ಸುದ್ದಿಬಿಂದು ಬ್ಯೂರೋ ವರದಿ
ಭಟ್ಕಳ :ಚಿತ್ರಕಲಾ ಗ್ರೇಡ್ ಪರೀಕ್ಷೆಯ ಮೌಲ್ಯಮಾಪನಕ್ಕಾಗಿ ಹೊರಟಿದ್ದ ಶಿಕ್ಷಕರ ಕಾರು ಅಪಘಾತವಾಗಿದ್ದು ಕಾರಿನಲ್ಲಿದ್ದ ಶಿಕ್ಷಕ ನೋರ್ವ ಮೃತಪಟ್ಟಿರುವ ಘಟನೆ ಮಾವಿನಗುಂಡಿ ಬಳಿ ನಡೆದಿದೆ.
ಇಂದು ಆರು ಮಂದಿ ಶಿಕ್ಷಕರು ದಾವಣಗೆರೆಗೆ ಹೋಗುತ್ತಿದ್ದು. ಮಾವಿನಗುಂಡಿ ದಾಟಿ ಚಲಿಸುತ್ತಿರುವಾಗ ಅವರ ಕಾರು ಅಪಘಾತ ಸಂಬವಿಸಿದ್ದು. ಕಾರಿನಲ್ಲಿದ್ದ ಮಂಜುನಾಥ ದೇವಾಡಿಗ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಇನ್ನೂ ಕಾರಿನಲ್ಲಿದ್ದ ಐವರು ಶಿಕ್ಷಕರು ಗಾಯಗೊಂಡಿದ್ದು,ಅವರನ್ನು ಸಿದ್ದಾಪುರದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಗಾಗಿ ಬೇರೆ ಬೇರೆ ಕಡೆ ಸಾಗಿಸಲಾಗಿದೆ.
ಅಪಘಾತಕ್ಕೆ ಒಳಗಾದ ಎಲ್ಲರೂ ಭಟ್ಕಳ ತಾಲೂಕಿನ ಚಿತ್ರಕಲಾ ಶಿಕ್ಷಕರಾಗಿದ್ದಾರೆ.ರಸ್ತೆಯಲ್ಲಿ ಸಂಚರಿಸುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ತಿರುವಿನಲ್ಲಿ ಪಲ್ಟಿಯಾಗಿದೆ. ನಂತರ ಕಾರು ಮರಕ್ಕೆ ಹೋಗಿ ಗುದ್ದಿದೆ. ಕಾರು ಮರಕ್ಕೆ ಗುದ್ದಿದ ರಭಸಕ್ಕೆ ಮಂಜುನಾಥ ದೇವಾಡಿಗ ಸಾವನಪ್ಪಿದ್ದಾರೆ.
ಗಮನಿಸಿ
- Teacher suspended/ವಿದ್ಯಾರ್ಥಿಗೆ ಥಳಿಸಿದ ಪ್ರಕರಣ : ಶಿಕ್ಷಕಿ ಅಮಾನತು.
- Varamahalakshmi Festival, ಶ್ರಾವಣದ ಶುಕ್ರವಾರ, ಮನೆ ಮನೆಗಳಲ್ಲಿ ವರಮಹಾಲಕ್ಷ್ಮಿ ಭಕ್ತಿ ಸಡಗರ
- Teacher/ಪಾಠ ಕಲಿಯಲಿಲ್ಲ ಎಂಬ ಕಾರಣಕ್ಕೆ ವಿದ್ಯಾರ್ಥಿಗೆ ಥಳಿತ : ಬಾಸುಂಡೆ ಮೂಡಿಸಿದ ಶಿಕ್ಷಕಿ
- ಭಟ್ಕಳದ ಹಳೆಯ ಕಾಲ ಮುಕ್ತಾಯ – ನಗರಸಭೆಯ ಹೊಸ ಯುಗ ಆರಂಭ ! ಮಂಕಾಳು ವೈದ್ಯ ಸಚಿವರಾದ ಬಳಿಕ ಭಟ್ಕಳಿಗರ ಕನಸು ನನಸು