ಬಿಯರ್ ಜೊತೆಗೆ ವಿಸ್ಕಿ ಅಥವಾ ವೈನ್ ಅನ್ನು ಬೆರೆಸಿ ಕುಡಿತಾ ಇದ್ದೀರಾ.? ಒಮ್ಮೆ‌ ನೀವು ಹಾಗೇನದ್ರೂ ಮಾಡಿ‌ಕುಡಿತಾ ಇದ್ದರ ಅದರಿಂದ‌ ಏನಾಗತ್ತೆ ‌ಅಂತಾ ಏನಾದ್ರೂ ತಿಳಿದುಕೊಳ್ಳುವ ಪ್ರಯತ್ನ ಮಾಡಿದ್ದರಾ.?

ಬಿಯರ್, ವಿಸ್ಕಿ,‌ ವೈನ್ ಒಟ್ಟಿಗೆ ಸೇವಿಸುವುದರಿಂದ ನಿರ್ಜಲೀಕರಣದ ಸಮಸ್ಯೆ ಹೆಚ್ಚಾಗುತ್ತದೆ. ಅದರಲ್ಲೂ ರಾತ್ರಿ ಕುಡಿದು ಮಲಗಿದರೆ ಬೆಳಗಿನ ಜಾವ ದೇಹದಲ್ಲಿ ಹಲವಾರು ಸಮಸ್ಯೆಗಳಿಗೆ ಕಾರಣವಾಗುತ್ತದೆ. ವಿಶೇಷವಾಗಿ ನಿರ್ಜಲೀಕರಣದಿಂದಾಗಿ ಮೆದುಳಿನ ಕಾರ್ಯವು ಪರಿಣಾಮ ಬೀರುತ್ತದೆ. ಆಲ್ಕೋಹಾಲ್ ದೇಹವನ್ನು ಪ್ರವೇಶಿಸಿದ ತಕ್ಷಣ, ಅದು ದೇಹದಿಂದ ನೀರನ್ನು ಹೊರಹಾಕುತ್ತದೆ. ವೈನ್ ಮತ್ತು ಬಿಯರ್ ಒಟ್ಟಿಗೆ ಕುಡಿಯುವುದು ಆರೋಗ್ಯಕ್ಕೆ ಭಾರೀ ಅಪಾಯ ಕಾರಿ ಎಂದು ತಜ್ಞರು ಈಗಾಗಲೆ ಹೇಳಿರುತ್ತಾರೆ. ಈ ಎರಡು ಪಾನೀಯಗಳನ್ನು ಸೇವಿಸುವುದರಿಂದ ತೊಂದರೆಗಳು ಹೆಚ್ಚಾಗುತ್ತವೆ ಎಂದು ಹೇಳಲಾಗುತ್ತದೆ.  ಮನುಷ್ಯನ ಮೆದುಳಿನ ಮೇಲೆ ತೀವ್ರ ಪರಿಣಾಮ ಬೀರುತ್ತದೆ ಎನ್ನಲಾಗಿದೆ. ಎರಡನ್ನೂ ಒಟ್ಟಿಗೆ ತೆಗೆದುಕೊಂಡರೆ, ವ್ಯಕ್ತಿಯು ಬೇಗನೆ ನಶೆಗೆ ಒಳಗಾಗುತ್ತಾನೆ ಎಂದು ಹೇಳಲಾಗುತ್ತದೆ.

ವಿಸ್ಕಿ ಮತ್ತು ಬಿಯರ್ ಅನ್ನು ಒಟ್ಟಿಗೆ ಸೇವಿಸಿದರೆ ವಾಂತಿ, ಭೇದಿಯಾಗುವ ಸಂಭವ ಹೆಚ್ಚು ಎಂದು ತಜ್ಞರು ಹೇಳಿರುತ್ತಾರೆ.‌ಆದರೂ ಒಂದಿನ ಜನ ಅದನ್ನೇ ರೂಡಿ ಮಾಡಿಕೊಂಡಿದ್ದಾರೆ. ಹೀಗೆ ಕುಡಿಯುವುದರಿಂದ ಜೀರ್ಣಕಾರಿ ಸಮಸ್ಯೆ ಹಾಗೂ ಮೂತ್ರಪಿಂಡದ ಕಾರ್ಯನಿರ್ವಹಣೆಯ ಮೇಲೆ ತೀವ್ರ ಪರಿಣಾಮ ಬೀರುತ್ತದೆ ಎಂದು ಹೇಳಲಾಗುತ್ತದೆ.

ಗಮನಿಸಿ