ಸುದ್ದಿಬಿಂದು ಬ್ಯೂರೋ ವರದಿ
ಮುರುಡೇಶ್ವರ: ರಾಜ್ಯದ ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ(DKC)ಅವರು ಇಂದು ಮುರುಡೇಶ್ವರ ನೇತ್ರಾಣಿ ದ್ವೀಪಕ್ಕೆ( Nethrani Island) ತೆರಳಿ ಸ್ಕೂಬಾ ಡೈವಿಂಗ್ ಸ್ಥಳದಲ್ಲಿ ಕೆಲ ಸಮಯ ಕಾಲಕಳೆದರು.
- ಬರ್ಗಿಯಲ್ಲಿ ತಪ್ಪಿದ್ದ ಮತ್ತೊಂದು ಬೆಂಕಿ ದುರಂತ
- ನಿವೃತ್ತ PWD ಅಧಿಕಾರಿ ಅಳ್ವೆಕೋಡಿಯ ಜೈಯಂತ ಪಟಗಾರ ವಿಧಿವಶ
- ದೀಪಾವಳಿ ಹಬ್ಬಕ್ಕೆ ಅಂದರ್ ಬಾಹರ್ ಆಟಕ್ಕೆ ಅನುಮತಿ ಕೊಡಿ..!
- ಕೊಟ್ಟಿಗೆಯೊಳಗೆ ನುಗ್ಗಿದ ಚಿರತೆ : ರಕ್ತದ ಮಡಿಲಲ್ಲಿ ಎರಡು ಕರುಗಳ ಸಾವು
ಮುರುಡೇಶ್ವರ ಕಡಲ ತೀರದಿಂದ ಸುಮಾರು 22ಕಿಲೋ ಮೀಟರ್ ದೂರ ಇರುವ ನೇತ್ರಾಣಿ ದ್ವೀಪ ವೀಕ್ಷಣೆಗಾಗಿ ಬೋಟ್ ಮೂಲಕ ಪತ್ನಿ ಉಷಾ,ಪತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ, ಶಿರಸಿ ಶಾಸಕ ಭೀಮಣ್ಣ ನಾಯ್ಕ, ಜೊತೆ ಬೋಟ್ ಮೂಲಕ ತೆರಳಿ ಕೆಲ. ಸಮಯ ನೇತ್ರಾ ದ್ವೀಪದ ಸುತ್ತ ಬೋಟ್ ಮೂಲಕ. ಸುತ್ತಾಡಿದ್ದರು.
ಬಳಿಕ ಮಾಧ್ಯಮದರೊಂದಿಗೆ ಮಾತ್ನಾಡಿದ ಡಿಕೆ ಶಿವಕುಮಾರ ನೇತ್ರಾಣಿಯಲ್ಲಿ ಸ್ಕೂಬ್ ಡೈವಿಂಗ್ ಮಾಡೋದನ್ನ ಟಿವಿಯಲ್ಲಿ ನೋಡಿದ್ದೆ. ಮನೆಯವರು ಸಹ ಬಹಳದಿನಗಳಿಂದ ನೇತ್ರಾಣಿ ವೀಕ್ಷಣೆ ಮಾಡಬೇಕು ಅಂತಾ ಇದ್ದರು. ನನಗೂ ಆಸೆ ಇತ್ತು. ಅದಕ್ಕೆ ಇಂದು ಕಾಲ ಕೂಡಿ ಬಂತು..ಇಲ್ಲಿನ ಕಡಲ ತೀರ ಯಾವ ಗೋವಾಗಿಂತ ಏನು ಕಮ್ಮಿಯಿಲ್ಲ.ಇಲ್ಲಿನ ಕಡಲ ತೀರ ನೋಡಿ ಮನಸ್ಸಿಗೆ ನೆಮ್ಮದಿಸಿಕ್ಕಂತಾಗಿದೆ.ಇಲ್ಲಿನ ಪ್ರವಾಸೋದ್ಯಮದ ಬಗ್ಗೆ ಇನ್ನೂ ಹೆಚ್ಚಿನ ಪ್ರಚಾರ ಸಿಗಬೇಕು ಎಂದರು.