ಸುದ್ದಿಬಿಂದು ಬ್ಯೂರೋ
Sirsi: ಶಿರಸಿ : ಉತ್ತರಕನ್ನಡ (Uttarkannada) ಜಿಲ್ಲೆಯ ಶಾಲ್ಮಲಾ‌ ನದಿಯ(Shalmala river) ಬೂತದಗುಂಡಿಯಲ್ಲಿ ಈಜಲು ಹೋಗಿದ್ದ ಒಂದೆ‌ ಕುಟುಂಬದ ಐವರು ಮುಳುಗಡೆಯಾಗಿದ್ದು,ನಾಲ್ವರ ಶವ ಪತ್ತೆಯಾಗಿದ್ದು, ಇನ್ನಿಬ್ಬರಿಗಾಗಿ ಹುಡುಕಾಟ ನಡೆಸಲಾಗುತ್ತದೆ.

ಸಲೀಮ್ (44), ನಾದಿಯಾ ಶೇಖ್ (20), ಮಿಸ್ಬಾ‌ ತಬಸುಮ್ (21) ಎಂಬುವವರ ಶವ ಪತ್ತೆಯಾಗಿದೆ. ಶಿರಸಿ ನಗರದ ಕಸ್ತೂರಬಾ ನಗರ ಹಾಗೂ ರಾಮನಬೈಲಿನ ಐದು ಮಂದಿ ನೀರು ಪಾಲಾಗಿದ್ದರು.

ಮೃತರ ಕುಟುಂಬದ 25 ಮಂದಿ ಪಿಕ್ನಿಕ್‌ಗೆ ಅಂತಾ ನಾನ್ ವೆಜ್ ಊಟ ಸಿದ್ದ‌ಪಡಿಸಿಕೊಂಡಿ ನದಿ‌ ತಟದಲ್ಲಿ ಕುಳಿತು ಊಟ ಮಾಡಲು ಹೋಗಿದ್ದರು ಎನ್ನಲಾಗಿದೆ. ಇವರು ಊಟ ಮಾಡಲು ಕುಳಿತ್ತಿದ್ದ‌ ಸ್ಥಳದಲ್ಲಿ ದೈವಿ ಶಕ್ತಿ ಇದೆ ಎನ್ನಲಾಗಿದೆ. ಆದರೆ ಯಾರು ‌ಸಹ ಇಲ್ಲಿಗೆ ನಾನ್ ವೇಜ್ ಊಟ ತೆದುಕೊಂಡು ಹೋಗುತ್ತಿರಲಿಲ್ಲವಂತೆ. ಈ ನದಿ ಮುಂದೆ ಸಹಸ್ರಲಿಂಗವನ್ನ ಸೇರಿಕೊಳ್ಳುತ್ತದೆ. ದೈವಿ ಸ್ಥಳವಾಗಿರುವುದರಿಂದ ಈ ದುರಂತ ನಡೆದಿದೆ ಅಲ್ಲಿನ ಸ್ಥಳೀಯರು ಆಡಿಕೊಳ್ಳುತ್ತಿದ್ದಾರೆ.

ಸ್ಥಳದಲ್ಲಿ ಬಿಡು ಬಿಟ್ಟಿರುವ ಶಿರಸಿ ಗ್ರಾಮೀಣ ಠಾಣೆಯ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗಳು ನಾಲ್ವರ ಶವ ಮೇಲಕ್ಕೆ ಎತ್ತಿದ್ದು, ಇನ್ನೂ ಒಬ್ಬರಿಗಾಗಿ ಹುಡುಕಾಟ ಮುಂದುವರೆಸಿದ್ದಾರೆ.