ಸುದ್ದಿಬಿಂದು ಬ್ಯೂರೋ ವರದಿ(suddibindu Digital News)
ಚಿತ್ರದುರ್ಗ: ಅಡಿಕೆ ವ್ಯಾಪಾರಿಗೆ ಉದ್ಯಮಿ ಓರ್ವ ಹಣ ಕೊಟ್ಟಿಲ್ಲವೆಂದು ಉದ್ಯಮಿಯ ಹೆಸರು ಬರೆದಿಟ್ಟು ವ್ಯಾಪಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಸಿದ್ದಾಪುರದಲ್ಲಿ ನಡೆದಿದೆ.
ಅಡಿಕೆ ವ್ಯಾಪಾರಿ ಶೈಲೈಶ್ ಎಂಬಾತನೆ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯಾಗಿದ್ದಾನೆ. ಈತ ಉದ್ಯಮಿ ಉದಯ್ ಶೆಟ್ಟಿ ಹೆಸರು ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ್ಮ ಹತ್ಯೆ ಮಾಡಿಕೊಂಡ ಶೈಲೈಶ್ ಎಂಬುವವರು ಕೋಟ್ಯಾಂತರ ಬೆಲೆಯ ಅಡಿಕೆಯನ್ನ ಉದಯ್ ಶೆಟ್ಟಿ ಎಂಬುವವರಿಗೆ ಅಡಿಕೆ ಕೊಟ್ಟಿದ್ದರು ಎನ್ನಲಾಗಿದೆ.ಆದರೆ ಅಡಿಕೆ ಖರೀದಿ ಮಾಡಿದ ಉದ್ಯಮಿ ವ್ಯಾಪಾರಿಗೆ ಹಣ ನೀಡದೆ ವಂಚನೆ ಮಾಡಿದ್ದ ಎನ್ನಲಾಗಿದೆ.
ಹಾಸನ ಮೂಲದ ಅಡಿಕೆ ವರ್ತಕ ಉದಯ್ ಶೆಟ್ಟಿ ಎಂಬಾತ 6 ಕೋಟಿ, 60 ಲಕ್ಷ ವಂಚನೆ ಮಾಡಿದ ಉದ್ಯಮಿಯಾಗಿದ್ದಾನೆಂದು ವ್ಯಾಪಾರಿ ಬರೆದಿಟ್ಟ ಪತ್ರದಲ್ಲಿ ಬಹಿರಂಗವಾಗಿದೆ. ಶೈಲೈಶ್ ಆತ್ಮಹತ್ಯೆಗೆ ಕಾರಣ ಎನ್ನಲಾಗಿರುವ ಉದಯ್ ಶೆಟ್ಟಿ ಬಂಧನಕ್ಕೆ ಮೃತ ಶೈಲೇಶ್ ಸಹೋದರ ಸಂತೋಷ್ ಒತ್ತಾಯಿಸಿದ್ದಾರೆ..
ಉದಯಶೆಟ್ಟಿಗೆ ರಾಜಕೀಯ ಪ್ರಭಾವ, ಹಣ ಬಲ ಇದೆ, ಕೂಡಲೇ ಆತನ ಬಂಧಿಸಬೇಕು. FIR ದಾಖಲಿಸದಂತೆ ನಮ್ಮ ಮೇಲೂ ಒತ್ತಡ ಹಾಕಿದ್ದರು. ಮುಂದೆ ಯಾವುದೇ ವರ್ತಕರಿಗೆ ಈ ಮೋಸ ಆಗಬಾರ್ದು ಎಂದು FIR ಮಾಡಿದ್ದೇವೆ.ನಮ್ಮ ಅಣ್ಣ ಹಣ ಕೇಳಲು ಹೋದಾಗ ಬೈದು ಕಳಿಸಿದ್ದಾರೆ. ಅದರಿಂದ ಮನನೊಂದು ಡೆತ್ ನೋಟ್ ಬರೆದು ಶೈಲೇಶ್ ಮೃತಪಟ್ಟಿದ್ದಾರೆ.ಉದಯ ಶೆಟ್ಟಿ ಎಸ್ಕೇಪ್ ಆಗಿದ್ದು ಕೂಡಲೇ ಬಂಧಿಸಬೇಕು ಎಂದು ಸಂತೋಷ್ ಒತ್ತಾಯಿದ್ದಾರೆ..
ಗಮನಿಸಿ