿಕೊಳ್ಳುತ್ತಿದ್ದಾರೆ.

ಇನ್ನೂ ಎರಡು ತಿಂಗಳಾದರೂ ಕಾಮಗಾರಿ ಆರಂಭವಾಗದೆ ಇರುವ ಬಗ್ಗೆ ವಾಲಗಳ್ಳಿ ಗ್ರಾಮ‌ ಪಂಚಾಯತದಿಂದ ಈಗಾಗಲೇ ಜಿಲ್ಲಾ ಪಂಚಾಯತ ಮುಖ್ಯಕಾರ್ಯನಿರ್ವಹಣಾಧಿಕಾತಿಗಳಿಗೆ ಪತ್ರ ಬರೆದಿದ್ದಾರೆ‌. ಆದರೂ ಸಹ ಆ ಬಗ್ಗೆ ಇನ್ನೂ ಚಾಲನೆ ಸಿಕ್ಕಿಲ್ಲ. ಈಗಾಗಲೇ ಪಂಂಚಾಯತ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಂಥಾಲಯ ತೀರಾ ಚಿಕ್ಕದಾಗಿದ್ದು,ಓದುಗರಿಗೆ ಸಮಸ್ಯೆ ಉಂಟಾಗುತ್ತಿದೆ.ಮಾರ್ಚ್ ಒಳಗಡೆ ಕಾಮಗಾರಿ ಆರಂಭವಾಗದೆ ಇದ್ದಲ್ಲಿ ಮಂಜೂರಾಗಿರುವ ನಾಲ್ಕು ಲಕ್ಷ ಅನುಧಾನ ವಾಪಸ್ ಆಗಲಿದೆ.ಈಗ ಇರುವ ಗ್ರಂಥಾಲಯದಲ್ಲಿ ಸ್ಥಳವಿಲ್ಲದೆ. ಸರಕಾರದಿಂದ ಬಂದಿರುವ ಸಾಮಗ್ರಿಗಳನ್ನ ಗ್ರಾಮ‌ ಪಂಚಾಯತ ಕಟ್ಟದಲ್ಲಿ ಇಡಲಾಗಿದೆ. ಹೀಗಾಗಿ ವಾಲಗಳ್ಳಿಯಂತಹ ಗ್ರಾಮೀಣ ಭಾಗದ‌ ಜನರಲ್ಲಿ ಅಕ್ಷರ ಜ್ಞಾನ ಇನ್ನಷ್ಟು ಹೆಚ್ಚಿಸಲು ಹೊಸ ಕಟ್ಟಡ ಅನಿರ್ವಾಯತೆ ಇದೆ.

ಗಮನಿಸಿ